»   » ರಾಯನೆ-ಅಭಿಮನ್ಯು ಮದುವೆ ಸಂಭ್ರಮದಲ್ಲಿ ಕನ್ನಡ ತಾರೆಯರ ಕಲರವ

ರಾಯನೆ-ಅಭಿಮನ್ಯು ಮದುವೆ ಸಂಭ್ರಮದಲ್ಲಿ ಕನ್ನಡ ತಾರೆಯರ ಕಲರವ

Posted By: Sony
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಾಲಿವುಡ್ ಚಿತ್ರರಂಗದಲ್ಲಿ ಅದ್ಭುತ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರಾಧಿಕಾ ಶರತ್ ಕುಮಾರ್ ಅವರ ಮಗಳು ರಾಯನೆ ಅವರ ಮದುವೆ ನಿನ್ನೆ (ಆಗಸ್ಟ್ 28) ಅದ್ಧೂರಿಯಾಗಿ ನೆರವೇರಿದೆ.

  ಕರ್ನಾಟಕದ ರಣಜಿ ಆಟಗಾರ, ವೇಗಿ, ಕನ್ನಡಿಗ ಅಭಿಮನ್ಯು ಮಿಥುನ್ ಅವರ ಜೊತೆ ರಾಯನೆ ಅವರು ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಚೆನ್ನೈಗೆ ಸಮೀಪದಲ್ಲಿರುವ 'ಮಹಾಬಲಿಪುರಂನಲ್ಲಿ' ರಾಯನೆ ಮತ್ತು ಅಭಿಮನ್ಯು ಮಿಥುನ್ ಅವರ ಮದುವೆ ಪಕ್ಕಾ ಹಿಂದು ಸಂಪ್ರದಾಯದಂತೆ ನೆರವೇರಿದೆ.[ರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ಮದುವೆಗೆ ಕೂಡಿ ಬಂತು ಘಳಿಗೆ]

  ಈ ಅದ್ಧೂರಿ ಮದುವೆ ಸಮಾರಂಭಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ, ಕಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗದ ಗಣ್ಯರು ಸಾಕ್ಷಿಯಾದರು.[ಚಿತ್ರಗಳಲ್ಲಿ: ಕ್ರಿಕೆಟಿಗ ಅಭಿಮನ್ಯು ಮಿಥುನ್ ವಿವಾಹ ಮಹೋತ್ಸವ]

  ನಟಿ ರಾಧಿಕಾ ಶರತ್ ಕುಮಾರ್ ಅವರು ಸದ್ಯಕ್ಕೆ ನಿರ್ಮಾಪಕಿಯಾಗಿದ್ದು, ಈ ಮುಂಚೆ ಕನ್ನಡ ಚಿತ್ರವೊಂದರಲ್ಲಿ ಕೂಡ ನಟಿಸಿದ್ದರು. ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ 'ಜೀವನಚಕ್ರ' ಚಿತ್ರದಲ್ಲಿ ನಟಿ ರಾಧಿಕಾ ಶರತ್ ಕುಮಾರ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು.

  ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದ ವೇಳೆ ಭೇಟಿಯಾಗಿದ್ದ ರಾಯನೆ ಮತ್ತು ಅಭಿಮನ್ಯು ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಇದೀಗ ಈ ಜೋಡಿ ಹಕ್ಕಿಗಳಿಬ್ಬರು ಕುಟುಂಬದ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.[ರಾಯನೆ-ಅಭಿಮನ್ಯು ಮಿಥುನ್ ಮದುವೆ ಫೋಟೋ ಆಲ್ಬಂ]

