twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಸಿನಿಮಾ 'ನಂಜುಂಡಿ ಕಲ್ಯಾಣ' ಅಲ್ಲ: ಮೊದಲ ಸಿನಿಮಾ ಸೋಲು ನೆನೆದ ರಾಘಣ್ಣ

    |

    ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಅಭಿಮಾನಿಗಳನ್ನೇ ದೇವರು ಎಂದ ಡಾ.ರಾಜ್‌ಕುಮಾರ್‌ ಅವರ ಜೀವನ ಬಹುತೇಕ ಕಲಾವಿದರಿಗೆ ಸ್ಫೂರ್ತಿ. ಕನ್ನಡ ಚಿತ್ರರಂಗಕ್ಕೆ ಒಂದು ಮೈಲುಗಲ್ಲು ಸೃಷ್ಟಿಸಿದವರು ಡಾ.ರಾಜ್‌ಕುಮಾರ್‌, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದರೂ ಸಹ ಡಾ.ರಾಜ್‌ ಅವರದ್ದು ಸರಳ ಜೀವನ, ಅವರ ನಡೆ ನುಡಿ ಎಂಥವರನ್ನೂ ಆಕರ್ಷಿಸುತ್ತಿತ್ತು.

    ಡಾ. ರಾಜ್‌ ಕುಮಾರ್‌ ತಮ್ಮ ಮಕ್ಕಳಿಗೂ ತಮ್ಮದೇ ಜೀವನ ಶೈಲಿಯನ್ನು ಕಲಿಸುವುದರ ಜೊತೆಗೆ ಸಿನಿಮಾ ರಂಗದಲ್ಲಿ ತಾವು ಕಂಡ ಏರಿಳಿತಗಳನ್ನು ಹೇಳಿ ಜೀವನಕ್ಕೆ ಭರವಸೆಯನ್ನು ತುಂಬುತ್ತಿದ್ದರು ಎಂದು ನಟ ರಾಘವೇಂದ್ರ ರಾಜ್‌ಕುಮಾರ್‌ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ತಂದೆ ತಮಗೆ ಕಲಿಸಿದ ಜೀವನ ಪಾಠದ ಬಗ್ಗೆ ಮಾತನಾಡಿದ್ದಾರೆ.

    ಜೀವನದಲ್ಲಿ ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟಾಗ ಡಾ.ರಾಜ್‌ಕುಮಾರ್‌ ಅವರ ಪುತ್ರನಾಗಿದ್ದರೂ ಸಹ ರಾಘವೇಂದ್ರ ರಾಜ್‌ಕುಮಾರ್ ಅವರ ಮೊದಲ ಸಿನಿಮಾದಲ್ಲಿ ಸೋಲು ಕಾಣುತ್ತಾರೆ. ಚಿತ್ರ ಸೋಲಿನ ಬಳಿಕ ಅಪ್ಪಾಜಿ ನೀಡಿದ ಧೈರ್ಯ, ಮತ್ತೆ ಬಂದ ಅವಕಾಶಗಳು, ಮತ್ತೆ ಗೆಲುವು ಕಂಡ ಚಿತ್ರದ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿದ್ದಾರೆ.

    ಒಂದು ಪ್ರಯತ್ನ ಮಾಡೋಣ ಎಂದು ಸಿನಿಮಾ ರಂಗಕ್ಕೆ ಬಂದೆ

    ಒಂದು ಪ್ರಯತ್ನ ಮಾಡೋಣ ಎಂದು ಸಿನಿಮಾ ರಂಗಕ್ಕೆ ಬಂದೆ

    ಓದು ಬದಿಗಿಟ್ಟು ಸಿನಿಮಾ ರಂಗಕ್ಕೆ ಬಂದ ವಿಚಾರವಾಗಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌, ನಾನು ಮೊದಲು ಬೆಂಗಳೂರಿನ ಮೆಡಿಕಲ್‌ ಕಾಲೇಜಿಗೆ ಸೇರುತ್ತೇನೆ. ಇಲ್ಲಿ ಜನ ನನ್ನನ್ನು ಬೇರೆ ರೀತಿ ನೋಡಲು ಆರಂಭಿಸುತ್ತಾರೆ. ರಾಜ್‌ಕುಮಾರ್ ಅವರ ಮಗ ಎಂದು ಟೀಚರ್ಸ್ ಕೂಡ ಬೇರೆ ರೀತಿಯಲ್ಲಿ ನೋಡುತ್ತಾರೆ. ಹೀಗಾಗಿ ಇಲ್ಲಿ ಬೇಡ ಎಂದು ಮದರಾಸ್‌ಗೆ ವರ್ಗಾವಣೆ ಮಾಡಿಕೊಂಡೆ. ಆದರೆ ಬೆಂಗಳೂರು ನನ್ನನ್ನು ಸೆಳೆಯುತ್ತಿತ್ತು. ಆ ಸಮಯದಲ್ಲಿ ಶಿವಣ್ಣ ಕೂಡ ಸಿನಿಮಾಗೆ ಬಂದಿದ್ದರು ಹೀಗಾಗಿ ಅಲ್ಲಿ ನಾನು ಒಬ್ಬನೇ ಆದೆ ಎನ್ನುವ ನೋವು ಕಾಡುತಿತ್ತು ಹೀಗಾಗಿ ಒಂದು ಪ್ರಯತ್ನ ಮಾಡೋಣ ಎಂದು ಸಿನಿಮಾ ರಂಗಕ್ಕೆ ಬಂದೆ ಎಂದರು.

