»   » ತಿರುಪತಿಯಲ್ಲಿ ರಾಘವ ಲಾರೆನ್ಸ್ ಗೆ ಅರ್ಧಚಂದ್ರ

ತಿರುಪತಿಯಲ್ಲಿ ರಾಘವ ಲಾರೆನ್ಸ್ ಗೆ ಅರ್ಧಚಂದ್ರ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
Raghava Lawrence
ತಿರುಪತಿ ತಿಮ್ಮಪ್ಪನ ದರ್ಶನಭಾಗ್ಯ ಪಡೆಯಬೇಕಾದರೆ ಎಲ್ಲರಿಗೂ ಅರ್ಧಚಂದ್ರ ಪ್ರಯೋಗ ತಪ್ಪಿದ್ದಲ್ಲ ಬಿಡಿ. ಇನ್ನು ನಟ ರಾಘವ ಲಾರೆನ್ಸ್ ಗೆ ಅರ್ಧಚಂದ್ರ ಪ್ರಯೋಗ ಮಾಡಿದ್ದರಲ್ಲಿ ಅಂತಹದ್ದೇನಿದೆ ವಿಶೇಷ ಅಂತೀರಾ? ನಿಜ ಹೇಳಬೇಕೆಂದರೆ ಏನೇನು ವಿಶೇಷವಿಲ್ಲ. ಆದರೆ ನಟನೊಬ್ಬನಿಗೆ ಈ ರೀತಿ ಆಗಿರುವುದೇ ವಿಶೇಷ.

ಕೊರಿಯೋಗ್ರಾಫರ್, ನಟ, ನಿರ್ದೇಶಕ, ಸಂಗೀತ ನಿರ್ದೇಶಕನಾಗಿ ಲಾರೆನ್ಸ್ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಫ್ಯಾಮಿಲಿ ಸಮೇತ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಕಹಿ ಅನುಭವವಾಗಿದೆ.

ತಿಮ್ಮಪ್ಪನ ದರ್ಶನಭಾಗ್ಯ ಪಡೆದು ಹಿಂತಿರುಗುತ್ತಿರಬೇಕಾದರೆ ಆಲಯದ ಸಿಬ್ಬಂದಿ ಅವರನ್ನು ಹೊರಕ್ಕೆ ನೂಕಿದ್ದಾರೆ. ದರ್ಶನಭಾಗ್ಯ ಪಡೆದು ಬರುತ್ತಿದ್ದರೂ ಅವರ್ಯಾಕೆ ಈ ರೀತಿ ಅನುಚಿತವಾಗಿ ನಡೆದುಕೊಂಡರು ಎಂದು ಲಾರೆನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಮನ್ ಮ್ಯಾನ್ ಗೆ ಆದ ಅನುಭವ ತಮಗೂ ಆಯಿತು. ಒಂದು ವೇಳೆ ತಾವು ವಿಐಪಿ ಟಿಕೆಟ್ ಪಡೆದು ಬಂದಿದ್ದರೆ ಇವರು ಹೀಗೆಯೇ ನಡೆದುಕೊಳ್ಳುತ್ತಿದ್ದರೇ ಎಂದು ಲಾರೆನ್ಸ್ ಪ್ರಶ್ನಿಸಿದ್ದಾರೆ. ಭಗವಂತನ ದರ್ಶನಕ್ಕೆ ಬರುವ ಸಾಮಾನ್ಯರಿಗೆ ಒಂದು ನೀತಿ, ವಿಐಪಿಗಳಿಗೆ ಮತ್ತೊಂದು ನೀತಿ ಸರಿಯೇ ಎಂದಿದ್ದಾರೆ.

ನಿಜ ಹೇಳಬೇಕೆಂದರೆ ಅದ್ಯಾಕೋ ಏನೋ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದ ಪ್ರತಿ ಭಕ್ತರಿಗೂ ಈ ಅರ್ಧಚಂದ್ರ ಪ್ರಯೋಗ ತಪ್ಪಿದ್ದಲ್ಲ. ದರ್ಶನಭಾಗ್ಯ ಪಡೆದವರ ಕತ್ತಿಗೆ ಕೈಹಾಕಿ ಮುಂದಕ್ಕೆ ತಳ್ಳದಿದ್ದರೆ ಅಲ್ಲಿನ ಸಿಬ್ಬಂದಿಗೆ ಸಮಾಧಾನವಾಗಲ್ಲ ಅನ್ನಿಸುತ್ತದೆ ಎಂಬುದು ತಿರುಮಲಕ್ಕೆ ಭೇಟಿ ನೀಡಿ ಬರುವ ಪ್ರತಿಯೊಬ್ಬರ ಅಳಲು.

English summary
Choreographer Raghava Lawrence faced a bitter experience at Tirumala Tirupati Devastanam. The staff members pushed him away from the temple even before completing his darshan.
Please Wait while comments are loading...