For Quick Alerts
  ALLOW NOTIFICATIONS  
  For Daily Alerts

  ನಾನು-ಯಶ್ ಪರ್ಫೆಕ್ಟ್ ಜೋಡಿ ಅಲ್ಲ: ರಾಧಿಕಾ ಪಂಡಿತ್ ಸರ್ಪ್ರೈಸ್

  |
  ರಾಧಿಕಾ ಪಂಡಿತ್: ನಾನು-ಯಶ್ ಪರ್ಫೆಕ್ಟ್ ಜೋಡಿ ಅಲ್ಲ

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಮೇಡ್ ಫಾರ್ ಈಚ್ ಅದರ್ ಎಂದು ಕೋಟ್ಯಾಂತರ ಅಭಿಮಾನಿಗಳು ಹೇಳ್ತಾರೆ. ಮದುವೆಗೂ ಮುಂಚೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾಗ ''ಇಬ್ಬರದ್ದು ಜೋಡಿ ಚೆನ್ನಾಗಿದೆ, ಮದ್ವೆ ಆದ್ರೆ ಚೆನ್ನಾಗಿರುತ್ತೆ'' ಎಂದು ಆಸೆ ಪಟ್ಟವರು ಇದ್ದಾರೆ.

  ನಂತರ ಯಶ್ ಮತ್ತು ರಾಧಿಕಾ ಮದುವೆ ಆಗಿದ್ದು, ಈಗ ಅವರಿಬ್ಬರು ಖುಷಿಯಾಗಿರುವುದು ಗೊತ್ತಿರುವ ವಿಚಾರ. ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣು ಮಗುವಿದ್ದು, ಸುಖವಾಗಿದ್ದಾರೆ. ರಾಕಿಂಗ್ ದಂಪತಿ ಮದುವೆ ಆಗಿ ಎರಡು ವರ್ಷ ಆಗಿದೆ.

  ಯಶ್ ಗೆ ರಾಧಿಕಾ ಪಂಡಿತ್ ಮಾಡಿದ ವಿಶ್ ಹೀಗಿದೆ

  ಇದೀಗ, ರಾಧಿಕಾ ಪಂಡಿತ್ ''ನಾನು-ಯಶ್ ಪರ್ಫೆಕ್ಟ್ ಜೋಡಿ ಅಲ್ಲ'' ಎಂದಿದ್ದಾರೆ. ಹೌದು, ಹೀಗಂತ ಮಾತು ಆರಂಭಿಸಿರುವ ರಾಧಿಕಾ ಪಂಡಿತ್, ಪ್ರೇಮಿಗಳ ದಿನಕ್ಕೆ ಶುಭಕೋರಿದ್ದಾರೆ.

  ಫೇಸ್ ಬುಕ್ ಖಾತೆಯಲ್ಲಿ ವಿಶ್ ಮಾಡಿರುವ ರಾಧಿಕಾ, ''ನಮ್ಮದು ಪರ್ಫೆಕ್ಟ್ ಜೋಡಿ ಅಲ್ಲ. ನಮ್ಮ ಮಧ್ಯೆ ಜಗಳ, ವಾದ, ಭಿನ್ನಾಭಿಪ್ರಾಯ, ಕೆಲವು ವಿಷ್ಯಗಳಲ್ಲಿ ಪರಸ್ಪರ ಇಬ್ಬರ ನಡುವೆ ದ್ವೇಷವೂ ಇದೆ. ಇದೆಲ್ಲವನ್ನು ಮೀರಿದ ಪ್ರೀತಿ ನಮ್ಮಲ್ಲಿದೆ. ಇದೆಲ್ಲವನ್ನ ಮರೆಸುವಂತಹ ಪ್ರೀತಿ ಇದೆ'' ಎಂದು ತಮ್ಮಿಬ್ಬರ ನಡುವಿನ ಪ್ರೀತಿ ಎಷ್ಟು ಗಟ್ಟಿ ಎಂಬುದನ್ನ ತೋರಿಸಿದ್ದಾರೆ.

  ಟೀಸರ್: 2 ವರ್ಷದ ಬಳಿಕ ರಾಧಿಕಾ ಪಂಡಿತ್ ರೀ-ಎಂಟ್ರಿ

  ಎರಡು ವರ್ಷ ಬಳಿಕ ರಾಧಿಕಾ ಪಂಡಿತ್ ಅಭಿನಯದ 'ಆದಿಲಕ್ಷ್ಮಿಪುರಾಣ' ಸಿನಿಮಾ ತೆರೆಕಾಣುತ್ತಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನ ಪ್ರಿಯಾ ನಿರ್ದೇಶನ ಮಾಡಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ.

  English summary
  Kannada actress radhika pandit taken her facebook account to wish valentines day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X