Don't Miss!
- Finance
Budget 2023: ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?
- News
Budget 2023: 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ
- Sports
ಅತಿರೇಕದ ಸಂಭ್ರಮಾಚರಣೆ: ಐಪಿಎಲ್ ದುಬಾರಿ ಆಟಗಾರನಿಗೆ ಬಿತ್ತು ದಂಡ
- Automobiles
ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Technology
ಅಬ್ಬಬ್ಬಾ... ಈ ಅಂಬ್ರೇನ್ ಪವರ್ ಬ್ಯಾಂಕ್ನ ಬ್ಯಾಕಪ್ ಎಷ್ಟಿದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಫ್ರೆಂಡ್ಸ್ ಹೇಳಿದ್ಮೇಲೆ ಯಾಕೆ ಬರ್ತೀರಾ? ಈಗ್ಲೇ ದಯವಿಟ್ಟು 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ನೋಡಿ": ರಘು ದೀಕ್ಷಿತ್ ಕಣ್ಣೀರು
'ಬಾರಿಸು ಕನ್ನಡ ಡಿಂಡಿಮವ' ಆಲ್ಬಮ್ ಸಾಂಗ್ ಮಾಡಿ ಗೆದ್ದಿದ್ದ ತಂಡ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ತೆರೆಗೆ ತಂದಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದ ಚಿತ್ರ ಪ್ರೇಕ್ಷಕರ ಬರ ಎದುರಿಸುತ್ತಿದೆ. ದಯವಿಟ್ಟು ಬಂದು ಸಿನಿಮಾ ನೋಡಿ ಎಂದು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕಣ್ಣೀರು ಹಾಕಿದ್ದಾರೆ. ಮೈಸೂರಿನ 'ಆರ್ಕೆಸ್ಟ್ರಾ' ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ.
ಧನಂಜಯ ಸ್ನೇಹಿತ ಪೂರ್ಣಚಂದ್ರ ಮೈಸೂರು ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಸಜ್ಜು ಹಾಗೂ ಸುನಿಲ್ ಕಥೆ ಬರೆದಿದ್ದಾರೆ. ಧನಂಜಯ ಚಿತ್ರದ 8 ಹಾಡುಗಳಿಗೆ ಸಾಹಿತ್ಯ ಬರೆದಿದ್ರೆ, ರಘು ದೀಕ್ಷಿತ್ ಸಂಗೀತ ನಿರ್ದೇಶನವಿದೆ. ಜೊತೆಗೆ ಚಿತ್ರದ ಸಹ ನಿರ್ಮಾಪಕರು ಆಗಿದ್ದಾರೆ. ಆರ್ಕೆಸ್ಟ್ರಾ ಗಾಯಕನಾಗಬೇಕು ಎಂದು ಕನಸು ಕಾಣುವ ಯುವಕನ ಕಥೆ ಈ ಚಿತ್ರದಲ್ಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಪ್ರತಿವರ್ಷ ಕನ್ನಡದ ಯಾವುದೇ ಸಿನಿಮಾ ರಿಲೀಸ್ ಆಗಲ್ಲ. ಆದರೆ ಈ ಬಾರಿ ಧೈರ್ಯ ಮಾಡಿ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಬಂದಿತ್ತು. ತೆಲುಗು, ತಮಿಳಿನ 4 ದೊಡ್ಡ ಸಿನಿಮಾಗಳು ಸುಗ್ಗಿ ಸಂಭ್ರಮದಲ್ಲೇ ತೆರೆಗೆ ಬಂದಿದೆ.
ರಾಜ್ಯದ ಬಹುತೇಕ ಥಿಯೇಟರ್‌ಗಳನ್ನು ಪರಭಾಷೆ ಸಿನಿಮಾಗಳೇ ಆವರಿಸಿಕೊಂಡಿದೆ. ಇರುವುದರಲ್ಲಿ ಶಿವಣ್ಣ 'ವೇದ' ಹಾಗೂ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಕೊಂಚ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ನಮ್ಮ ಸಿನಿಮಾ ನೋಡಲು ಪ್ರೇಕ್ಷಕರು ಬರ್ತಿಲ್ಲ. ದಯವಿಟ್ಟು ಬನ್ನಿ. ಒಳ್ಳೆಯ ಸಿನಿಮಾ. ಈಗಾಗಲೇ ನೋಡಿದವರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸ್ನೇಹಿತರು ಹೇಳುವವರೆಗೂ ಕಾಯಬೇಡಿ. ನೀವಾಗಿಯೇ ಬನ್ನಿ. ಹೊಸ ಪ್ರತಿಭೆಗಳ ಸಿನಿಮಾವನ್ನು ಗೆಲ್ಲಿಸಿ ಎಂದು ರಘು ದೀಕ್ಷಿತ್ ವೀಡಿಯೋ ಮಾಡಿ ಮಾತನಾಡಿದ್ದಾರೆ.
"ಕನ್ನಡ ಸಿನಿಮಾ ನೋಡಲು ಯಾಕೆ ಬರ್ತಿಲ್ಲ. ನಿಮಗೆ ಮಾಮೂಲಿ ಕಮರ್ಷಿಯಲ್ ಸಿನಿಮಾ ಬೇಕಾ? 4 ಫೈಟ್, 4 ಸಾಂಗ್ಸ್, ಐಟಂ ಸಾಂಗ್ ಇಂತಹ ಸಿನಿಮಾಗಳೇ ಬೇಕಾ? ಅಥವಾ ಸ್ಟಾರ್ ನಟರ ಸಿನಿಮಾಗಳೇ ಆಗಬೇಕಾ? ಹಾಗಾದರೆ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರಲೇಬಾರದಾ? ನಾನು 5 ವರ್ಷದಿಂದ ಯಾವುದೇ ಚಿತ್ರಕ್ಕೆ ಕೆಲಸ ಮಾಡಿರಲಿಲ್ಲ. ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೆ. ಈ ಚಿತ್ರದ ನಿರ್ಮಾಪಕ ಅಶ್ವಿನ್. ಇನ್ನು ಚಿಕ್ಕ ವಯಸ್ಸಿನವರು. ಅವರ ಮನೆಯಲ್ಲಿ ಎಲ್ಲರೂ ಡಾಕ್ಟರ್‌ಗಳು. ಆದರೆ ಅವರು ಚಿತ್ರರಂಗಕ್ಕೆ ಬಂದಿದ್ದರು. ಹೀಗಾದರೆ ಹೇಗೆ? ದಯವಿಟ್ಟು ಬಂದು ಸಿನಿಮಾ ನೋಡಿ" ಎಂದು ರಘು ದೀಕ್ಷಿತ್ ಕಣ್ಣೀರಾಗಿದ್ದಾರೆ.

ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಧನಂಜಯ್ ಅವರ ಡಾಲಿ ಪಿಕ್ಚರ್ಸ್ 'ಆರ್ಕೆಸ್ಟ್ರಾ ಮೈಸೂರು' ಚಿತ್ರದ ಬೆಂಬಲಕ್ಕೆ ನಿಂತಿದೆ. ದಿಲೀಪ್ ರಾಜ್, ಮಹೇಶ್ ಕುಮಾರ್, ಸಚ್ಚು, ರಾಜೇಶ್ ಬಸವಣ್ಣ, ಲಿಂಗರಾಜು, ಮಹದೇವ ಪ್ರಸಾದ್, ರವಿ ಹುಣಸೂರುರಂತಹ ರಂಗಭೂಮಿ ಕಲಾವಿದರು ತಾರಾಗಣದಲ್ಲಿದ್ದಾರೆ.