ಆತ್ಮಹತ್ಯೆ ಯೋಚನೆ ಮಾಡಿದ್ದ ರಘು ದೀಕ್ಷಿತ್: ಅಂತರಂಗ ಬಿಚ್ಚಿಟ್ಟ ಗಾಯಕ

ಖ್ಯಾತ ಸಂಗೀತಗಾರ, ಗಾಯಕ ರಘು ದೀಕ್ಷಿತ್, ತಾವು ಖಿನ್ನತೆಗೆ ಒಳಗಾಗಿದ್ದರ ಬಗ್ಗೆ ಮಾತನಾಡಿದ್ದಾರೆ. ಆತ್ಮಹತ್ಯೆಯ ಅಂಚಿಗೆ ಹೋಗಿ ಹೊರಗೆ ಬಂದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

Recommended Video

ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

ಸುಶಾಂತ್ ಸಿಂಗ್ ಸಾವಿನ ಬಳಿಕ ಖಿನ್ನತೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಇದೀಗ ರಘು ದೀಕ್ಷಿತ್ ಅವರು, ನಿರೂಪಕಿ ಅನುಶ್ರಿ ಅವರೊಟ್ಟಿಗಿನ ಯೂಟ್ಯೂಬ್ ಸಂವಾದದಲ್ಲಿ ತಾವು ಅನುಭವಿಸಿದ ಖಿನ್ನತೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಬದುಕುವುದೋ-ಸಾಯುವುದೋ ಎಂಬ ಆಲೋಚನೆಗಳು ನನ್ನ ತಲೆಗೆ ಬಂದಿತ್ತು. ಬಹು ಕಷ್ಟ ಪಟ್ಟು, ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಂಡು ಖಿನ್ನತೆಯಿಂದ ಹೊರಗೆ ಬಿದ್ದೆ ಎಂದಿದ್ದಾರೆ ರಘು ದೀಕ್ಷಿತ್.

3-4 ವರ್ಷದಿಂದಲೂ ಖಿನ್ನತೆಯಿಂದ ಬಳಲಿದ್ದ ರಘು

3-4 ವರ್ಷದಿಂದಲೂ ಖಿನ್ನತೆಯಿಂದ ಬಳಲಿದ್ದ ರಘು

ಅನುಶ್ರೀ ಜೊತೆಗೆ ಮಾತುಕತೆಯಲ್ಲಿ ತಮ್ಮ ಖಿನ್ನತೆಯ ಬಗ್ಗೆ ಮಾತನಾಡಿದ ರಘು ದೀಕ್ಷಿತ್, ಕಳೆದ 3-4 ವರ್ಷಗಳಿಂದಲೂ ಖಿನ್ನತೆಯಿಂದ ಬಳಲುತ್ತಿದ್ದೆ. ಆದರೆ ಇತ್ತೀಚೆಗೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಖಿನ್ನತೆಯನ್ನು ಹೋಗಲಾಡಿಸಿಕೊಂಡಿದ್ದೇನೆ ಎಂದಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ತೀವ್ರ ಖಿನ್ನತೆ

ಲಾಕ್‌ಡೌನ್ ಸಮಯದಲ್ಲಿ ತೀವ್ರ ಖಿನ್ನತೆ

ಲಾಕ್‌ಡೌನ್ ಸಮಯದಲ್ಲಂತೂ ನಾನು ತೀವ್ರ ಖಿನ್ನತೆ ಅನುಭವಿಸಿದೆ. ಸದಾ ಬೆಡ್‌ ಮೇಲೆ ಮಲಗಿರುತ್ತಿದ್ದೆ. ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದೆ. ಶೌಚಾಲಯಕ್ಕೆ ಮಾತ್ರವೇ ಎದ್ದು ನಡೆದುಕೊಂಡು ಹೋಗುತ್ತಿದ್ದೆ, ವಿಪರೀತ ದೇಹ ತೂಕ ಹೆಚ್ಚು ಮಾಡಿಕೊಂಡಿದ್ದೆ ಎಂದಿದ್ದಾರೆ ರಘು.

More from Filmibeat

English summary
Musician, Singer Raghu Dixit talks about his fight with Depression. He said he took proper medical help.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X