»   » ರವಿಯನ್ನು ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!

ರವಿಯನ್ನು ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!

By: ಫಿಲ್ಮಿಬೀಟ್ ಕನ್ನಡ ಸಂಪಾದಕ
Subscribe to Filmibeat Kannada

ಕನ್ನಡ ಚಿತ್ರರಂಗದ 'ಟ್ರೆಂಡ್ ಸೆಟರ್' ಅಂತ ಕರೆಯಿಸಿಕೊಳ್ಳುವ 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಹೊಸ ಪ್ರಯೋಗ 'ಅಪೂರ್ವ' ಬಗ್ಗೆ ಕನ್ನಡ ಚಿತ್ರರಂಗದ ನಿರ್ದೇಶಕ ರಾಘವ ದ್ವಾರ್ಕಿ ಕಾಮೆಂಟ್ ಮಾಡಿದ್ದಾರೆ.

ಒನ್ ಮ್ಯಾನ್ ಶೋ 'ಅಪೂರ್ವ' ಸಿನಿಮಾ ಕುರಿತು ವಿಮರ್ಶೆ ಮಾಡಿರುವ ಜೊತೆಗೆ ''Ravichandran is Ekangi Now, Crazy Star is missing, Sorry to say this'' ಎಂಬ ಮತ್ತೊಂದು ವಿಡಿಯೋ ಕೂಡ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ 'ಶಂಭು', 'ಗುನ್ನ', 'ಮತ್ತೆ ಮುಂಗಾರು' ಚಿತ್ರಗಳ ನಿರ್ದೇಶಕ ರಾಘವ ದ್ವಾರ್ಕಿ.


ಈ ಎರಡು ವಿಡಿಯೋಗಳನ್ನ ನೋಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಕ್ರೇಜಿ ಅಭಿಮಾನಿ ಸುಮಂತ್ ಎನ್ನುವರು ರಾಘವ ದ್ವಾರ್ಕಿ ರವರಿಗೆ ಒಂದು ಪತ್ರ ಬರೆದಿದ್ದಾರೆ. ಸಾಲದ್ದಕ್ಕೆ ಕೆಲವೊಂದಿಷ್ಟು ಖಡಕ್ ಪ್ರಶ್ನೆಗಳನ್ನೂ ಕೇಳಿದ್ದಾರೆ. ಅದನ್ನ ಯಥಾವತ್ತಾಗಿ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ - ಸಂಪಾದಕ


ಆತ್ಮವಿಮರ್ಶೆ ಮಾಡಿಕೊಳ್ಳಿ....

''Dear Raghava Dwarki Sir, ಕ್ಷಮಿಸಿ. ನಿಮಗೆ ಬುದ್ಧಿವಾದ ಹೇಳುವ ದೊಡ್ಡ ವ್ಯಕ್ತಿ ನಾನಲ್ಲ. ನಾನು ನಿಮ್ಮ ಹಾಗೆ ಚಿತ್ರ ನಿರ್ದೇಶನ ಮಾಡಿಲ್ಲ. ನಾನೊಬ್ಬ ಸಾಮಾನ್ಯ ಕನ್ನಡ ಸಿನಿ ಪ್ರೇಕ್ಷಕ ಅಷ್ಟೇ. ಅದರಲ್ಲೂ ರವಿಚಂದ್ರನ್ ಅಪ್ಪಟ ಅಭಿಮಾನಿ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಇದೆ. ಇದೇ ಕಾರಣಕ್ಕೆ ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ಸಾಧ್ಯವಾದರೆ ಪೂರ್ತಿ ಓದಿ ನನ್ನ ಕೆಲವು ಪ್ರಶ್ನೆಗಳಿಗೆ ಆತ್ಮವಿಮರ್ಶೆ ಮಾಡಿಕೊಂಡು ಉತ್ತರ ಕಂಡುಕೊಳ್ಳಿ''


ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಏನು.?

''ರವಿಚಂದ್ರನ್ ನೂರಕ್ಕೆ ನೂರರಷ್ಟು ಏಕಾಂಗಿ, ಅವರಿಗೆ ವೆಲ್ ವಿಶರ್ಸ್ ಇಲ್ಲ. ಹೀಗೆ ಮಾಡುವ ಬದಲು ಹಾಗೆ ಮಾಡಿ ಅಂತ ಹೇಳೋಕೆ ರವಿಚಂದ್ರನ್ ಬಳಿ ಯಾರೂ ಇಲ್ಲ' ಅಂತ ಹೇಳುವ ನೀವು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಆದರೂ ಏನು?''


