For Quick Alerts
  ALLOW NOTIFICATIONS  
  For Daily Alerts

  ಅದು ಬಿಟ್ಟು, ಇದು ಬಿಟ್ಟು, ಮತ್ಯಾವುದು? ಯಶ್-ರಾಧಿಕಾ ಚಿತ್ರದ ಹೆಸರು?

  By Harshitha
  |

  ಹೇಳಿ ಕೇಳಿ, ಇದು ಸೂಪರ್ ಹಿಟ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ಅಭಿನಯಿಸುತ್ತಿರುವ ನಾಲ್ಕನೇ ಸಿನಿಮಾ.

  ಅದ್ರಲ್ಲೂ, ಯಶ್ ವೃತ್ತಿಬದುಕಿಗೆ ದೊಡ್ಡ ತಿರುವು ಕೊಟ್ಟ ನಿರ್ಮಾಪಕ ಕೆ.ಮಂಜು ಬಂಡವಾಳ ಹೂಡುತ್ತಿರುವ ಚಿತ್ರ.

  ಹೀಗಾಗಿ, ಈ ಚಿತ್ರ ಅನೌನ್ಸ್ ಆದಾಗಿನಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಎಸ್ಪೆಷಲಿ...ಟೈಟಲ್ ವಿಚಾರಕ್ಕೆ. ['ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?]

  ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿರುವ ನಟಿ ರಾಧಿಕಾ ಪಂಡಿತ್, ತಮ್ಮ ಹೊಸ ಚಿತ್ರದ ಶೀರ್ಷಿಕೆ ಬಾಯ್ಬಿಟ್ಟಿದ್ದಾರೆ. ಹಾಗಾದ್ರೆ, ಚಿತ್ರದ ಹೆಸರೇನು? ತಿಳಿಯಲು ಕೆಳಗಿರುವ ಸ್ಲೈಡ್ಸ್ ಕ್ಲಿಕ್ ಮಾಡಿ....

  ಚಿತ್ರದ ಹೆಸರು....

  ಚಿತ್ರದ ಹೆಸರು....

  ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು 'ಸಂತು Straight Forward' ಅಂತ. ಹಾಗಂತ ಖುದ್ದು ಟ್ವೀಟ್ ಮಾಡಿದ್ದಾರೆ ನಟಿ ರಾಧಿಕಾ ಪಂಡಿತ್. [ಯಶ್-ರಾಧಿಕಾ ಪಂಡಿತ್ ಚಿತ್ರದ ಟೈಟಲ್ ಮತ್ತೆ ಬದಲಾಯಿತೆ?]

  ಟ್ವಿಟ್ಟರ್ ಲೋಕದಲ್ಲಿ ರಾಧಿಕಾ

  ಟ್ವಿಟ್ಟರ್ ಲೋಕದಲ್ಲಿ ರಾಧಿಕಾ

  ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯನ್ನು ಅನೌನ್ಸ್ ಮಾಡುವ ಮೂಲಕ ಟ್ವಿಟ್ಟರ್ ಲೋಕಕ್ಕೆ ನಟಿ ರಾಧಿಕಾ ಪಂಡಿತ್ ಕಾಲಿಟ್ಟಿದ್ದಾರೆ. [ಯಶ್ ಗೆ 'ಮಾಂಜಾ' ಕೊಡುತ್ತಾರಾ ತಿಲಕ್?]

  ರಾಧಿಕಾ ಪಂಡಿತ್ ಟ್ವೀಟ್

  ''ಕಡೆಗೂ ನಾನು ಟ್ವಿಟ್ಟರ್ ಜಗತ್ತಿಗೆ ಕಾಲಿಟ್ಟಿದ್ದೇನೆ. ಅದು 'ಸಂತು Straight Forward' ಮೂಲಕ. ನಿಮ್ಮ ಸ್ವಾಗತಕ್ಕೆ ನಾನು ಆಭಾರಿ'' ಅಂತ ನಟಿ ರಾಧಿಕಾ ಪಂಡಿತ್ ಟ್ವೀಟ್ ಮಾಡಿದ್ದಾರೆ.

