ಲಕ್ಕಿ ಸ್ಥಳದಲ್ಲಿ ರಾಧಿಕಾ ಪಂಡಿತ್ ಸೀಮಂತ: ಅಂಬಿ, ಪುನೀತ್ ಭಾಗಿ
Recommended Video

ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ತುಂಬು ಗರ್ಭಿಣಿ. ಈ ವಿಶೇಷವಾಗಿ ಯಶ್ ಮನೆಯಲ್ಲಿ ಸಂಭ್ರಮ ಜೋರಾಗಿದ್ದು, ಇಂದು ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮ ಸಂಪ್ರದಾಯವಾಗಿ ನಡೆದಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾಧಿಕಾ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.
ಮದುವೆ ಆಗಿ ಎರಡು ವರ್ಷದ ಬಳಿಕ ಯಶ್ ಮನೆಯಲ್ಲಿ ಜೂನಿಯರ್ ಯಶ್ ಅಥವಾ ರಾಧಿಕಾ ಎಂಟ್ರಿಯಾಗುತ್ತಿರುವುದು ಸಹಜವಾಗಿ ಎರಡು ಕುಟುಂಬದಲ್ಲಿ ಹಾಗೂ ಅಭಿಮಾನಿಗಳಿಗೂ ಖುಷಿ ನೀಡಿದೆ. ಸ್ಯಾಂಡಲ್ ವುಡ್ ಸಿಂಡ್ರೆಲಾಳ ಸೀಮಂತ ಕಾರ್ಯಕ್ರಮದ ಕೆಲವು ಫೋಟೋಗಳು ಬಹಿರಂಗವಾಗಿದ್ದು, ಫಿಲ್ಮಿಬೀಟ್ ಗೆ ಲಭ್ಯವಾಗಿದೆ. ಮುಂದೆ ಓದಿ....

ಲಕ್ಕಿ ಸ್ಥಳದಲ್ಲಿ ಸೀಮಂತ
ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಲಕ್ಕಿ ಸ್ಥಳ ತಾಜ್ ವೆಸ್ಟೆಂಡ್ ಹೋಟೆಲ್. ಇದೇ ಹೋಟೆಲ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ, ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲೇ ಸೀಮಂತ ಕಾರ್ಯಕ್ರಮ ಕೂಡ ನಡೆದಿದೆ.

ಗೌಡ್ರ ಸಂಪ್ರದಾಯ
ಗೌಡ್ರ ಸಂಪ್ರದಾಯ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರ ನೆರವೇರಿದ್ದು, ಹಲವು ಸ್ಯಾಂಡಲ್ ವುಡ್ ತಾರೆಯರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕೇವಲ ಆಪ್ತರಿಗೆ ಮಾತ್ರ ಅವಕಾಶವಿದ್ದು, ಫೋಟೋಗಳು ಕೂಡ ಬಹಿರಂಗವಾಗಿಲ್ಲ.

ರೆಬೆಲ್ ಸ್ಟಾರ್ ದಂಪತಿ
ಇನ್ನು ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರ ಆಗಮಿಸಿದ್ದರು. ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ, ಯೋಗರಾಜ್ ಭಟ್ ಕೂಡ ಉಪಸ್ಥಿತರಿದ್ದರು.

ಪುನೀತ್ ರಾಜ್ ಕುಮಾರ್
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿ, ರಾಧಿಕಾ ಪಂಡಿತ್ ದಂಪತಿಗೆ ಶುಭಕೋರಿದ್ದಾರೆ. ಹಿರಿಯ ನಟಿ ಜಯಂತಿ, ನಿರ್ದೇಶಕ ಎಪಿ ಅರ್ಜುನ್, ಶಾಸಕ ಹ್ಯಾರೀಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಡಿಸೆಂಬರ್ 19ಕ್ಕೆ ಡೇಟ್.!
ರಾಧಿಕಾ ಮತ್ತು ಯಶ್ ಅವರ ಮದುವೆ ಡಿಸೆಂಬರ್ 9, 2016ರಲ್ಲಿ ಆಗಿತ್ತು. ವಿಶೇಷ ಅಂದ್ರೆ, ಅದೇ ತಿಂಗಳು ಡಿಸೆಂಬರ್ 19 ರಂದೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ಯಶ್ ಹೇಳಿದ್ದರು. ಹೀಗಾಗಿ, ಡಿಸೆಂಬರ್ ತಿಂಗಳು ರಾಕಿಂಗ್ ಸ್ಟಾರ್ ಜೀವನದಲ್ಲಿ ತುಂಬಾ ವಿಶೇಷವಾಗಲಿದೆ.


Click it and Unblock the Notifications











