For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ಬಿಡುಗಡೆ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಇದು

  |

  ಸಿನಿಮಾಗಳ ಪಾಲಿಗೆ ಕರಾಳ ವರ್ಷವಾದ 2020 ಮುಗಿಯಲು ಕೆಲವೇ ಗಂಟೆಗಳು ಬಾಕಿ ಇದೆ. ಹೊಸ ವರ್ಷದಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಜನರ ಮುಂದೆ ಬರಲು ಸಾಲು-ಸಾಲು ಸಿನಿಮಾಗಳು ತಯಾರಾಗಿವೆ.

  ಶುಕ್ರವಾರ ಜನವರಿ 1 ರಂದು ರಾಘವೇಂದ್ರ ರಾಜ್‌ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ 'ರಾಜತಂತ್ರ' ಅಂದೇ ಬಿಡುಗಡೆ ಆಗುತ್ತಿದೆ. ಹೊಸ ವರ್ಷಕ್ಕೆ ಬಿಡುಗಡೆ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಇದೇ ಆಗಿದೆ.

  ನಿವೃತ್ತ ಸೈನಿಕನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ಸಿನಿಮಾದಲ್ಲಿ ತಮ್ಮ ಬುದ್ಧಿಶಕ್ತಿಯಿಂದ ದುಷ್ಟರನ್ನು ಮಟ್ಟ ಹಾಕಲಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.

  ಅನಾರೋಗ್ಯಕ್ಕೆ ಒಳಗಾಗಿ ನಂತರ ಚೇತರಿಸಿಕೊಂಡು ಮತ್ತೆ ನಟನೆ ಮುಂದುವರೆಸಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.

  ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ. ಶ್ರೀ ಸುರೇಶ್ ಸಂಗೀತ, ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ, ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೇಟ್ ಶಿವು ಅವರುಗಳ ಸಾಹಸ ನಿರ್ದೇಶನ ಈ ಸಿನಿಮಾಕ್ಕೆ ಇದೆ.

  ರಾಘವೇಂದ್ರ ರಾಜ್‌ಕುಮಾರ್ ಅವರೊಟ್ಟಿಗೆ ಸಾಕಷ್ಟು ನಟರು ಸಿನಿಮಾದಲ್ಲಿದ್ದಾರೆ. ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ಪ್ರಕಾಶ್ ಕಾರಿಯಪ್ಪ, ನೀನಾಸಂ ಅಶ್ವಥ್, ಮುನಿರಾಜು, ಹೋಳಿ ವೆಂಕಟೇಶ್, ಪ್ರತಾಪ್ ಸಿಂಹ ಅಗರ, ಶಿವಾನಂದ, ವೆಂಕಟೇಶ್ ಪ್ರಸಾದ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ.

  15 ವರ್ಷ ಹಳೇ ನೆನಪನ್ನು ಹಂಚಿಕೊಂಡ Kichcha Sudeep | Filmibeat Kannada

  ಹೊಸ ವರ್ಷದಲ್ಲಿ ಸಾಲು-ಸಾಲು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ. ಹಲವು ಸ್ಟಾರ್ ನಟರುಗಳು ತಮ್ಮ ಸಿನಿಮಾಗಳನ್ನು ಜನವರಿಯಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ.

  English summary
  Raghavendra Rajkumar's Rajatantra Is The First Movie To Release In 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion