For Quick Alerts
  ALLOW NOTIFICATIONS  
  For Daily Alerts

  ರಾಘವೇಂದ್ರ ರಾಜ್ ಚಿಕಿತ್ಸೆಗಾಗಿ ಸಿಂಗಪುರಕ್ಕೆ

  By Mahesh
  |

  ವರನಟ ಡಾ.ರಾಜ್ ಕುಮಾರ್ ಅವರ ಎರಡನೇ ಮಗ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ (48) ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 'ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಸುಮ್ಮನೆ ಯಾರೂ ಗಾಳಿಸುದ್ದಿಗೆ ಕಿವಿ ಕೊಡಬೇಡಿ.

  ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಎಂದಿನಂತೆ ಜಿಮ್, ಕಚೇರಿಗೆ ಹೋಗಿ ಬರುತ್ತಿದ್ದೇನೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ನರಮಂಡಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಸಿಂಗಪುರದ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಸುದ್ದಿವಾಹಿನಿಯ ಜತೆ ಬುಧವಾರ ಬೆಳಗ್ಗೆ ಮಾತನಾಡುತ್ತಾ ಹೇಳಿದರು.

  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ತುಂಬಾ ಒಳ್ಳೆ ಚಿಕಿತ್ಸೆ ನೀಡುತ್ತಾರೆ ಎಂದು ನಮ್ಮ ವೈದ್ಯರ ಸಲಹೆ ಮೇರೆಗೆ ಸಿಂಗಪುರಕ್ಕೆ ಹೋಗುತ್ತಿದ್ದೇವೆ.ನನ್ನ ಜತೆ ಶಿವರಾಜ್ ಕುಮಾರ್ ಅವರು ಬರುತ್ತಿದ್ದಾರೆ. ನಾಳೆ ಭಜರಂಗಿ ಚಿತ್ರ ರಿಲೀಸ್ ಇದೆ. ಚಿತ್ರ ಬಿಡುಗಡೆಯಾದ ನಂತರ ಶಿವರಾಜ್ ಜತೆ ನಾನು ಸಿಂಗಪುರಕ್ಕೆ ತೆರಳುತ್ತಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಹೇಳಿದ್ದಾರೆ.

  ಅಕ್ಟೋಬರ್ 16ರಂದು ರಾಘವೇಂದ್ರ ರಾಜ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಕುಸಿದು ಬಿದ್ದಿದ್ದರು. ಕೂಡಲೆ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ನರವ್ಯೂಹದಲ್ಲಿ ರಕ್ತಹೆಪ್ಪುಗಟ್ಟಿದ್ದನ್ನು ವೈದ್ಯರು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದರು.

  ರಾಘವೇಂದ್ರ ರಾಜಕುಮಾರ್ ಅವರಿಗೆ ಈ ಮುಂಚೆ ಆಂಜಿಯೋಗ್ರಾಮ್ ಪರೀಕ್ಷೆ ಮಾಡಲಾಗಿತ್ತು. ಹೃದಯ ಸಂಬಂಧಿ ಕಾಯಿಲೆಗಳ ಭಯ ಎಂಬುದನ್ನು ವೈದ್ಯರು ದೃಢಪಡಿಸಿದ್ದರು. ಇತ್ತೀಚೆಗೆ ಆಂಜಿಯೊಪ್ಲಾಸ್ಟಿ ಸರ್ಜರಿ ಮಾಡಲಾಗಿತ್ತು. ಹಾಗೂ ಕೆಲ ದಿನಗಳ ನಂತರ ರಾಘವೇಂದ್ರ ಅವರು ವಜ್ರೇಶ್ವರಿ ಕಂಬೈನ್ಸ್ ಗೆ ತೆರಳಿ ನಿತ್ಯ ಕೆಲಸದಲ್ಲಿ ನಿರತರಾಗಿದ್ದರು.

  ರಾಘಣ್ಣ ಹುಷಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಡಿ.13 ರಂದು ಶಿವಣ್ಣನ ಜತೆ ಸಿಂಗಪುರದಲ್ಲಿರುವ ಮೌಂಟ್ ಎಲಿಜಬೇತ್ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಭಜರಂಗಿ ಚಿತ್ರದ ರಿಲೀಸ್ ಗಾಗಿ ಕಾಯುತ್ತಿದ್ದೇವೆ. ನಂತರ ಸಿಂಗಪುರಕ್ಕೆ ತೆರಳುತ್ತಿದ್ದಾರೆ. ಅಭಿಮಾನಿಗಳು ಯಾವುದೇ ರೀತಿ ಆತಂಕಪಡಲಾಗಿಲ್ಲ ಎಂದು ಪುನೀತ್ ರಾಜಕುಮಾರ್ ಪ್ರತಿಕ್ರಿಯಿಸಿದ್ದಾರೆ.

  English summary
  Kannada actor, producer Raghavendra Rajkumar Plan to get treatment from Singapore for specialized treatment to brain clot and related ailment. Raghavendra was discharged from the Manipal hospital 11th November. Will visit Singapore after Bhajarangi movie release said Raghavendra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X