»   » ಹರಕೆ ತೀರಿಸಲು ಗೆಜ್ಜಲಗೆರೆ ಸಾಯಿಬಾಬಾನ ಸನ್ನಿಧಿಗೆ ರಾಘಣ್ಣ

ಹರಕೆ ತೀರಿಸಲು ಗೆಜ್ಜಲಗೆರೆ ಸಾಯಿಬಾಬಾನ ಸನ್ನಿಧಿಗೆ ರಾಘಣ್ಣ

Posted By:
Subscribe to Filmibeat Kannada

ಡಾ.ರಾಜ್ ಕುಟುಂಬ ಇದೀಗ ದೇವರ ಮೊರೆ ಹೋಗಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪವಿರುವ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿ ಬಾಬಾ ಅವರ ಕೃಪಾಕಟಾಕ್ಷೆ ಪಾತ್ರರಾಗಿದ್ದಾರೆ.

ಈ ಮೊದಲು ರಾಜ್ ಕುಟುಂಬದ ಕುಡಿ ಚಿತ್ರ ನಿರ್ಮಾಪಕ, ನಟ ರಾಘವೇಂದ್ರ ರಾಜ್ ಕುಮಾರ್ ಅವರು ಪಾರ್ಶ್ವವಾಯು ಪೀಡಿತರಾಗಿ ಒಂದು ಕೈಯ ಸ್ವಾಧೀನ ಕಳೆದುಕೊಂಡಿದ್ದ ಸಂದರ್ಭದಲ್ಲಿ ಶಿರಡಿ ಸಾಯಿಬಾಬ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

Raghavendra Rajkumar to offer Silver Seat to Shirdi Saibaba Gejjelagere

ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬ ಕೃಪೆಯಿಂದ ರಾಘವೇಂದ್ರ ಅವರು ಸಂಪೂರ್ಣ ಗುಣಮುಖರಾಗಿದ್ದು, ಬೆಳ್ಳಿ ಸಿಂಹಾಸನ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಜುಲೈ 30ರಂದು ರಾಜ್ ಕುಟುಂಬ ವರ್ಗದವರು ಶಿರಡಿ ಸಾಯಿಬಾಬ ದೇವಾಲಯಕ್ಕೆ ಬೆಳ್ಳಿ ಸಿಂಹಾಸನ ಅರ್ಪಿಸಲಿದ್ದಾರೆ.

ಏನಾಗಿತ್ತು? :ಈ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ರಾಘವೆಂದ್ರ ರಾಜ್ ಕುಮಾರ್ ಅವರಿಗೆ ಒಂದು ಕೈನ ಸ್ವಾಧೀನ ಕಳೆದುಕೊಂಡಿತ್ತು. ದೇಶ, ವಿದೇಶದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಲಿಲ್ಲ.

Raghavendra Rajkumar to offer Silver Seat to Shirdi Saibaba Gejjelagere

ಈ ಸಂದರ್ಭದಲ್ಲಿ ರಾಜ್ ಕುಟುಂಬದವರು ಮದ್ದೂರು ತಾಲೂಕು ಗೆಜ್ಜಲಗೆರೆ ಸಮೀಪವಿರುವ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿ, ಬಾಬಾ ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಘಣ್ಣ ಭಕ್ತಿಪರವಶರಾಗಿ ತಾವೇ ನಿದಾನಕ್ಕೆ ಕೈ ಮುಗಿಯಲಾರಂಭಿಸಿದರಂತೆ.

ಇದರಿಂದ ಸಂತೋಷಗೊಂಡ ರಾಜ್ ಕುಟುಂಬ ಇದು ಬಾಬಾ ಅವರ ಪವಾಡ ಅಂತಾನೇ ನಂಬಿ ಇದೀಗ ಬಾಬಾ ಅವರಿಗೆ ವಿಶೇಷ ಸೇವೆ ಮಾಡುತ್ತಿದ್ದಾರೆ. ಇದೀಗ ವರನಟ ಡಾ.ರಾಜ್ ಕುಮಾರ್ ಅವರ ಹೆಸರಿನಲ್ಲಿ ಜುಲೈ 30ರಂದು ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಎಲ್ಲಾ ಕುಟುಂಬ ವರ್ಗದವರು ಶಿರಡಿ ಸಾಯಿ ಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಅರ್ಪಿಸಲಿದ್ದಾರೆ.

English summary
Artist Raghavendra Rajkumar to offer Silver seat to Shirdi Saibaba temple Gejjelagere in Mandya Taluk, Raghavenra Rajkumar and family will visit the temple and offer special prayers. One may recall actor's left hand suffered a with a stroke which is completly cured now with God's grace

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada