For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ರಾಮ್ ಪತಿಯಿಂದ ಮಹಿಳೆ ಮೇಲೆ ಹಲ್ಲೆ

  By ಫಿಲ್ಮಿಬೀಟ್ ಡೆಸ್ಕ್
  |

  'ಮಿಸ್ ಯು ಮೋನಿಕಾ' ಸೇರಿ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಧಿಕಾ ರಾಮ್ ಕುಟುಂಬದ ಜಗಳ ಸಾಮಾಜಿಕ ಜಾಲತಾಣದಲ್ಲಿ ಜಗಜ್ಜಾಹೀರಾಗಿದೆ.

  ರಾಧಿಕಾ ರಾಮ್ ಪತಿ ರಾಮ್ ಪ್ರತಿಕಾ ಎಂಬ ಮಹಿಳೆ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಸ್ವತಃ ರಾಧಿಕಾ ರಾಮ್ ಚಿತ್ರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ವಿಚಿತ್ರವೆಂದರೆ ಹಲ್ಲೆಗೆ ಒಳಪಟ್ಟ ಮಹಿಳೆ ತಮ್ಮ ಮೇಲೆ ಹಲ್ಲೆಯೇ ಆಗಿಲ್ಲ ಎನ್ನುತ್ತಿದ್ದಾರೆ.

  ರಾಧಿಕಾ ರಾಮ್ ಕೆಲ ವರ್ಷಗಳ ಹಿಂದೆ ರಾಮ್ ಎಂಬುವರನ್ನು ವಿವಾಹವಾಗಿದ್ದರು, ಆದರೆ ರಾಮ್‌ಗೆ ಪ್ರತಿಕಾ ಎಂಬುವರೊಟ್ಟಿಗೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿ ಜಗಳಗಳಾಗಿ ದೊಡ್ಡವರ ರಾಜಿ ಸಂಧಾನದ ಬಳಿಕ ಮತ್ತೆ ರಾಧಿಕಾ ಹಾಗೂ ರಾಮ್ ಒಟ್ಟಿಗಿದ್ದರು. ರಾಮ್ ಸಹ ಇನ್ನು ಮುಂದೆ ಪ್ರತಿಕಾಳನ್ನು ಭೇಟಿಯಾಗುವುದಿಲ್ಲ ಎಂದಿದ್ದರು.

  ಈ ನಡುವೆ ಪ್ರತಿಕಾ ರಾಮ್ ಮನೆಗೆ ಬಂದು ಜಗಳ ಆರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಮ್ ಪ್ರತಿಕಾಳನ್ನು ಮನೆಯಲ್ಲಿಯೇ ಹೊಡೆದಿದ್ದಾನೆ. ಆ ವಿಡಿಯೋವನ್ನು ಚಿತ್ರಿಸಿಕೊಂಡಿರುವ ರಾಧಿಕಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಪ್ರತಿಕಾ ಒಬ್ಬ ಸುಳ್ಳುಗಾರ್ತಿ, ವಿವಾಹಿತ ಪುರುಷರೊಟ್ಟಿಗೆ ಸಂಬಂಧ ಬೆಳೆಸಿ ನಂತರ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಮಾಡುವುದು ಆಕೆಯ ವೃತ್ತಿ, ಆಕೆಯನ್ನು ಯಾರೂ ನಂಬದಿರಿ'' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

  ಪತಿಯ ವಿರುದ್ಧ ಈಗಾಗಲೇ ಕೆಲವಾರು ಬಾರಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿಯೂ ರಾಧಿಕಾ ರಾಮ್ ಹೇಳಿದ್ದಾರೆ.

  English summary
  Actress Radhika Ram uploaded a video of her husband beating his girlfriend. She accused that girl in the video is a blackmailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X