    ಮುಂದೊಂದು ದಿನ ನೀನು ನೊಂದು ಕೊಳ್ಳಬಾರದು ಎಂದಿದ್ದರು

    ಮುಂದೊಂದು ದಿನ ನೀನು ನೊಂದು ಕೊಳ್ಳಬಾರದು ಎಂದಿದ್ದರು

    ನಮ್ಮ ತಂದೆ ಮೊದಲಿನಂದಲೂ ನಮಗೆ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಿದ್ದರು. ನಾನು ಅವರ ಬಳಿ ಮದರಾಸ್‌ನಿಂದ ಬಂದು ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡೆ. ಆಗ ಅವರು ನನ್ನ ಮಗ ಅಲ್ವಾ ನಿನಗೆ ವಿದ್ಯಾ ಎಲ್ಲಿಂದ ಹತ್ತುತ್ತದೆ ಹೇಳು ಎಂದು ಬಾ ಕಂದ ಎಂದು ವಾಪಸ್‌ ಕರೆದರು. ಆಗ ತಂದೆ ನನಗೊಂದು ಮಾತು ಹೇಳಿದ್ದರು. ಜೀವನದಲ್ಲಿ ಮುಂದೊಂದು ದಿನ ನೀನು ನೊಂದು ಕೊಳ್ಳಬಾರದು. ಓದು ಬಿಟ್ಟು ಸಿನಿಮಾಗೆ ಬಂದೆ ಎಂದು ನೋಂದುಕೊಳ್ಳಬಾರದು ಎಂದು ಮೊದಲೇ ಹೇಳಿದ್ದರು ಅಪ್ಪಾಜಿ ಎಂದು ರಾಘಣ್ಣ ಹೇಳಿದ್ದಾರೆ.

    ಮೊದಲ ಸಿನಿಮಾ ಸೋಲು ಕಂಡಿತ್ತು

    ಮೊದಲ ಸಿನಿಮಾ ಸೋಲು ಕಂಡಿತ್ತು

    ತುಂಬಾ ಜನ ನನ್ನ ಮೊದಲ ಸಿನಿಮಾ ನಜುಂಡಿ ಕಲ್ಯಾಣ ಎಂದುಕೊಂಡಿದ್ದಾರೆ. ಆದರೆ ನನ್ನ ಮೊದಲ ಸಿನಿಮಾ ಚಿರಂಜೀವಿ, ಸುಧಾಕರ್‌, ಶಿವಣ್ಣ ಅವರ ಸಿನಿಮಾಗಳಿಗೆ ಹೋಲಿಸಿದಾಗ ನನ್ನ ಮೊದಲ ಸಿನಿಮಾ ಸುಮಾರಾಗಿತ್ತು. ಇದರಿಂದ ನಾನು ಮನೆಯಲ್ಲಿ ತುಂಬಾ ಸಪ್ಪಗಿದ್ದೆ. ಆಗ ತಂದೆಯವರು ಬಂದು ತಲೆ ಮೇಲೆ ಕೈಯಿಟ್ಟು ಯಾಕೆ ಕಂದ ಏನಾಯಿತು ಎಂದು ವಿಚಾರಿಸಿದ್ದರು. ಬಳಿಕ ನನ್ನನ್ನು ತೊಡೆ ಮೇಲೆ ಕೂರಿಸಿಕೊಂಡು ಸಿನಿಮಾ ಏಳಿಗೆಯಾಗಲಿಲ್ಲ ಅಂತಾ ಬೇಸವಾ ಕೇಳಿದ್ರ, ಆ ಬೇಜಾರು ನಿನಗೆ ಇರಬೇಕೂ ಕೂಡ ಎಂದು ತಂದೆ ಸಮಧಾನ ಮಾಡಿದರು ಎಂದರು.

    ಸಮಯ ಬರುವರೆಗೂ ಕಾಯಬೇಕು ಎಂದಿದ್ದರು

    ಸಮಯ ಬರುವರೆಗೂ ಕಾಯಬೇಕು ಎಂದಿದ್ದರು

    ಅವತ್ತು ದೊಡ್ಡ ನಟರಾಗಿದ್ದ ನನ್ನ ತಂದೆ ನಾನಿದ್ದೇನೆ ಎಂದು ಹೇಳಲಿಲ್ಲ. ಬದಲಿಗೆ ಬೀಜ ಬಿತ್ತಿದ ದಿನ ಹಣ್ಣು ತಿನ್ನಲು ಆಗಲ್ಲ. ಆ ಬೀಜ ಬುಡದಲ್ಲಿ ಗಟ್ಟಿಯಾಗಿ, ಮರವಾಗಿ, ಬಳಿಕ ಹಣ್ಣಾಗಿ ಜನರ ಬಾಯಿಗೆ ಸೇರಬೇಕು. ಅಲ್ಲಿಯವರೆಗೂ ಸಮಯ ಬೇಕು. ಕಾಯಬೇಕು ಧೈರ್ಯ ಬೇಕು ಎಂದು ಬುದ್ಧಿ ಮಾತು ಹೇಳಿ ಬಳಿಕ 'ನಂಜುಂಡಿ ಕಲ್ಯಾಣ' ಮಾಡಿದರು. ಮತ್ತೆ ಆ ಸಿನಿಮಾ ಹಿಟ್‌ ಆದಾಗ ಅವರು ಬಂದು ಅದರ ಯಶಸ್ಸಿನ ಬಗ್ಗೆ ಮಾತನಾಡಿಲ್ಲ. ನೀನು ಬಣ್ಣ ಹಚ್ಚು, ವ್ಯವಹಾರಗಳನ್ನು ನಿನ್ನ ತಾಯಿ ನೋಡಿಕೊಳ್ಳುತ್ತಾರೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು ಎಂದು ರಾಘಣ್ಣ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    Read more about: raghavendra rajkumar sandalwood
    English summary
    Sandalwood actor Raghavendra rajkumar shared his first movie experience.
    Saturday, October 8, 2022, 18:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X