For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಮಗಳಿಗೆ ಭಾವುಕ ಶುಭಾಶಯ ಹೇಳಿದ ರಾಘವೇಂದ್ರ ರಾಜ್‌ಕುಮಾರ್

  |

  ಡಾ.ರಾಜ್‌ಕುಮಾರ್ ಕುಟುಂಬವನ್ನು ದೊಡ್ಮನೆ ಕುಟುಂಬವೆಂದೇ ಕರೆಯುವ ರೂಢಿ. ಆ ಕುಟುಂಬದವರಲ್ಲಿ ಇದ್ದ ಒಗ್ಗಟ್ಟು, ಪರಸ್ಪರ ಪ್ರೀತಿ ಗೌರವಗಳು, ಅತಿಥಿಗಳನ್ನು ಸತ್ಕರಿಸುವ ರೀತಿ ಎಲ್ಲವೂ ಮಾದರಿ.

  Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

  ರಾಜ್‌ಕುಮಾರ್ ಅವರು ಕಾಳವಾದ ಬಳಿಕವೂ ರಾಜ್‌ಕುಮಾರ್ ಮಕ್ಕಳು ಅದೇ ಪ್ರೀತಿ, ಗೌರವ, ಆದರಗಳನ್ನು ಉಳಿಸಿಕೊಂಡಿದೆ. ಅವರ ಪರಸ್ಪರ ಪ್ರೀತಿ, ಆದರ ಕಡಿಮೆಯಾಗಿಲ್ಲ.

  ಮೇಘನಾ ರಾಜ್ ಭೇಟಿಯಾಗಿ ಧೈರ್ಯ ತುಂಬಿದ ರಾಘವೇಂದ್ರ ರಾಜ್ ಕುಮಾರ್ ಕುಟುಂಬ

  ಇಂದು ಶಿವರಾಜ್‌ ಕುಮಾರ್ ಮೊದಲ ಪುತ್ರಿ ನಿರುಪಮ ಹುಟ್ಟುಹಬ್ಬ. ಆಕೆಯ ಹುಟ್ಟುಹಬ್ಬಕ್ಕೆ ಚಿಕ್ಕಪ್ಪ ರಾಘವೇಂದ್ರ ರಾಜ್‌ಕುಮಾರ್ ಅವರು ಪ್ರೀತಿಪೂರ್ವಕವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ.

  'ನನ್ನ ಸುಖ ನಿನಗೆ, ನಿನ್ನ ಕಷ್ಟ ನನಗೆ ಬರಲಿ'

  ನಿರುಪಮಾ ಅವರ ಹುಟ್ಟುಹಬ್ಬಕ್ಕೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ರಾಘವೇಂದ್ರ ರಾಜ್‌ಕುಮಾರ್, 'ಹುಟ್ಟುಹಬ್ಬದ ಶುಭಾಶಯಗಳು ಮುದ್ದು ಮಗಳೇ '. ನನ್ನ ಸಂತೋಶಗಳೆಲ್ಲಾ ನಿನಗಿರಲಿ, ನಿನ್ನ ದುಖಃಗಳೆಲ್ಲಾ ನನಗೆ ಬರಲಿ' ಎಂದು ಭಾವನಾತ್ಮಕವಾದ ಸಾಲುಗಳನ್ನು ಬರೆದಿದ್ದಾರೆ.

  ಸುಂದರ ವಿಡಿಯೋ ಹಾಕಿರುವ ರಾಘವೇಂದ್ರ ರಾಜ್‌ಕುಮಾರ್

  ಸುಂದರ ವಿಡಿಯೋ ಹಾಕಿರುವ ರಾಘವೇಂದ್ರ ರಾಜ್‌ಕುಮಾರ್

  ಫೇಸ್‌ಬುಕ್‌ನಲ್ಲಿ ಹಳೆಯ ಚಿತ್ರಗಳನ್ನೆಲ್ಲಾ ಸೇರಿಸಿ ಸುಂದರವಾದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಘವೇಂದ್ರ ರಾಜ್‌ಕುಮಾರ್. ನಿರುಪಮಾ, ರಾಜ್‌ಕುಮಾರ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಎಲ್ಲರೂ ಜೊತೆಗಿರುವ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

  ಡಾ.ರಾಜ್ ಕುಮಾರ್ ಫೋನ್ ನಲ್ಲಿ ಮಾತನಾಡುತ್ತಿರುವ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್

  ವೈದ್ಯರಾಗಿರುವ ನಿರುಪಮಾ

  ವೈದ್ಯರಾಗಿರುವ ನಿರುಪಮಾ

  ಶಿವರಾಜ್‌ಕುಮಾರ್ ಅವರ ಮೊದಲ ಪುತ್ರಿ ನಿರುಪಮಾ ಅವರು ವೈದ್ಯರಾಗಿದ್ದು, ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡಿದ್ದಾರೆ. ಅವರು ಡಾ.ದಿಲೀಪ್ ಎಂಬುವರೊಂದಿಗೆ 2015 ರಲ್ಲಿ ವಿವಾಹವಾದರು.

  ಮೇಘನಾ ರಾಜ್ ಅನ್ನು ಭೇಟಿ ಮಾಡಿದ್ದ ರಾಘವೇಂದ್ರ ರಾಜ್‌ಕುಮಾರ್

  ಮೇಘನಾ ರಾಜ್ ಅನ್ನು ಭೇಟಿ ಮಾಡಿದ್ದ ರಾಘವೇಂದ್ರ ರಾಜ್‌ಕುಮಾರ್

  ರಾಘವೇಂದ್ರ ರಾಜ್‌ಕುಮಾರ್ ಅವರು ಆರೋಗ್ಯ ಸಮಸ್ಯೆಯ ಕಾರಣ ಸಿನಿಮಾ ರಂಗದಿಂದ ತುಸು ಅಂತರ ಕಾಯ್ದುಕೊಂಡಿದ್ದಾರೆ. ಅವರು ತ್ರಯಂಬಕ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿರಂಜೀವಿ ಸರ್ಜಾ ನಿಧನದ ನಂತರ ಅವರ ಮನೆಗೆ ಭೇಟಿ ನೀಡಿ ಮೇಘನಾ ರಾಜ್ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು.

  English summary
  Raghavendra Rajkumar birthday wish to Shiva Rajkumar's daughter Nirupama. She is a doctor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X