»   »  14 ವರ್ಷ ವನವಾಸ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್

14 ವರ್ಷ ವನವಾಸ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್

Posted By:
Subscribe to Filmibeat Kannada
ರಾಘವೇಂದ್ರ ರಾಜ್ ಕುಮಾರ್14 ವರ್ಷ ವನವಾಸ ಮುಗಿಸಿ ಮತ್ತೆ ಬಂದ್ರಾ ? | Filmibeat Kannada

ರಾಘವೆಂದ್ರ ರಾಜ್ ಕುಮಾರ್ ಅಂದ ತಕ್ಷಣ ಅವರು ಅಭಿನಯಿಸಿದ ಸಿನಿಮಾಗಳು ನೆನಪಾಗುತ್ತವೆ. ವಿಶೇಷ ಅಂದರೆ ರಾಘಣ್ಣ ಅಭಿನಯಸಿದ ಚಿತ್ರಗಳ ಹಾಡುಗಳೆಲ್ಲವೂ ಸೂಪರ್ ಹಿಟ್. ಹಿಂದಿಗೂ ರಾಘವೇಂದ್ರ ರಾಜ್ ಕುಮಾರ್ ಅವರ ಸಿನಿಮಾಗಳು ಟಿವಿಯಲ್ಲಿ ಬಂದರೆ ಅಭಿಮಾನಿಗಳು ಖುಷಿ ಖುಷಿಯಿಂದ ನೋಡುತ್ತಾರೆ. ಅಷ್ಟರ ಮಟ್ಟಿಗೆ ರಾಘಣ್ಣನ ಚಿತ್ರಗಳು ನೋಡುಗರನ್ನ ಆಕರ್ಷಣೆ ಮಾಡಿತ್ತು.

ರಾಘವೆಂದ್ರ ರಾಜ್ ಕುಮಾರ್ ಕೇವಲ ಅಭಿನಯ ಮಾತ್ರವಲ್ಲದೆ ಗಾಯನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಅವರದ್ದೇ ಚಿತ್ರದಲ್ಲಿ ಹಾಡುಗಳನ್ನೂ ಹಾಡಿದ್ದರು. ಅವರ ಕಂಠದಿಂದ ಬಂದ ಹಾಡುಗಳಿಗೂ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ರಾಘಣ್ಣ ಆರೋಗ್ಯ ಸಮಸ್ಯೆಯಿಂದ ಹಾಡುವುದನ್ನು ಹಾಗೂ ಅಭಿನಯಿಸುವುದನ್ನು ನಿಲ್ಲಿಸಿದ್ದರು.

ಹೆಸರು ಬದಲಾವಣೆ ಗುಟ್ಟು ಬಿಚ್ಚಿಟ್ಟ ರಾಜ್ ಮೊಮ್ಮಗ

ಸುಮಾರು 14 ವರ್ಷದ ಹಿಂದೆ 'ಪಕ್ಕದ ಮನೆ ಹುಡುಗಿ' ಚಿತ್ರವೇ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಿದ ಕಡೆಯ ಸಿನಿಮಾ. ಅದಾದ ನಂತರ ನಿರ್ಮಾಣದ ಕೆಲಸವನ್ನ ನೋಡಿಕೊಂಡಿದ್ದರು. ಆದರೆ ರಾಘಣ್ಣ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಹಾಗಾದರೆ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ವಿಲನ್ ಆದ ರಾಘವೇಂದ್ರ ರಾಜ್ ಕುಮಾರ್

ರಾಘವೇಂದ್ರ ರಾಜ್ ಕುಮಾರ್ ಮತ್ತೆ ಸಿನಿಮಾದಲ್ಲಿ ಅಭಿನಯಿಸಲು ಮನಸ್ಸು ಮಾಡಿದ್ದಾರೆ. ಚಿಲಂ ಎಂಬ ಸಿನಿಮಾದಲ್ಲಿ ರಾಘಣ್ಣ ಇದೇ ಮೊದಲ ಬಾರಿಗೆ ಖಳನಟನಾಗಿ ಅಭಿನಯಿಸುವ ಸಾಧ್ಯತೆಗಳು ಹೆಚ್ಚಾಗಿದೆಯಂತೆ.

ಮನೋರಂಜನ್ ಜೊತೆ ರಾಘಣ್ಣ

ಚಿಲಂ ಮನೋರಂಜನ್ ರವಿಚಂದ್ರನ್ ನಾಯಕನಾಗಿ ಅಭಿನಯ ಮಾಡುತ್ತಿರುವ ಸಿನಿಮಾ. ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಆಕ್ಟ್ ಮಾಡುತ್ತಿದ್ದಾರೆ.

ಕ್ವಾಟ್ಲೆ ನಿರ್ದೇಶಕರ ಸಿನಿಮಾ

ಈ ಹಿಂದೆ ಚಂದನವನದಲ್ಲಿ ಕ್ವಾಟ್ಲೆ ಎನ್ನುವ ಸಿನಿಮಾವನ್ನ ನಿರ್ದೇಶನ ಮಾಡಿ ಗುರುತಿಸಿಕೊಂಡಿದ್ದ ಚಂದ್ರಕಲಾ ಚಿಲಂ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಬಗೆಗಿನ ಕಥೆಯ ಚಿತ್ರವಿದು.

ಕಥೆ ಕೇಳಿರುವ ರಾಘವೇಂದ್ರ ರಾಜ್ ಕುಮಾರ್

ಈಗಾಗಲೇ ಚಿಲಂ ಸಿನಿಮಾದ ಕಥೆಯನ್ನ ಕೇಳಿರುವ ರಾಘವೇಂದ್ರ ರಾಜ್ ಕುಮಾರ್ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರಂತೆ. ಸಾಕಷ್ಟು ದಿನಗಳ ನಂತರ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದು ಅಂತಿಮ ನಿರ್ಧಾರವಷ್ಟೇ ಬಾಕಿ ಉಳಿದಿದೆ.

ಹೆಸರು ಬದಲಿಸಿಕೊಳ್ಳುವ ಪರಂಪರೆ 'ರಾಜವಂಶ'ಕ್ಕೆ ಅದೃಷ್ಟ ತಂದಿದೆ

English summary
Kannada actor Raghavendra Rajkumar will play villain in Kannada Chilam movie. after fourteen years later, Raghavendra Rajkumar is again acting in the film, Manoranjan Ravichandran is the hero for Chilam movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X