»   » ರಾಕಿಂಗ್ ಸ್ಟಾರ್ ಬರ್ತಡೇಗೆ ಸರಳವಾಗಿ ವಿಶ್ ಮಾಡಿದ ಮಿಸಸ್ ಯಶ್

ರಾಕಿಂಗ್ ಸ್ಟಾರ್ ಬರ್ತಡೇಗೆ ಸರಳವಾಗಿ ವಿಶ್ ಮಾಡಿದ ಮಿಸಸ್ ಯಶ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಇಂದು (ಜನವರಿ 8th) ತಮ್ಮ 32ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳು ಯಶ್ ಮನೆ ಮುಂದೆ ಜಮಾಯಿಸಿದ್ದು, ತಮ್ಮ ನೆಚ್ಚಿನ ನಟನನ್ನ ನೋಡಿ ಶುಭ ಕೋರಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ತಮ್ಮ ಗಂಡನಿಗೆ ಫೇಸ್ ಬುಕ್ ನಲ್ಲಿ ಜನುಮದಿನದ ಶುಭಾಶಯ ತಿಳಿಸಿದ್ದಾರೆ. ಮದುವೆಯ ನಂತರ ಇದು ಯಶ್ ಅವರಿಗೆ ಎರಡನೇ ಬರ್ತಡೇ ಸಂಭ್ರಮ.

ಬರ್ತಡೇ ವಿಶೇಷವಾಗಿ ಯಶ್ ಅವರಿಗೆ ರಾಧಿಕಾ ಪಂಡಿತ್ ಏನು ಗಿಫ್ಟ್ ನೀಡರಬಹುದು ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ. ಸದ್ಯ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇತ್ತೀಚೆಗಷ್ಟೇ ಯಶ್ ತಮ್ಮ ಕುಟುಂಬದ ಸದಸ್ಯರಿಗೆ ಮೂರು ಬೆಂಜ್ ಕಾರು ಖರೀದಿಸಿದ್ದರು.

ಭಾವ ಯಶ್ ಗೆ ಬಾಮೈದ ಪ್ರಥಮ್ ನಿಂದ ಸಂತಾನ ಸಲಹೆ

Radhika pandith wish to her husband yash

ಹುಟ್ಟುಹಬ್ಬಕ್ಕೆ ಸಹೋದರಿ ಹಾಗೂ ಭಾವ ಅವರಿಂದ ವಾಚ್ ಉಡುಗೊರೆಯಾಗಿ ಸಿಕ್ಕಿದೆ ಎಂದು ಮಿಸ್ಟರ್ ರಾಮಾಚಾರಿ ಹೇಳಿದರು. ಯಶ್ ಮತ್ತು ರಾಧಿಕಾ ಇಬ್ಬರಿಗೂ ಪ್ರತ್ಯೇಕವಾಗಿ ವಾಚ್ ಗಿಫ್ಟ್ ನೀಡಿದ್ದಾರೆ.

ಯಶ್ ಹೊಸ ಕಾರನ್ನ ಮೊದಲು ಓಡಿಸೋದು ಇವರೇ

Radhika pandith wish to her husband yash

ಸದ್ಯ, ಯಶ್ ನಟಿಸುತ್ತಿರುವ 'ಕೆ.ಜಿ.ಎಫ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಆಗಿದೆ. ಮುಂದಿನ ತಿಂಗಳು ಟ್ರೈಲರ್ ಬಿಡುಗಡೆಯಾಗಲಿದ್ದು, ಆದಷ್ಟೂ ಬೇಗ ಸಿನಿಮಾ ಕೂಡ ತೆರೆಮೇಲೆ ಬರಲಿದೆ.

English summary
Kannada actress Radhika pandith has taken her facebook account to wish her husband yash. Rocking star yash celebrating his 32nd birthday on january 8th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X