For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್ ಕೈನಲ್ಲಿದೆ ಪತ್ನಿ ರಾಧಿಕಾ ಸಿನಿಮಾ ಟ್ರೈಲರ್

  |

  ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅಭಿನಯದ 'ಅದಿ ಲಕ್ಷ್ಮಿ ಪುರಾಣ' ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಮದುವೆ ನಂತರ ರಾಧಿಕಾ ಅಭಿನಯದ ಸಿನಿಮಾ ಎನ್ನುವ ವಿಶೇಷ ಆದ್ರೆ, ಜೊತೆಗೆ ರಾಧಿಕಾ ಪಂಡಿತ್ ಸಿನಿಮಾ ರಿಲೀಸ್ ಆಗದೆ ವರ್ಷಗಳೆ ಆಗಿವೆ. ಹಾಗಾಗಿ ತೆರೆಮೇಲೆ ರಾಧಿಕಾ ಅವರನ್ನು ನೋಡಲು ಅಭಿಮಾನಿಗಳು ಸಖತ್ ಎಕ್ಸಾಯಿಟ್ ಆಗಿದ್ದಾರೆ.

  ಸದ್ಯ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿರುವ 'ಆದಿ ಲಕ್ಷ್ಮಿ ಪುರಾಣ' ಚಿತ್ರತಂಡ, ಚಿತ್ರದ ಟ್ರೈಲರ್ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಟ್ರೈಲರ್ ರಿಲೀಸ್ ನ ವಿಶೇಷತೆ ಅಂದ್ರೆ ರಾಧಿಕಾ ಪತಿ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.

  ರಾಧಿಕಾ ಪಂಡಿತ್ ಅಭಿನಯದ 'ಆದಿ ಲಕ್ಷ್ಮಿ ಪುರಾಣ' ಚಿತ್ರದ ಆಡಿಯೋ ರಿಲೀಸ್ ಡೇಟ್ ಫಿಕ್ಸ್

  ಇದೆ ತಿಂಗಳು ಜುಲೈ 12ಕ್ಕೆ ಚಿತ್ರದ ಟ್ರೈಲರ್ ರಾಕಿ ಭಾಯ್ ಕೈಯಿಂದ ಬಿಡುಗಡೆಯಾಗಲಿದೆ. ಟ್ರೈಲರ್ ರಿಲೀಸ್ ಮಾಡಿ ಪತ್ನಿಯ ಸಿನಿಮಾಗೆ ಶುಭ ಹಾರೈಸಲಿದ್ದಾರೆ ಯಶ್. 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ ಈಗ 'ಆದಿ ಲಕ್ಷ್ಮಿ ಪುರಾಣ' ಸಿನಿಮಾ ಟ್ರೈಲರ್ ರಿಲೀಸ್ ಮೂಡುವ ಮೂಲಕ ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

  ಅಂದ್ಹಾಗೆ 'ಆದಿ ಲಕ್ಷ್ಮಿ ಪುರಾಣ' ಪ್ರಿಯಾ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ರಾಧಿಕಾ ಪಂಡಿತ್ ಗೆ ಇಲ್ಲಿ ಜೋಡಿಯಾಗಿ 'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಬಣ್ಣಹಚ್ಚಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಆದಿ ಲಕ್ಷ್ಮಿ ಪುರಾಣ ಜುಲೈ 19ಕ್ಕೆ ತೆರೆಗೆ ಬರುತ್ತಿದೆ.

  English summary
  Kannada actress Radhika Pandith starrer Aadi Lakshmi Purana trailer will release by Rocking Yash. This movie is directed priya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X