For Quick Alerts
  ALLOW NOTIFICATIONS  
  For Daily Alerts

  ರಾಘಣ್ಣಗೆ ಸುದೀಪ್-ದರ್ಶನ್ ಜೊತೆ ನಟಿಸುವಾಸೆ

  By Harshitha
  |

  ಅಣ್ಣಾವ್ರ ಮುದ್ದಿನ ಮಗ, ಕನ್ನಡ ಚಿತ್ರ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ರವರಿಗೆ ಇವತ್ತು 50ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನ ಇಂದು ಅಭಿಮಾನಿಗಳೊಂದಿಗೆ ಮತ್ತು ಶಿವಣ್ಣ, ಪುನೀತ್, ವಿನಯ್ ಸೇರಿದಂತೆ ತಮ್ಮ ಕುಟುಂಬದೊಂದಿಗೆ ಸರಳವಾಗಿ ಮನೆಯಲ್ಲಿ ಆಚರಿಸಿಕೊಂಡರು.

  ರಿಯಲ್ ಲೈಫ್ ನಲ್ಲಿ ಹಾಫ್ ಸೆಂಚುರಿ ಬಾರಿಸಿರುವ ರಾಘಣ್ಣಗೆ ಮತ್ತೆ ಬಣ್ಣ ಹಚ್ಚುವ ಆಸೆ ಇದ್ಯಂತೆ. ಉತ್ತಮ ಪಾತ್ರಗಳು ಲಭಿಸಿದರೆ, ಅದ್ರಲ್ಲೂ ಸುದೀಪ್ ಮತ್ತು ದರ್ಶನ್ ಜೊತೆ ನಟಿಸುವ ಚಾನ್ಸ್ ಸಿಕ್ಕರೆ ರಾಘಣ್ಣ ಖಂಡಿತ ಆಕ್ಟ್ ಮಾಡ್ತಾರಂತೆ. [ಹರಕೆ ತೀರಿಸಲು ಗೆಜ್ಜಲಗೆರೆ ಸಾಯಿಬಾಬಾನ ಸನ್ನಿಧಿಗೆ ರಾಘಣ್ಣ]

  ಹಾಗಂತ ಖುದ್ದು ರಾಘಣ್ಣ ಹೇಳಿದರು. ''ನನಗೂ ನಟಿಸುವ ಆಸೆ ಇದೆ. ಉತ್ತಮ ಪಾತ್ರ ಸಿಕ್ಕರೆ ಖಂಡಿತ ಆಕ್ಟ್ ಮಾಡ್ತೀನಿ. ಸುದೀಪ್-ದರ್ಶನ್ ಜೊತೆ ನಟಿಸುವ ಆಸೆ ಇದೆ. ಹಾಗೆ, ವಿನಯ್ ಜೊತೆಗೂ ಆಕ್ಟ್ ಮಾಡಬೇಕು ಅಂದುಕೊಂಡಿದ್ದೀನಿ'' ಅಂತ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.[ಪಾದ ತೊಳೆದು ಕಳುಹಿಸುತ್ತೇವೆಂದು ರಾಘಣ್ಣ ಹೇಳಿದ್ದು ಯಾರಿಗೆ?]

  ಅನಾರೋಗ್ಯದಿಂದ ಚೇತರಿಸಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ಆದಷ್ಟು ಬೇಗ ಅವರ ಆಸೆ ಈಡೇರಲಿ ಅಂತ ನಾವೂ ಹಾರೈಸೋಣ.

  English summary
  Kannada Actor-Producer Raghavendra Rajkumar has expressed his desire to share the screen space with Kannada Actors Sudeep and Darshan. Meanwhile, Raghanna is celebrating his 50th birthday today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X