For Quick Alerts
  ALLOW NOTIFICATIONS  
  For Daily Alerts

  ಶ್ರೀಲಂಕಾ ಬಾಂಬ್ ಸ್ಫೋಟದಿಂದ ನಟಿ ರಾಧಿಕಾ ಗ್ರೇಟ್ ಎಸ್ಕೇಪ್

  |

  ಏಪ್ರಿಲ್ 21, ಭಾನುವಾರ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಟೋಟದಲ್ಲಿ ಸುಮಾರು 290ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯರು ಸೇರಿ ಹಲವು ಜನ ಸಾರ್ವಜನಿಕರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

  ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಏನಪ್ಪಾ ಅಂದ್ರೆ, ಈ ಬಾಂಬ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಬಹುಭಾಷ ನಟಿ ರಾಧಿಕಾ ಶರತ್ ಕುಮಾರ್ ಕೂಡ ಪಾರಾಗಿದ್ದಾರಂತೆ.

  ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ

  ಶ್ರೀಲಂಕಾದ ಸಿನ್ನಮೋನ್ ಗ್ರ್ಯಾಂಡ್ ಹೋಟೆಲ್ ನಲ್ಲಿದ್ದ ರಾಧಿಕಾ ಶರತ್ ಕುಮಾರ್ ಆಗ ತಾನೆ ಅಲ್ಲಿಂದ ತೆರಳಿದ್ದರಂತೆ. ಅವರು ತೆರೆಳಿದ ಕೆಲವೇ ಸಮಯದಲ್ಲಿ ಬಾಂಬ್ ಸ್ಫೋಟವಾಗಿದೆ. ಈ ಕುರಿತು ಸ್ವತಃ ರಾಧಿಕಾ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

  ಭಾನುವಾರ ಈಸ್ಟರ್ ದಿನವಾಗಿದ್ದು, ಒಂದೇ ಸಮಯದಲ್ಲಿ ಹೋಟೆಲ್, ಚರ್ಚೆ ಸೇರಿದಂತೆ ಹಲವು ಕಡೆ ಬಾಂಬ್ ಸ್ಫೋಟವಾಗಿದೆ. ಈ ಘಟನೆಗೆ ರಾಧಿಕಾ ಅವರು ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಆ ದೇವರು ನಮ್ಮ ಜೊತೆ ಇದ್ದಾನೆ ಎಂದು ಬೇಸರ ಹಂಚಿಕೊಂಡಿದ್ದಾರೆ.

  ಸದ್ಯ, ರಾಧಿಕಾ ಶರತ್ ಕುಮಾರ್ ಕನ್ನಡದ ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಾಯಕನಾಗಿರುವ ಈ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

  English summary
  South Actress Radhika Sarath Kumar tweeted her utter disbelief at the Sri Lankan bomb blasts. She said she had a narrow escape from the blast that took place at the Cinnamon hotel in Colombo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X