  ಅದು ಇಲ್ಲ, ಇದೂ ಅಲ್ಲ!

  ಅದು ಇಲ್ಲ, ಇದೂ ಅಲ್ಲ!

  ಈ ಹಿಂದೆ ಇದೇ ಚಿತ್ರಕ್ಕೆ 'ಮಾಂಜಾ' ಹಾಗೂ 'ಗಾಂಧಿಕ್ಲಾಸ್' ಶೀರ್ಷಿಕೆಗಳು ಇಡಲಾಗಿದೆ ಅಂತ ವರದಿ ಆಗಿತ್ತು. ರಾಧಿಕಾ ಪಂಡಿತ್ ಮಾಡಿರುವ ಟ್ವೀಟ್ ನಿಂದ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.

  ಚಿತ್ರದಲ್ಲಿ ಸ್ಟೈಲಿಶ್ ವಿಲನ್

  ಚಿತ್ರದಲ್ಲಿ ಸ್ಟೈಲಿಶ್ ವಿಲನ್

  'ಸಂತು Straight Forward' ಚಿತ್ರದಲ್ಲಿ ಸ್ಟೈಲಿಶ್ ವಿಲನ್ ಆಗಿ ಕಾಲಿವುಡ್ ನ ಖ್ಯಾತ ನಟ ಶ್ಯಾಮ್ ಕಾಣಿಸಿಕೊಳ್ಳುತ್ತಿದ್ದಾರೆ. 'ತನನಂ ತನನಂ' ಹಾಗೂ 'ಗೇಮ್' ಚಿತ್ರಗಳಲ್ಲಿ ಶ್ಯಾಮ್ ನಟಿಸಿರುವುದು ನಿಮಗೆ ನೆನಪಿರಬೇಕು. [ಯಶ್-ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ಸ್ಟೈಲಿಷ್ ವಿಲನ್ ಎಂಟ್ರಿ]

  ಯಶ್ - ರಾಧಿಕಾ ನಾಲ್ಕನೇ ಸಿನಿಮಾ

  ಯಶ್ - ರಾಧಿಕಾ ನಾಲ್ಕನೇ ಸಿನಿಮಾ

  'ಮೊಗ್ಗಿನ ಮನಸ್ಸು', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಂತರ 'ಸಂತು Straight Forward' ನಲ್ಲಿ ಯಶಸ್ವಿ ಜೋಡಿ ಯಶ್-ರಾಧಿಕಾ ಪಂಡಿತ್ ಮತ್ತೆ ತೆರೆಮೇಲೆ ಒಂದಾಗುತ್ತಿದ್ದಾರೆ. ಹೀಗಾಗಿ, ಚಿತ್ರದ ಮೇಲೆ ನಿರೀಕ್ಷೆ ಸ್ವಲ್ಪ ಜಾಸ್ತಿ.

  ಮಹೇಶ್ ರಾವ್ ನಿರ್ದೇಶನ

  ಮಹೇಶ್ ರಾವ್ ನಿರ್ದೇಶನ

  'ಮುರಳಿ ಮೀಟ್ಸ್ ಮೀರಾ', 'ಕೇಸ್ ನಂ 18/9' ಚಿತ್ರಗಳನ್ನ ನಿರ್ದೇಶಸಿರುವ ಮಹೇಶ್ ರಾವ್, 'ಸಂತು Straight Forward' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಶೂಟಿಂಗ್ ಯಾವಾಗ್ಲಿಂದ?

  ಶೂಟಿಂಗ್ ಯಾವಾಗ್ಲಿಂದ?

  ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ 'ಸಂತು Straight Forward' ಚಿತ್ರದ ಶೂಟಿಂಗ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

  English summary
  Rocking Star Yash and Kannada Actress Radhika Pandit starrer new movie is titled as 'Santhu Straight Forward'. The movie is directed by Mahesh Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X