  ನಟಿ ರಾಧಿಕಾ ಶರತ್ ಕುಮಾರ್ ಮತ್ತು ಕನ್ನಡಿಗ ನಟ ಶರತ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲೂ ಆತ್ಮೀಯ ಸ್ನೇಹಿತರಿದ್ದಾರೆ. ಚಿತ್ರರಂಗ, ಕ್ರಿಕೆಟ್ ಮತ್ತು ರಾಜಕೀಯ ದಿಗ್ಗಜರು ಕೂಡ ಈ ಮದುವೆ ಸಮಾರಂಭದಲ್ಲಿ ಸಂಭ್ರಮದಲ್ಲಿ ಭಾಗಿಯಾಗಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಚಿತ್ರರಂಗದ ದಿಗ್ಗಜರ ಸಂಭ್ರಮ ಸಡಗರ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ರಾಧಿಕಾ ಶರತ್ ಕುಮಾರ್ ಅವರ ಮಗಳು ರಾಯನೆ ಮತ್ತು ಕ್ರಿಕೆಟರ್ ಅಭಿಮನ್ಯು ಮಿಥುನ್ ಅವರ ಮದುವೆ ಸಮಾರಂಭದಕ್ಕೆ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅವರ ಪತ್ನಿ ಅಶ್ಚಿನಿ ಅವರು ಹಾಜರಾಗಿ, ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಪುನೀತ್ ಅವರಿಗೆ ಕನ್ನಡಿಗ ನಟ ಶರತ್ ಕುಮಾರ್ ಅವರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದು, ಇವರು ಕನ್ನಡದ 'ಸಾರಥಿ', 'ಮೈನಾ', 'ಸಂತೆಯಲ್ಲಿ ನಿಂತ ಕಬೀರ' ಮುಂತಾದ ಚಿತ್ರಗಳಲ್ಲಿ ಮಿಂಚಿ, ಸ್ಯಾಂಡಲ್ ವುಡ್ ನಲ್ಲೂ ಚಿರಪರಿಚಿತರಾಗಿದ್ದಾರೆ.[ಚಿತ್ರಗಳು : ರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ನಿಶ್ಚಿತಾರ್ಥದ ಸಂಭ್ರಮ]

  ನಟಿ ಮಾಳವಿಕಾ ಅವಿನಾಶ್

  ರಾಧಿಕಾ ಶರತ್ ಕುಮಾರ್ ಅವರಿಗೆ ಆಪ್ತ ಗೆಳತಿಯಾಗಿರುವ ನಟಿ ಮಾಳವಿಕಾ ಅವಿನಾಶ್ ಅವರು ಮೆಹೆಂದಿ ಶಾಸ್ತ್ರದಿಂದ ಹಿಡಿದು, ಸಂಗೀತ ಕಾರ್ಯಕ್ರಮ ಹಾಗೂ ಮದುವೆ ಸಮಾರಂಭದಲ್ಲೂ, ಅತ್ತಿಂದಿತ್ತ ಓಡಾಡಿ, ತಮ್ಮ ಗೆಳತಿಯ ಮಗಳ ಮದುವೆಯನ್ನು ನೆರವೇರಿಸಿದ್ದಾರೆ. ಮದು ಮಗಳು ರಾಯನೆಗೂ ಮಾಳವಿಕಾ ಅಂದರೆ ಅಚ್ಚುಮೆಚ್ಚು.

  ಶರತ್ ಕುಮಾರ್ ಮುಂದಾಳತ್ವ

  ನಟಿ ರಾಧಿಕಾ ಶರತ್ ಕುಮಾರ್ ಅವರ ಎರಡನೇ ಪತಿ, ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿ ರಾಯನೆ ಮದುವೆಯನ್ನು, ನಟ ಶರತ್ ಕುಮಾರ್ ಅವರೇ ಮುಂದೆ ನಿಂತು ಮಾಡಿಸಿದ್ದಾರೆ.

  ಭಾರತಿ ವಿಷ್ಣುವರ್ಧನ್

  ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಕೂಡ ರಾಧಿಕಾ ಶರತ್ ಕುಮಾರ್ ಅವರ ಸುಪುತ್ರಿ ರಾಯನೆ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ನೂತನ ವಧು-ವರನಿಗೆ ಆಶೀರ್ವಾದ ಮಾಡಿದರು.

  ಪಲ್ಲಕ್ಕಿಯಲ್ಲಿ ಬಂದ ರಾಯನೆ

  ಮದುಮಗಳು ರಾಯನೆ ಅವರನ್ನು, ಮದುವೆ ಮಂಟಪಕ್ಕೆ, ಬ್ಯಾಂಡ್-ವಾಲಗದ ಜೊತೆ ಪಲ್ಲಕ್ಕಿಯಲ್ಲಿ ಹೊತ್ತು ತಂದ ಬಗೆ.

  ತೆಲುಗು ನಟ ಚಿರಂಜೀವಿ

  ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರು ರಾಯನೆ ಮತ್ತು ಅಭಿಮನ್ಯು ಮಿಥುನ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿ, ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

  ತಮಿಳು ನಟ ಪ್ರಭು

  ಪುನೀತ್ ರಾಜ್ ಕುಮಾರ್ ಅವರ ಜೊತೆ 'ಪವರ್' ಚಿತ್ರದಲ್ಲಿ ನಟಿಸಿದ್ದ ತಮಿಳು ನಟ ಪ್ರಭು ಅವರು, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ, ರಾಯನೆ-ಅಭಿಮನ್ಯು ಮದುವೆ ಸಂಭ್ರಮದಲ್ಲಿ ಕಂಡು ಬಂದ ಪರಿ.

  ಕನ್ನಡ ನಟ ಜೈ ಜಗದೀಶ್

  ಕನ್ನಡ ನಟ ಜೈ ಜಗದೀಶ್ ಅವರು ಪತ್ನಿ ವಿಜಯಲಕ್ಷ್ಮಿ ಸಿಂಗ್ ಸಮೇತ ಮದುವೆಗೆ ಹಾಜರಾಗಿ ಶುಭ ಹಾರೈಸಿದರು.

  ನಟಿ ಧನ್ಸಿಕಾ

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ 'ಕಬಾಲಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಧನ್ಸಿಕಾ ಅವರು ರಾಯನೆ-ಅಭಿಮನ್ಯು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ನಿರ್ದೇಶಕ ಪಿ.ವಾಸು

  'ಆಪ್ತಮಿತ್ರ', 'ಶಿವಲಿಂಗ' ಖ್ಯಾತಿಯ ನಿರ್ದೇಶಕ ಪಿ.ವಾಸು ಅವರು ಮದುವೆ ಸಮಾರಂಭದಲ್ಲಿ ಹಾಜರಿದ್ದರು.

  ಅರ್ಜುನ್ ಸರ್ಜಾ

  ಖ್ಯಾತ ನಟ ಅರ್ಜುನ್ ಸರ್ಜಾ ಅವರು ತಮ್ಮ ಮಗಳು ಐಶ್ವರ್ಯ ಅರ್ಜುನ್ ಅವರ ಜೊತೆ, ಕನ್ನಡ ಚಿತ್ರ 'ಪ್ರೇಮ ಬರಹ' ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ರಾಯನೆ-ಅಭಿಮನ್ಯು ಮದುವೆಯಲ್ಲಿ ಭಾಗಿಯಾಗಿ, ವಿಶ್ ಮಾಡಿದರು. 'ಪ್ರೇಮ ಬರಹ' ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿದ್ದು, ನಟ ಚಂದನ್ ಅವರು ಐಶ್ವರ್ಯ ಅರ್ಜುನ್ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

  ಗಲ್ರಾನಿ ಸಹೋದರಿಯರು

  ಕನ್ನಡ ನಟಿಯರಾದ ಸಂಜನಾ ಗಲ್ರಾನಿ ಮತ್ತು ಅವರ ಸಹೋದರಿ ನಿಕ್ಕಿ ಗಲ್ರಾನಿ ಅವರು ಕೂಡ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ನಿಕ್ಕಿ ಅವರು ಸದ್ಯಕ್ಕೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ

  ಶಾಸ್ತ್ರ ನೆರವೇರಿಸಿದ ಶರತ್ ಕುಮಾರ್

  ನಟ ಶರತ್ ಕುಮಾರ್ ಅವರೇ ಖುದ್ದಾಗಿ ಮುಂದೆ ನಿಂತು, ತಮ್ಮ ಮಲ ಮಗಳು ರಾಯನೆ ಅವರ ಮದುವೆ ಶಾಸ್ತ್ರಗಳನ್ನು ನೆರವೇರಿಸಿಕೊಟ್ಟರು. ಚಿತ್ರದಲ್ಲಿ ರಾಯನೆ ಮತ್ತು ಅಭಿಮನ್ಯು ಅವರ ಕುಟುಂಬದವರು.

  ನಟ ಚಿಯಾನ್ ವಿಕ್ರಮ್

  ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ಅವರು ಮದುವೆಯಲ್ಲಿ ಭಾಗಿಯಾಗಿದ್ದರು. ನಟ ವಿಕ್ರಮ್ ಅವರು ಸಿಂಪಲ್ ನಗು ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕಾಗ.

  ನಟಿ ಸುಹಾಸಿನಿ ದಂಪತಿ

  ಖ್ಯಾತ ನಟಿ ಸುಹಾಸಿನಿ ಅವರು ತಮ್ಮ ಪತಿ ನಿರ್ದೇಶಕ ಮಣಿರತ್ನಂ ಅವರ ಜೊತೆ ಮದುವೆಗೆ ಹಾಜರಾಗಿ ಶುಭ ಹಾರೈಸಿದರು.

  ನಟಿ ಖುಷ್ಬೂ

  ಖ್ಯಾತ ನಟಿ ಖುಷ್ಬೂ ಅವರು ತಮ್ಮ ಪತಿ ನಟ ಸುಂದರ್ ಅವರ ಜೊತೆ ಮದುವೆ ಮನೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪರಿ ನೋಡಿ.

  ನಟ ಜಯಂರವಿ

  ಕಾಲಿವುಡ್ ನ ಸುಂದರ ನಟ ಜಯಂರವಿ ಅವರು ತಮ್ಮ ಪತ್ನಿ ಜೊತೆ ರಾಯನೆ ಮತ್ತು ಅಭಿಮನ್ಯು ಮಿಥುನ್ ಮದುವೆಗೆ ಹಾಜರಾಗಿದ್ದರು.

  ನಟಿ ರಮ್ಯಕೃಷ್ಣ

  ನಟಿ ರಮ್ಯಕೃಷ್ಣ ಅವರು ಕೂಡ ಮದುವೆ ಮನೆಯಲ್ಲಿ ಭಾಗಿಯಾಗಿ, ವಧು-ವರರಿಗೆ ಶುಭ ಹಾರೈಸಿದರು.

  ನಟ ಸೂರ್ಯ ದಂಪತಿ

  ತಮಿಳು ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ದಂಪತಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ನಟ ವಿಜಯ್

  ಕಾಲಿವುಡ್ ನಟ ಇಳೆಯದಳಪತಿ ವಿಜಯ್ ಅವರು ಕೂಡ ರಾಯನೆ ಮತ್ತು ಅಭಿಮನ್ಯು ಮಿಥುನ್ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು, ದಂಪತಿಗಳಿಗೆ ಶುಭ ಹಾರೈಸಿದರು.

  ನಟ ಜೀವ

  ಕಾಲಿವುಡ್ ನಟ ಜೀವಾ ಮದುವೆಗೆ ಹಾಜರಾಗಿದ್ದರು.

  ಐಶ್ವರ್ಯ ಮತ್ತು ಸೌಂದರ್ಯ ರಜನಿಕಾಂತ್

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿಯರಾದ ನಿರ್ಮಾಪಕಿ ಐಶ್ವರ್ಯ ಧನುಷ್ ಮತ್ತು ಸೌಂದರ್ಯ ಅವರು ಹಾಜರಿದ್ದರು.

  ನಟಿ ಸ್ನೇಹಾ ದಂಪತಿ

  ನಟಿ ಸ್ನೇಹಾ ಮತ್ತು ನಟ ಪ್ರಸನ್ನ ದಂಪತಿ ತಮ್ಮ ಮುದ್ದು ಮಗನ ಜೊತೆ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡರು. ಮದುವೆಯ ಫೋಟೋ ಆಲ್ಬಂ ನೋಡಲು ಇಲ್ಲಿ ಕ್ಲಿಕ್ಕಿಸಿ....

  English summary
  Rayane, the daughter of actress Raadhika Sarathkumar, has married her boyfriend and cricketer Abhimanyu Mithun on Sunday, Aug. 28. Their wedding is graced by the who's who of the film, cricket and politics fraternity. Rayane and Abhimanyu Mithun's marriage is held in Mahabalipuram on Sunday. The wedding has been performed as per Hindu customs.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more