ನಿಮ್ಮ ಬಗ್ಗೆ ಯಾರಿಗೆ ಗೊತ್ತು?

''ಕನ್ನಡ ಸಿನಿಮಾಗಳನ್ನ ತಪ್ಪದೆ ಫಾಲೋ ಮಾಡುವ ನನಗೆ ನಿಮ್ಮ ಬಗ್ಗೆ ಗೊತ್ತೇ ಇಲ್ಲ. ನಿಮ್ಮ ಚಿತ್ರಗಳು ಯಾವುವು? ಅದು ಯಾವಾಗ ಬಂದು, ಯಾವಾಗ ಹೋಯ್ತು ಅಂತ ಸ್ವಲ್ಪ ಹೇಳ್ತೀರಾ?''


ಫೀನಿಕ್ಸ್ ನಂತೆ ಎದ್ದು ಬರುವ ತಾಕತ್ತು ಕ್ರೇಜಿ ಸ್ಟಾರ್ ಗಿದೆ.!

''ಅಪೂರ್ವ' ಒಂದು ಪ್ರಯೋಗಾತ್ಮಕ ಚಿತ್ರ. ಪ್ರಯೋಗಕ್ಕೆ ಸಾವಿದೆ. ಆದ್ರೆ, ಪ್ರಯತ್ನಕ್ಕಲ್ಲ. ಈ ಮಾತನ್ನ ಒಬ್ಬ ಟೆಕ್ನೀಶಿಯನ್ ಆಗಿ ನೀವು ಒಪ್ತೀರಾ? ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ ಹಾಗೂ ವಿಭಿನ್ನ ಪ್ರಯತ್ನ ಮಾಡುವ ಗಟ್ಟಿ ಗುಂಡಿಗೆ ರವಿಚಂದ್ರನ್ ಗಿದೆ. 'ಅಪೂರ್ವ' ಪ್ರಯೋಗ ಫ್ಲಾಪ್ ಆದ್ರೆ, ಫೀನಿಕ್ಸ್ ನಂತೆ ಎದ್ದು ಬರುವ ತಾಕತ್ತು ಕ್ರೇಜಿ ಸ್ಟಾರ್ ಗಿದೆ. ನಿಮಗೆ ಇದ್ಯಾ? ನಿಮ್ಮ ಪ್ರಯೋಗ, ಪ್ರಯತ್ನದ ಬಗ್ಗೆ (ಮಾಡಿದ್ರೆ?) ಸ್ವಲ್ಪ ನಮಗೂ ಮಾಹಿತಿ ಕೊಡಿ''


ನಮ್ಮ ಕೈ ಶುದ್ಧಿ ಆಗಿರಬೇಕು.!

''ಅಪೂರ್ವ' ಸಿನಿಮಾದ ಕಥೆ ಗಟ್ಟಿಯಾಗಿಲ್ಲ. ಸ್ಕ್ರೀನ್ ಪ್ಲೇ ನಲ್ಲಿ ಸ್ಪೀಡ್ ಇಲ್ಲ. ಸಾಹಿತ್ಯದಲ್ಲಿ ಅರ್ಥ ಇಲ್ಲ ಅಂತ ಕಾಮೆಂಟ್ ಮಾಡುವ ನೀವು ನಿಮ್ಮ ಚಿತ್ರಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇತರರಿಗೆ ಬೆರಳು ತೋರಿಸುವ ಮುನ್ನ ನಮ್ಮ ಕೈ ಶುದ್ಧಿ ಆಗಿರಬೇಕಲ್ಲವೇ.?''


ನಿಮ್ಮ ಇಂಗ್ಲೀಷ್ ಜಾಸ್ತಿ ಆಗ್ಲಿಲ್ವಾ.?

''ರವಿಚಂದ್ರನ್ ಅವರು ತಮ್ಮ ಫಿಲಾಸಫಿಗಳನ್ನ ಇಂಗ್ಲೀಷ್ ಟೈಟಲ್ ಮುಖಾಂತರ ತೋರಿಸುತ್ತಾರೆ. ನನ್ನಂಥ ಸಾಮಾನ್ಯ ಪ್ರೇಕ್ಷಕ, ಅವಿದ್ಯಾವಂತನಿಗೆ ಹೇಗೆ ಅರ್ಥವಾಗಬೇಕು' ಎನ್ನುವ ನೀವು ನಿಮ್ಮ ವಿಡಿಯೋದಲ್ಲೇ ಎಷ್ಟು ಬಾರಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದೀರಿ ಎಂಬುದನ್ನು ಗಮನಿಸಿ''


ಸೆಡ್ಡು ಹೊಡೆಯುವ ಸಿನಿಮಾ ಮಾಡಿ.!

''ನೀವೇ ಹೇಳಿದಂತೆ, ರವಿಚಂದ್ರನ್ ರವರ ಸಿನಿಮಾಗಳು ಬಾಲಿವುಡ್ ಫಿಲ್ಮ್ ಮೇಕರ್ಸ್ ಗಳಿಗೆ ಸ್ಫೂರ್ತಿ ಆಗಿತ್ತು. ಈಗಲೂ, 'ಅಪೂರ್ವ' ಸಿನಿಮಾ ಟೆಕ್ನಿಕಲಿ ಯಾವ ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲ. ಬಾಯಿ ಮಾತಲ್ಲಿ ನೆಗೆಟಿವ್ ಅಂಶಗಳನ್ನ ಎತ್ತಿ ಹಿಡಿದು ಯ್ಯೂಟ್ಯೂಬ್ ನಲ್ಲಿ ಹೀರೋ ಆಗುವ ಬದಲು, ಸಾಧ್ಯವಾದರೆ ನೀವೂ ರವಿಚಂದ್ರನ್ ರವರ ಚಿತ್ರಗಳಿಗೆ ಸೆಡ್ಡು ಹೊಡೆಯುವ ಸಿನಿಮಾ ಮಾಡಿ, ನಂತರ ಕಾಮೆಂಟ್ ಮಾಡಿ. ಆಗ ನನ್ನ ಹಾಗೆ ಯಾರೂ ಚಕಾರ ಎತ್ತೋಲ್ಲ.''


ಇದಕ್ಕೆ 'ಅಭಿವ್ಯಕ್ತಿ ಸ್ವಾತಂತ್ರ್ಯ' ಎನ್ನಬಹುದೇ?

''ಅಪೂರ್ವ' ಚಿತ್ರ ಸ್ಲೋ ಇದೆ ನಿಜ. ಚಿತ್ರ ಚೆನ್ನಾಗಿಲ್ಲ ಅಂದ್ರೆ ನಮಂಥ ಪ್ರೇಕ್ಷಕರು ಸಿನಿಮಾ ನೋಡುವುದಿಲ್ಲ ಬಿಡಿ. ಲಾಸ್ ಆದರೆ ಅದು ರವಿಚಂದ್ರನ್ ರವರ ಕಿಸೆಗೆ. ಕಾಸು ಕೊಡುವ ನಮಂಥವರು ಚಿತ್ರದ ಬಗ್ಗೆ ಬೆರಳು ತೋರಿಸಬಹುದು. ಆದ್ರೆ, ಅದೇ ಚಿತ್ರರಂಗದಲ್ಲಿ ಇರುವ ನೀವು ಒಬ್ಬ ಲೆಜೆಂಡರಿ ಆಕ್ಟರ್, ಪರ್ಫೆಕ್ಷನಿಸ್ಟ್ ಡೈರೆಕ್ಟರ್ ಬಗ್ಗೆ ಹೀಗೆ ವಿಡಿಯೋ ಮಾಡಿ ಬಹಿರಂಗವಾಗಿ ಹರಿದಾಡಲು ಬಿಡುವುದು ನಿಮಗೆ ಸರಿ ಅನ್ಸುತ್ತಾ? 'ಅಭಿವ್ಯಕ್ತಿ ಸ್ವಾತಂತ್ರ್ಯ'ದ ಹೆಸರಲ್ಲಿ ವೃತ್ತಿಪರ ನಿರ್ದೇಶಕರಾಗಿರುವ ನೀವು ಹೀಗೆ ಮಾಡಬಹುದೇ. I'm Sorry Raghava Dwarki sir, ನಾನು ನಿಮ್ಮ ಹಾದಿಯಲ್ಲೇ ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ''


ಪರಭಾಷೆ ಮೇಲೆ ನಿಮಗೆ ಆಸಕ್ತಿ?

''ಕುತೂಹಲಕ್ಕೆ ನಿಮ್ಮ 'ಕಟ್ ಅಂಡ್ ರೈಟ್' ಯೂಟ್ಯೂಬ್ ಚಾನೆಲ್ ನೋಡಿದೆ. ಅದರಲ್ಲಿ, ಕನ್ನಡದ 'ಅಪೂರ್ವ', 'ಯು ಟರ್ನ್', 'ಇಷ್ಟಕಾಮ್ಯ', 'ಸ್ಟೈಲ್ ಕಿಂಗ್', 'ಚಕ್ರವ್ಯೂಹ' ಚಿತ್ರಗಳ ವಿಮರ್ಶೆ ಮಾತ್ರ ಇದೆ. ಬಾಕಿ ಎಲ್ಲಾ ತಮಿಳು, ತೆಲುಗು, ಹಿಂದಿ ಮಯ. 'ಕತ್ತಿ', 'ಹ್ಯಾಪಿ ನ್ಯೂ ಇಯರ್', 'ಲಿಂಗಾ', 'ಐ', 'ಬಾಹುಬಲಿ', 'ಕಬಾಲಿ ಟೀಸರ್', '24', 'ಬ್ರಹ್ಮೋತ್ಸವಂ' ಸೇರಿದಂತೆ ಪರಭಾಷೆ ಚಿತ್ರಗಳ ವಿಮರ್ಶೆಗಳನ್ನೇ ಹೆಚ್ಚಾಗಿ ನೀಡಿದ್ದೀರಿ. ನೀವು ನಿಜಕ್ಕೂ ಕನ್ನಡದವರಾ.? ಕನ್ನಡ ಪ್ರೇಮಿ ಆದ ನನಗೆ ಪರಭಾಷೆ ಚಿತ್ರದ ಬಗ್ಗೆ ನೀವು ಕೊಡುವ ರಿವ್ಯೂ ಯಾಕೆ ಬೇಕು.? ಕನ್ನಡ ನಿರ್ದೇಶಕರಾದ ನೀವು ಕನ್ನಡ ಚಿತ್ರಗಳನ್ನ, ಕನ್ನಡ ಚಿತ್ರರಂಗವನ್ನು ಸಪೋರ್ಟ್ ಮಾಡುವ ಮನಸ್ಸು ಇಲ್ವಾ? ಇಲ್ಲ, ನಿಮಗೆ ಪರಭಾಷೆ ಚಿತ್ರಗಳ ಬಗ್ಗೆ ವ್ಯಾಮೋಹನಾ.?''


ರವಿಚಂದ್ರನ್ ಏಕಾಂಗಿ ಅಲ್ಲ.!

''ಒಂದು ವಿಭಿನ್ನ ಹಾಗೂ ವಿಶಿಷ್ಟ ಪ್ರಯೋಗ ಮಾಡಿದಾಗ ನೂರು ಜನ ನೂರು ತರಹ ಮಾತನಾಡುವುದು ಸಹಜ. ಹಾಗೇ, ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಒನ್ ಮ್ಯಾನ್ ಶೋ 'ಅಪೂರ್ವ' ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಮಗೆ ಸಿನಿಮಾ ಹಿಡಿಸಲಿಲ್ಲ ಎಂದಾದರೆ, ಅದರ ಬಗ್ಗೆ ಮಾತ್ರ ಕಾಮೆಂಟ್ ಮಾಡಿ. ಅದು ಬಿಟ್ಟು ರವಿಚಂದ್ರನ್ ನೂರಕ್ಕೆ ನೂರರಷ್ಟು ಏಕಾಂಗಿ ಅಂತ ವೈಯುಕ್ತಿಕವಾಗಿ ಮಾತನಾಡಬೇಡಿ. ನಮ್ಮಂಥ ಅಭಿಮಾನಿಗಳು ಇರುವವರೆಗೂ ರವಿಚಂದ್ರನ್ ಎಂದೂ ಏಕಾಂಗಿ ಅಲ್ಲ.!''


