»   » ರಾಧಿಕಾಗೆ ರೋಡಲ್ಲೇ ಹೂ ಕೊಟ್ಟ ವಿಜಯ್ ರಾಘವೇಂದ್ರ

ರಾಧಿಕಾಗೆ ರೋಡಲ್ಲೇ ಹೂ ಕೊಟ್ಟ ವಿಜಯ್ ರಾಘವೇಂದ್ರ

Posted By:
Subscribe to Filmibeat Kannada

ಒಂದು ಕಾಲದ ಹಿಟ್ ಜೋಡಿ ಇದು. ಬಹಳ ಸುದೀರ್ಘ ಸಮಯದ ಬಳಿಕ ಮತ್ತೆ ಒಂದಾಗುತ್ತಿದೆ. ಈ ಬಾರಿಯೂ ಚಿತ್ರ ಅದೇ ರೀತಿಯ ಮ್ಯಾಜಿಕ್ ಮಾಡುತ್ತದೆ ಎಂಬ ನಿರೀಕ್ಷೆಗಳಿವೆ. ಆ ಹಳೆ ಜೋಡಿ ಬೇರಾರು ಅಲ್ಲ ವಿಜಯ್ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ.

2002ರಲ್ಲಿ ತೆರೆಕಂಡ 'ನಿನಗಾಗಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ರಾಧಿಕಾ ಬಳಿಕ ರಾಧಿಕಾ ಕುಮಾರಸ್ವಾಮಿಯಾಗಿ ಬೆಳೆದದ್ದು ಗೊತ್ತೇ ಇದೆ. ಆ ವರ್ಷದ ಅತ್ಯಧಿಕ ಗಳಿಕೆಯ ಚಿತ್ರಳಲ್ಲಿ ಒಂದಾಗಿದ್ದು ನಿನಗಾಗಿ ಚಿತ್ರದ ಹೆಗ್ಗಳಿಕೆ. ಇದೀಗ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆಯೇ? ಈ ಜೋಡಿ ಈಗ ಮತ್ತೊಮ್ಮೆ 'ನಿಮಗಾಗಿ' ಚಿತ್ರದ ಮೂಲಕ ಒಂದಾಗುತ್ತಿರುವುದು ಗೊತ್ತೇ ಇದೆ.

Radhika, Vijay Raghavendra Nimagagi film starts shooting1

ಈ ಚಿತ್ರದ ಶೂಟಿಂಗ್ ಶುರುವಾಗಿದೆ. ಈಗ ಇಬ್ಬರೂ ಅನುಭಾವಿ ಕಲಾವಿದರು. ಈ ಬಾರಿ ದಂಪತಿಗಳ ನಡುವಿನ ಕಥೆಯನ್ನು ಕೈಗೆತ್ತಿಕೊಂಡು ಆಕ್ಷನ್ ಕಟ್ ಹೇಳುತ್ತಿದ್ದಾರೆ ರಘುರಾಮ್ ಡಿಪಿ. 'ಜಂಟಿ ಖಾತೆ' ಎಂಬುದು ಈ ಚಿತ್ರದ ಅಡಿಬರಹ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರ ಜೊತೆ 'ಜಾಕ್ಸನ್', ಸೃಜನ್ ಲೋಕೇಶ್ ಜೊತೆ 'ಟಿಪಿಕಲ್ ಕೈಲಾಸ್' ಚಿತ್ರಗಳ್ಳಿ ಅಭಿನಯಿಸಿದ್ದ ವೃಂದಾ ಸಹ ಅಭಿನಯಿಸುತ್ತಿದ್ದಾರೆ. ರಾಧಿಕಾ ಹಾಗೂ ವಿಜಯ್ ಹತ್ತು ವರ್ಷಗಳ ಬಳಿಕ ಒಂದಾಗುತ್ತಿರುವುದು ಈ ಚಿತ್ರದ ಗಮನಾರ್ಹ ಸಂಗತಿ.

Radhika, Vijay Raghavendra Nimagagi film starts shooting2

ಫೋಟೋ ಶೂಟ್ ಮುಗಿಸಿಕೊಂಡಿದ್ದ 'ನಿಮಗಾಗಿ' ಚಿತ್ರದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ವಿ ಹರಿಕೃಷ್ಣ ಸಂಗೀತ, ಜಗದೀಶ್ ವಾಲಿ ಅವರ ಛಾಯಾಗ್ರಹಣ ಇರುವ ಈ ಚಿತ್ರದ ಶೂಟಿಂಗ್ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ.

ರಾಧಿಕಾಗೆ ರೋಡ್ ನಲ್ಲೇ ಹೂಗುಚ್ಛ ನೀಡುವ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಮೈಸೂರು ಕೃಷ್ಣ ಹಾಗೂ ಎಚ್ ಆನಂದಕುಮಾರ್ ಅವರು ನಿರ್ಮಿಸುತ್ತಿರುವ ಚಿತ್ರ ಇದು.

ಬೆಳ್ಳಿಪರದೆಯ ಮೇಲೆ ಪ್ರೀತಿಯ ತಂಗಿಯಾಗಿ, ಕನ್ನಡ ಜನತೆಯ ಮನೆ ಮಗಳಾಗಿ 'ನಿನಗಾಗಿ' ಚಿತ್ರದಿಂದ ಇದೀಗ 'ನಮಗಾಗಿ' ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಫೇರ್ ಅಂಡ್ ಲವ್ಲಿ' ಚಿತ್ರದ ಬಳಿಕ ರಘುರಾಮ್ ಕೈಗೆತ್ತಿಕೊಂಡಿರುವ ಚಿತ್ರ ಇದು. (ಫಿಲ್ಮಿಬೀಟ್ ಕನ್ನಡ)

English summary
Radhika Kumaraswamy and Vijay Raghavendra lead Nimagagi film starts shooting. It is Raghuram directorial venture after 'Fair and Lovely'. It is a matured love story. V Harikrishna scores music and Raghu of Mysore is producing this film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada