ರಾಧಿಕಾ ಪಂಡಿತ್-ಯಶ್ ಇಬ್ಬರದ್ದೂ ಒಂದೇ ಪಾಲಿಸಿ
ಕೆಲವು ನಟ ನಟಿಯರ ಸೀಕ್ರೆಟ್ ಗಳು ಗೊತ್ತಾಗೋದೇ ಇಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಹ್ಯಾಟ್ರಿಕ್ ಹೀರೋಯಿನ್ ರಾಧಿಕಾ ಪಂಡಿತ್ ವಿಷಯದಲ್ಲಿ ಹಾಗಿಲ್ಲ. ಈ ಸ್ಟಾರ್ ಗಳಿಬ್ಬರು ಧಾರವಾಹಿಯಿಂದ ಒಂದಾಗಿ ಆರಂಭಿಸಿದ ಕೆರಿಯರ್ ನಿಂದಲೇ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ಇತ್ತೀಚೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಾಧಿಕಾ ಇದನ್ನ ಬಯಲು ಮಾಡಿದ್ದಾರೆ ಅಂದ್ಕೋಬೇಡಿ. ರಾಧಿಕಾ ಪಂಡಿತ್ ಯಾವಾಗ್ಲೂ ಒಂದು ಸಿನಿಮಾ ಮುಗಿಸಿದ ನಂತರ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ತಾರೆ. ಯಾಕಂದ್ರೆ ಒಂದು ಸಿನಿಮಾದ ಬಗ್ಗೆ ಸಂಪೂರ್ಣ ಇನ್ವಾಲ್ ಮೆಂಟ್ ಕೊಟ್ಟಾಗ ಮತ್ತೊಂದು ಸಿನಿಮಾ ಡಿಸ್ಟರ್ಬ್ ಮಾಡಬಾರದು ಅನ್ನೋ ಕಾರಣಕ್ಕೆ. [ನನ್ನ ಪತಿ ಹೀಗಿರಬೇಕೆಂದು ರಾಧಿಕಾ ಹೇಳಿದ್ದು ಯಾರಿಗೆ?]

ಈ ಇಬ್ಬರೂ ಸ್ಟಾರ್ ಗಳ ಯಶಸ್ಸಿನ ಸೀಕ್ರೆಟ್ ಅಂದ್ರೆ ಒಂದಾದ ನಂತತ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ಳೋದು. ಅದಕ್ಕೆ ಇರಬೇಕು ಯಶ್-ರಾಧಿಕಾ ಪಂಡಿತ್ ಅಭಿನಯದ ಹೆಚ್ಚಿನ ಸಿನಿಮಾಗಳು ಸಕ್ಸಸ್ ಪಡ್ಕೋತಿವೆ. ಬೇರೇ ಸ್ಟಾರ್ ಗಳೂ ಈ ಪಾಲಿಸಿಯನ್ನ ಪಾಲಿಸಿದ್ರೆ ಸಕ್ಸಸ್ ಕಷ್ಟವಿಲ್ಲ ಅಲ್ವಾ?


Click it and Unblock the Notifications