'ಏಕಾಂಗಿ'ಗೆ ಪ್ರಶಸ್ತಿ ಬಂದಿಲ್ವಾ.?

''Infact, ಏಕಾಂಗಿ ಬಗ್ಗೆ ಯಾರು ಏನೇ ಹೇಳಿದ್ರೂ, ಐದು ರಾಜ್ಯ ಪ್ರಶಸ್ತಿ ಸಿಕ್ಕಿದೆ. ಜನ ತಿರಸ್ಕರಿಸಿದ ಚಿತ್ರವನ್ನ ಸರ್ಕಾರ ಭೇಷ್ ಅಂದಿದೆ. ದಯವಿಟ್ಟು ಕ್ಷಮಿಸಿ ರಾಘವ ದ್ವಾರ್ಕಿ ಸರ್, ನೀವು ಮೊದಲು ಜನ ಒಪ್ಪುವ ಸಿನಿಮಾ ಮಾಡಿ, ಇಲ್ಲಾ ಸರ್ಕಾರವನ್ನಾದರೂ ಮೆಚ್ಚಿಸಿ. ನಂತರ ರವಿ ಸರ್ ಬಗ್ಗೆ ಮಾತನಾಡಿ''


ರವಿಚಂದ್ರನ್ ಅಭಿಮಾನಿಗಳ ಮನಸ್ಸು ನೋಯಿಸಿದ್ದೀರಾ.!

''ರಜನಿಕಾಂತ್ ಪುತ್ರಿ ಸೌಂದರ್ಯ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ ಹಾಗೆ ರವಿಚಂದ್ರನ್ ಬಗ್ಗೆ ಕೂಡ ಅಂತ ದಯವಿಟ್ಟು ತಿಳಿದುಕೊಳ್ಳಬೇಡಿ. ಕ್ರೇಜಿ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಕೊನೆಯದಾಗಿ Sorry Raghava Dwarki sir (ನಿಮ್ಮದೇ ದಾಟಿಯಲ್ಲಿ) ನೀವು ಕೋಟ್ಯಾಂತರ ರವಿಚಂದ್ರನ್ ಅಭಿಮಾನಿಗಳ ಮನಸ್ಸು ನೋಯಿಸಿದ್ದೀರಾ'' - ಇಂತಿ ನಿಮ್ಮ ಬಗ್ಗೆ ಅಪಾರ ಗೌರವ ಇರುವ ಸುಮಂತ್. [ಸೌಂದರ್ಯಾ ರಜನಿಕಾಂತ್ ಗೆ ಒಂದು ಬಹಿರಂಗ ಪತ್ರ]


ವಿಡಿಯೋ ನೋಡಿ....

ರವಿಚಂದ್ರನ್ ಬಗ್ಗೆ ನಿರ್ದೇಶಕ ರಾಘವ ದ್ವಾರ್ಕಿ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....


ವಿಮರ್ಶೆ ನೋಡಿ...

ರವಿಚಂದ್ರನ್ ರವರ 'ಅಪೂರ್ವ' ಚಿತ್ರದ ಬಗ್ಗೆ ನಿರ್ದೇಶಕ ರಾಘವ ದ್ವಾರ್ಕಿ ನೀಡಿರುವ ವಿಮರ್ಶೆ ಇಲ್ಲಿದೆ ನೋಡಿರಿ...


'ಫಿಲ್ಮಿಬೀಟ್ ಕನ್ನಡ' ವಿಮರ್ಶೆ ಇಲ್ಲಿದೆ...

'ಅಪೂರ್ವ' ಚಿತ್ರದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನೀಡಿರುವ ವಿಮರ್ಶೆ ಇಲ್ಲಿದೆ ಓದಿರಿ...[ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]


English summary
Director Raghava Dwarki has commented upon Crazy Star V.Ravichandran in a YouTube video titled as 'Ravichandran is Ekangi Now, Crazy Star is missing, Sorry to say this'. After watching this video, An Annoyed fan of V.Ravichandran, Sumanth has written open letter to Raghava Dwarki. Read the letter here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada