For Quick Alerts
  ALLOW NOTIFICATIONS  
  For Daily Alerts

  ರಾಘವೇಂದ್ರ ರಾಜ್ ಕುಮಾರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

  |

  ಸ್ಯಾಂಡಲ್ ವುಡ್ ನ ಲೆಜೆಂಡ್ ಡಾ.ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. ರಾಘಣ್ಣ ದಂಪತಿಗೆ ಅಭಿಮಾನಿಗಳು ಮತ್ತು ಸ್ನೇಹಿತರಿಂದ ಶುಭಾಶಗಳ ಮಹಾಪೂರವೆ ಹರಿದು ಬರುತ್ತಿದೆ.

  ಪುತ್ರರಾದ ವಿನಯ್ ರಾಜ್ ಕುಮಾರ್ ಮತ್ತು ಯುವ ರಾಜ್ ಕುಮಾರ್ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ಈ ಭಾರಿ ರಾಘಣ್ಣ ಮನೆಯಲ್ಲಿ ಇಬ್ಬರ ಮಕ್ಕಳ ಜೊತೆಗೆ ಸೊಸೆ ಕೂಡ ಇರುವುದಿಂದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

  ರಾಘಣ್ಣ ಭೇಟಿ ಮಾಡಿದ ಉಪೇಂದ್ರ: ನೆನಪಾಗ್ತಿದೆ 'ಸ್ವಸ್ತಿಕ್'

  ರಾಘವೇಂದ್ರ ರಾಜ್ ಕುಮಾರ್ ಅವರು ಮಂಗಳ ಅವರದ್ದು ಪ್ರೇಮ ವಿವಾಹ. ರಾಘಣ್ಣ ಅವರು ಮಂಗಳ ಅವರನ್ನು ಮೊದಲು ನೋಡಿದ್ದು ಅಣ್ಣ ಶಿವರಾಜ್ ಕುಮಾರ್ ಮದುವೆಯಲ್ಲಿ. ಮೊದಲ ನೋಟದಲ್ಲೆ ಮಂಗಳ ಅವರ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗಿದೆ. ಆಗಲೆ ಮದುವೆ ಆದರೆ ಮಂಗಳ ಅವರನ್ನೆ ಮದುವೆಯಾಗಬೇಕೆಂದು ನಿರ್ಧರಿಸಿದ್ದರಂತೆ. ಅದರಂತೆ ನಂತರ ಇಬ್ಬರು ಮನೆಯವರ ಒಪ್ಪಿಗೆಯ ಮೇರೆಗೆ ಮದುವೆ ಆಗಿದ್ದಾರೆ.

  ರಾಘವೇಂದ್ರ ರಾಜ್ ಕುಮಾರ್ ಅವರಿಗೆ ವಿನಯ್ ಮತ್ತು ಯುವ ರಾಜ್ ಕುಮಾರ್ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗಷ್ಟೆ ಯುವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಯುವ ಅವರ ಚಿತ್ರರಂಗ ಪ್ರವೇಶಕ್ಕೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ವಿನಯ್ ರಾಜ್ ಕುಮಾರ್ ಆಗಲೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ.

  ರಾಘವೇಂದ್ರ ರಾಜ್ ಕುಮಾರ್ ಸಹ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರಾಘಣ್ಣ ಮತ್ತು ಮಂಗಳ ಜೋಡಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ಇವರು ಹೀಗೆ ನಗುತ ನೂರ್ಕಾಲ ಸಂತೋಷವಾಗಿ ಜೀವನ ನಡೆಸಲಿ ಎನ್ನುವುದು ನಮ್ಮ ಆಸೆ.

  English summary
  Kannada actor Raghavendra rajkumar and his wife Mangala is celebrating their wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X