Don't Miss!
- Sports
Hockey World Cup 2023: ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; 9ನೇ ಸ್ಥಾನ ಖಚಿತ?
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಘವ ಲಾರೆನ್ಸ್ ಗಾಗಿ ಪ್ರಾಣದ ಜೊತೆಗೆ ಆಟ ಆಡಿದ ಅಭಿಮಾನಿ!
ಸಿನಿಮಾ ನಟರಿಗೆ ಇದು ವರವೂ ಹೌದು.. ಶಾಪವೂ ಹೌದು. ಅಭಿಮಾನಿಗಳ ಅಭಿಮಾನ, ಪ್ರೀತಿ ಸ್ಟಾರ್ ನಟರಿಗೆ ಖುಷಿ ನೀಡುವ ವಿಷಯ. ಆದರೆ, ಅದು ಕೆಲವು ಬಾರಿ ಅತಿಯಾಗಿ ನಟರ ಬೇಸರಕ್ಕೆ ಕಾರಣ ಆಗುತ್ತದೆ.
ಇತ್ತೀಚಿಗಷ್ಟೆ ಅಭಿಮಾನಿಯೊಬ್ಬ ನಟ ಯಶ್ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ತನ್ನ ಪ್ರಾಣ ನೀಡಿದ. ಇದೇ ರೀತಿ ತಮಿಳುನಾಡಿನಲ್ಲಿಯೂ ಅಭಿಮಾನಿಯೊಬ್ಬ ತನ್ನ ಜೀವದ ಜೊತೆಗೆ ಆಟ ಆಡಿದ್ದಾರೆ.
200
ಜನರಿಗೆ
ವಿದ್ಯೆ,
150
ಜನರಿಗೆ
ಹೃದಯ
ಚಿಕಿತ್ಸೆ:
ಈ
ನಟನ
ಮಹಾನ್
ಕೆಲಸಕ್ಕೆ
ಭೇಷ್
ನಟ ರಾಘವ ಲಾರೆನ್ಸ್ ಅಭಿಮಾನಿ ತನ್ನ ಹುಚ್ಚಾಟ್ಟದ ಮೂಲಕ ಟೀಕೆಗೆ ಗುರಿಯಾಗಿದ್ದಾನೆ. ಕಳೆದ ವಾರ ಲಾರೆನ್ಸ್ ಅಭಿನಯದ 'ಕಾಂಚನಾ 3' ಸಿನಿಮಾ ಬಿಡುಗಡೆಯಾಗಿತ್ತು. ಲಾಘವ ಲಾರೆನ್ಸ್ ಅಭಿಮಾನಿ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡಲು ಕ್ರೇನ್ ಬಳಸಿದ್ದಾನೆ. ಎತ್ತರದಲ್ಲಿ ನೇತಾಡುತ್ತ ಪ್ರಾಣದ ಜೊತೆಗೆ ಆಟ ಆಡಿದ್ದಾನೆ. ಲಾರೆನ್ಸ್ ಈ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

ಕ್ರೇನ್ ಬಳಸಿ ಹಾಲಿನ ಅಭಿಷೇಕ
ಚಿತ್ರಮಂದಿರದ ಮುಂದೆ ಇರುವ ಸ್ಟಾರ್ ನಟರ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡುವುದು ಸಾಮಾನ್ಯ. ಆದರೆ, ರಾಘವ ಲಾರೆನ್ಸ್ ಅಭಿಮಾನಿ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡಲು ಕ್ರೇನ್ ಬಳಸಿದ್ದಾನೆ. ಎತ್ತರದಲ್ಲಿ ನೇತಾಡುತ್ತ ಪ್ರಾಣದ ಜೊತೆಗೆ ಆಟ ಆಡಿದ್ದಾನೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರು ಆತನ ಪ್ರಾಣಕ್ಕೆ ಅಪಾಯ ಖಂಡಿತ.

