»   » ಗೋವಾ, ಕೇರಳದತ್ತ ಸವಾರಿ ಹೊರಟಿರುವ ಅನು-ಮುಖರ್ಜಿ ದಂಪತಿ.!

ಗೋವಾ, ಕೇರಳದತ್ತ ಸವಾರಿ ಹೊರಟಿರುವ ಅನು-ಮುಖರ್ಜಿ ದಂಪತಿ.!

Posted By: Pavithra
Subscribe to Filmibeat Kannada

ಸಿನಿಮಾ ತಾರೆಯರು ಅಂದ್ರೆ ಸದಾ ಚಿತ್ರೀಕರಣ ಅಂತ ಬ್ಯುಸಿ ಇರ್ತಾರೆ. ಅದೆಷ್ಟೋ ಸಲ ತಮಗೂ ವೈಯಕ್ತಿಕ ಜೀವನ ಇರತ್ತೆ ಎನ್ನುವುದೇ ಅವರಿಗೆ ಮರೆತು ಹೋಗಿರುತ್ತೆ. ಇನ್ನ ಕೆಲವರಿಗೆ ಎಲ್ಲವನ್ನೂ ಕಳೆದುಕೊಂಡ ನಂತರ ಅಯ್ಯೋ ನನ್ನ ಪರ್ಸನಲ್ ಲೈಫ್ ಕಳೆದು ಹೋಯ್ತು ಎಂಬ ಚಿಂತೆ ಮಾಡ್ತಾರೆ. ಆದ್ರೆ ಅಂತ ಕ್ಯಾಟಗರಿಗೆಲ್ಲಾ ನಾವ್ ಸೇರಿಕೊಳ್ಳಲ್ಲ ಅಂತಿದ್ದಾರೆ ನಟಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ.

ರಘು-ಅನು ಮದುವೆ ಆಗಿ ಒಂದು ವರ್ಷ ಆಯ್ತು.! ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?

ಅನು ಪ್ರಾಭಾಕರ್ ಮತ್ತು ರಘು ಮುಖರ್ಜಿ ತಮ್ಮ ಬ್ಯುಸಿ ಲೈಫ್ ನ್ನ ಬಿಡುವು ಮಾಡಿಕೊಂಡು ಬೈಕ್ ರೈಡ್ ಮಾಡಲು ಸಿದ್ದರಾಗಿದ್ದಾರೆ. ಅದಕ್ಕೆ ಎಲ್ಲಾ ರೀತಿಯ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಹೊಸ ಬೈಕ್ ಖರೀದಿ ಮಾಡಿರುವ ಈ ತಾರಾ ಜೋಡಿ ಮೊನ್ನೆ ಮೊನ್ನೆಯಷ್ಟೇ ಊಟಿಗೆ ಪ್ರಯಾಣ ಬೆಳೆಸಿದ್ದರು. ಸುಮಾರು ಹತ್ತು ಗಂಟೆಗಳ ಕಾಲ ಪ್ರಯಾಣ ಮಾಡಿ ನಾಲ್ಕು ದಿನ ಅಲ್ಲೇ ಉಳಿದುಕೊಂಡು ಅಲ್ಲಿಯ ಸುಂದರತಾಣಗಳನ್ನ ಹಾಗೂ ಅಲ್ಲಿ ಸಿಗುವ ವೆರೈಟಿ ಫುಡ್ ಟೇಸ್ಟ್ ಮಾಡಿ ಬಂದಿದ್ದಾರೆ.

ಅನು ಪ್ರಭಾಕರ್ ಬಗ್ಗೆ ಪತಿ ರಘುಗೆ ಮಾತ್ರ ಗೊತ್ತಿರುವ ಮೂರು ಸಂಗತಿಗಳಿವು...

 Raghu mukarji going to plan goa and keral

ಊಟಿ ಬೈಕ್ ರೈಡ್ ಎಂಜಾಯ್ ಮಾಡಿರುವ ಅನು ಮತ್ತು ರಘು ಮುಖರ್ಜಿ ಈಗ ಕೇರಳ ,ಗೋವಾ, ಇನ್ನೂ ಅನೇಕ ಸ್ಥಳಗಳಿಗೆ ಬೈಕ್ ನಲ್ಲೇ ಟ್ರಿಪ್ ಹೋಗುವ ಪ್ಲಾನ್ ಮಾಡಿದ್ದಾರಂತೆ. ಬೈಕ್ ರೈಡ್ ಹೋಗ್ಬೇಕು ಅಂದ್ರೆ ಸೇಫ್ಟಿ ಫಸ್ಟ್ ಅದಕ್ಕಾಗಿಯೇ ಇರುವ ಜಾಕೆಟ್ಸ್ , ಹೆಲ್ಮೆಟ್ ಎಲ್ಲವನ್ನೂ ಧರಿಸಿದ್ರೆ ತುಂಬಾ ಒಳ್ಳೆದು ಎಂಬ ಟಿಪ್ಸ್ ಕೊಡ್ತಾರೆ ಅನು.

ಅನೇಕರಿಗೆ ಗೊತ್ತಿಲ್ಲದ ಅನು ಪ್ರಭಾಕರ್ ರವರ ಕಿಡ್ನ್ಯಾಪ್ ಸ್ಟೋರಿ.!

 Raghu mukarji going to plan goa and keral

ಇಬ್ಬರು ಸೆಲೆಬ್ರೆಟಿಗಳಾಗಿರೋದ್ರಿಂದ ಒಂದಿಷ್ಟು ಕಾಳಜಿ ತುಂಬಾ ಮುಖ್ಯ. ಹೆಚ್ಚಾಗಿ ನೀರು, ಜ್ಯೂಸ್ ಮತ್ತು ಚಾಟ್ಸ್ ಕ್ಯಾರಿ ಮಾಡ್ತಾರಂತೆ. ಬೈಕ್ ರೈಡ್ ಪ್ಲಾನ್ ಮಾಡಿದ ಹಿಂದಿನ ದಿನವೇ ಆ ಸ್ಥಳದ ವಿಶೇಷತೆ ಏನು ? ಏನೆಲ್ಲಾ ನೊಡೋದಕ್ಕೆ ಹಾಗೂ ತಿನ್ನೋದಕ್ಕೆ ಸಿಗುತ್ತೆ ಎನ್ನುವುದನ್ನ ಸರ್ಚ್ ಮಾಡಿರ್ತಾರಂತೆ. ರಘು ಮುಖರ್ಜಿಗೆ ತುಂಬಾ ದಿನಗಳಿಂದಲೂ ಇಂತದ ಅಡ್ವೆಂಚರಸ್ ಆಗಿರುವ ಲೈಫ್ ಸ್ಟೈಲ್ ಇಷ್ಟ ಅದಕ್ಕೆ ಈಗ ಅನು ಪ್ರಭಾಕರ್ ಕೂಡ ಸೇರಿಕೊಂಡಿದ್ದಾರೆ. ಸದ್ಯ ರಘು ಮಾತ್ರ ಬೈಕ್ ರೈಡ್ ಮಾಡ್ತಿದ್ದು ಮುಂದಿನ ದಿನಗಳಲ್ಲಿ ಅನು ಪ್ರಭಾಕರ್ ಕೂಡ ಬೈಕ್ ರೈಡ್ ಮಾಡೋದ್ರಲ್ಲಿ ಅನುಮಾನವಿಲ್ಲ.

English summary
Anuprabhakar and raghumukarji planing to bike ride for goa ಗೋವಾ ಕಡೆಗೆ ಬೈಕ್ ನಲ್ಲಿ ಪಯಣ ಮಾಡುತ್ತಿರುವ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X