For Quick Alerts
  ALLOW NOTIFICATIONS  
  For Daily Alerts

  ಸರ್ಜಾ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ್ ಕುಮಾರ್ ಫ್ಯಾಮಿಲಿ

  |

  ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ 8 ದಿನಗಳು ಕಳೆದಿವೆ. ಚಿರಂಜೀವಿ ಸರ್ಜಾ ಅವರ ಹಠಾತ್ ಅಗಲಿಕೆ ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ. ಚಿರು ಇನ್ನಿಲ್ಲ ಎನ್ನುವ ಸತ್ಯವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ಕಳೆದುಕೊಂಡ ಇಡೀ ಸರ್ಜಾ ಕುಟುಂಬ ನೋವಿನಲ್ಲಿದೆ.

  ಈ ಹಿನ್ನಲೆ ರಾಘವೇಂದ್ರ ರಾಜ್ ಕುಮಾರ್ ಸರ್ಜಾ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಕಳೆದ ಭಾನುವಾರ ಜೂನ್ 7 ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿರು ಸಾವಿಗೆ ಇಡೀ ಸ್ಯಾಂಡಲ್ ವುಡ್ ಮಂದಿ ಕಂಬನಿ ಮಿಡಿದಿದೆ. ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಚಿರು ಸಾವು ಕುಟುಂಬದವರಿಗೆ ಆಘಾತವುಂಟು ಮಾಡಿದೆ.

  ಚಿರು ನಿಧನ ಹೊಂದುವ ಹಿಂದಿನ ದಿನ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡ ಧ್ರುವ ಸರ್ಜಾಚಿರು ನಿಧನ ಹೊಂದುವ ಹಿಂದಿನ ದಿನ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

  ದುಃಖದಲ್ಲಿರುವ ಸರ್ಜಾ ಕುಟುಂಬದವರನ್ನು ಭೇಟಿಯಾಗಿ ಕುಟುಂಬಸ್ಥರನ್ನು ಮಾತನಾಡಿಸಿ ಅವರಿಗೆ ಧೈರ್ಯ ಹೇಳಿದ್ದಾರೆ. ಇನ್ನು ರಾಘವೇಂದ್ರ ರಾಜ್ ಕುಮಾರ್ ದಂಪತಿ ಮತ್ತು ಅವರ ಪುತ್ರರಾದ ವಿನಯ್ ರಾಜ್ ಕುಮಾರ್ ಮತ್ತು ಯವ ರಾಜ್ ಕುಮಾರ್ ಕೂಡ ಇದ್ದರು. ಧ್ರುವ ಸರ್ಜಾ, ಅರ್ಜುನ್ ಸರ್ಜಾ, ತಾಯಿಯನ್ನು ಮಾತನಾಡಿಸಿ ಸಾಂತ್ವನ ಹೇಳಿದ್ದಾರೆ.

  ನಟ ಧ್ರುವ ಸರ್ಜಾ ಅಣ್ಣನ ನೆನಪನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. 'ಅಣ್ಣ ಮತ್ತೆ ವಾಪಸ್ ಬಾ, ನೀನೆ ನನ್ನ ಪ್ರಪಂಚ' ಎಂದು ಬರೆದುಕೊಳ್ಳುತ್ತಿದ್ದಾರೆ. ಪ್ರತೀ ದಿನ ಕಾಡುವ ಅಣ್ಣನ ನೆನಪು ನೋವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ದುಃಖದಲ್ಲಿರುವ ಸರ್ಜಾ ಕುಟುಂಬಕ್ಕೆ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಧೈರ್ಯ ತುಂಬಿದೆ.

  English summary
  Actor Raghavendra Rajkumar family visit to Chiranjeevi Sarja house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X