ಈ ರೀತಿ ಅಭಿಮಾನವನ್ನು ತೋರುವ ಅಗತ್ಯ ಇದೆಯೇ?
ಅಭಿಮಾನಿಯ ಈ ವಿಡಿಯೋ ಹಾಗೂ ಫೋಟೋ ನೋಡಿದ ರಾಘವ ಲಾರೆನ್ಸ್ ಈ ರೀತಿ ಘಟನೆಗಳ ಮತ್ತೆ ನಡೆಯಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ''ಈ ರೀತಿ ನಿಮ್ಮ ಜೀವವನ್ನು ಅಪಾಯದಲ್ಲಿ ಇಟ್ಟುಕೊಂಡು ಅಭಿಮಾನವನ್ನು ತೋರಿಸುವ ಅಗತ್ಯ ಇದೆಯೇ?'' ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿಯ ಕೆಲಸ ಮಾಡುವ ಮುನ್ನ ನಿಮ್ಮ ಮನೆಯವರನ್ನು ಒಮ್ಮೆ ನೆನಪು ಮಾಡಿಕೊಳ್ಳಿ ಎಂದಿದ್ದಾರೆ.

ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ
''ನೀವು ನಿಜವಾಗಿಯೋ ನನ್ನ ಅಭಿಮಾನಿಗಳು ಎಂದು ಸಾಬೀತು ಮಾಡಬೇಕಿದ್ದರೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಪುಸ್ತಕ ಮತ್ತು ಶಾಲೆಯ ಶುಲ್ಕಕ್ಕಾಗಿ ಕಷ್ಟ ಪಡುತ್ತಿರುವ ಮಕ್ಕಳಿಗೆ ನೆರವಾಗಿ. ಎಷ್ಟೊ ವೃದ್ಧರು ಆಹಾರ ಇಲ್ಲದೆ ನೋವಿನಲ್ಲಿ ಇದ್ದಾರೆ. ಅಂತಹವರಿಗೆ ಆಹಾರ ನೀಡಿ'' ಎಂದಿದ್ದಾರೆ ಲಾರೆನ್ಸ್.

ನನ್ನ ಹೃದಯಪೂರ್ವಕ ಮನವಿ
''ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ನನಗೆ ಖುಷಿ ಆಗುತ್ತದೆ. ಅದನ್ನು ಬಿಟ್ಟು ಈ ರೀತಿಯ ಕೆಲಸಗಳನ್ನು ಮಾಡುವದನ್ನು ನಾನು ಪ್ರೋತ್ಸಾಹ ನೀಡುವುದಿಲ್ಲ. ನನ್ನ ಅಭಿಮಾನಿಗಳಿಗೆ ಮತ್ತೆ ಈ ರೀತಿಯ ಅಪಾಯದ ಕೆಲಸಕಕ್ಕೆ ಕೈ ಹಾಕಬೇಡಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮ ಜೀವ ಬಹಳ ಮುಖ್ಯ.'' ಎಂದು ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಲಾರೆನ್ಸ್ ಮನವಿ ಮಾಡಿದ್ದಾರೆ.

200 ಜನರಿಗೆ ವಿದ್ಯೆ, 150 ಜನರಿಗೆ ಹೃದಯ ಚಿಕಿತ್ಸೆ
ಇತ್ತೀಚಿಗೆ ನಟ ರಾಘವ ಲಾರೆನ್ಸ್ ಒಂದು ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ. ಸುಮಾರು 200 ವಿದ್ಯಾರ್ಥಿಗಳಿಗೆ ವಿದ್ಯೆ ಕೊಡಿಸುವಂತಹ ಮಹಾನ್ ಕೆಲಸವನ್ನ ಈ ಟ್ರಸ್ಟ್ ಮೂಲಕ ಮಾಡ್ತಿದ್ದಾರೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಡಜನರಿಗೆ ಹೃದಯ ಚಿಕಿತ್ಸೆ ಕೊಡಿಸುವಂತಹ ಕೆಲಸವೂ ಮಾಡಿದ್ದಾರೆ. ಸುಮಾರು 150 ಜನರಿಗೆ ಸರ್ಜರಿ ಮಾಡಿಸಿ ಜನರ ಮನಸ್ಸು ಗೆದ್ದಿದ್ದಾರೆ. ಜೊತೆಗೆ 60 ಜನರನ್ನ ದತ್ತು ಪಡೆದು ಅವರಿಗೂ ನೆರವಾಗಿದ್ದಾರೆ