For Quick Alerts
  ALLOW NOTIFICATIONS  
  For Daily Alerts

  ಡಾಲಿಯ 'ಹೆಡ್‌ಬುಷ್' ಚಿತ್ರತಂಡ ಸೇರಿದ ಕನ್ನಡದ ಮತ್ತೊಬ್ಬ ಖ್ಯಾತ ನಟ

  |

  'ಡಾಲಿ' ಧನಂಜಯ್ ನಟಿಸುತ್ತಿರುವ 'ಹೆಡ್‌ಬುಷ್' ಸಿನಿಮಾದಲ್ಲಿ ಸ್ಟಾರ್ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಕನ್ನಡದ ಹಲವು ಯುವ ನಟರು ಅಭಿನಯಿಸುತ್ತಿದ್ದಾರೆ. ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಈಗ ಮತ್ತೊಬ್ಬ ಖ್ಯಾತ ಕಲಾವಿದನ ಪ್ರವೇಶವಾಗಿದೆ.

  ಪ್ಯಾರಿಸ್ ಪ್ರಣಯ, ಸವಾರಿ, ಜೆಸ್ಸಿ ಅಂತಹ ಚಿತ್ರಗಳ ಮೂಲಕ ಕನ್ನಡಿಗರ ಅಭಿಮಾನ ಗಳಿಸಿರುವ ರಘು ಮುಖರ್ಜಿ ಈಗ ಹೆಡ್‌ಬುಷ್ ಚಿತ್ರತಂಡ ಸೇರಿದ್ದಾರೆ. ಡಾಲಿ ಜೊತೆ ರಘು ಮುಖರ್ಜಿ ಪ್ರಮುಖ ಪಾತ್ರವೊಂದನ್ನು ನಟಿಸುತ್ತಿರುವ ಬಗ್ಗೆ ಇಂದು ಅಧಿಕೃತವಾಗಿದೆ. ಸ್ವತಃ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಘು ಮುಖರ್ಜಿ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ.

  ಮತ್ತೆ ವಾಪಸ್ ಆದ ನಟಿ ಶ್ರುತಿ ಹರಿಹರನ್; ಧನಂಜಯ್ ಸಿನಿಮಾದಲ್ಲಿ ನಟನೆಮತ್ತೆ ವಾಪಸ್ ಆದ ನಟಿ ಶ್ರುತಿ ಹರಿಹರನ್; ಧನಂಜಯ್ ಸಿನಿಮಾದಲ್ಲಿ ನಟನೆ

  ಹೆಡ್‌ಬುಷ್ ಚಿತ್ರದಲ್ಲಿ ಈಗಾಗಲೇ ಕನ್ನಡದ ಹಲವು ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್ ಅಂತಹ ತಾರೆಯರು ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಇವರ ಜೊತೆ ರಘು ಮುಖರ್ಜಿ ಎಂಟ್ರಿಯಾಗಿದೆ. ಮುಂದೆ ಓದಿ...

  ಡಾಲಿಯ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಖ್ಯಾತ ನಟಡಾಲಿಯ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಖ್ಯಾತ ನಟ

  ರಘು ಮುಖರ್ಜಿ ಬಗ್ಗೆ

  ರಘು ಮುಖರ್ಜಿ ಬಗ್ಗೆ

  2003ರಲ್ಲಿ ಪ್ಯಾರಿಸ್ ಪ್ರಣಯ ಚಿತ್ರದೊಂದಿಗೆ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಘು ಮುಖರ್ಜಿ ಒಳ್ಳೆಯ ನಟ ಎಂದು ಗುರುತಿಸಿಕೊಂಡರು. ಸವಾರಿ, ಪಾರಿಜಾತ, ದಂಡುಪಾಳ್ಯ, ಆರ್ಯನ್, ಸೂಪರ್ ರಂಗಾ, ಅಂಗುಲಿಮಾಲ, ಜೆಸ್ಸಿ, ಕಾಫಿತೋಟ, ದಯವಿಟ್ಟು ಗಮನಿಸಿ ಅಂತಹ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

  ಇನ್ಸ್‌ಪೆಕ್ಟರ್ ವಿಕ್ರಂ ವಿಲನ್

  ಇನ್ಸ್‌ಪೆಕ್ಟರ್ ವಿಕ್ರಂ ವಿಲನ್

  ಕೊನೆಯದಾಗಿ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ರಘು ಮುಖರ್ಜಿ ನಟಿಸಿದ್ದರು. 2021ರ ಫೆಬ್ರವರಿ ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದರು. ಬಹುಶಃ ಬೆಂಗಳೂರು ಅಂಡರ್‌ವರ್ಲ್ಡ್‌ ಚಿತ್ರದಲ್ಲಿಯೂ ರಘು ಮುಖರ್ಜಿ ಖಡಕ್ ಪಾತ್ರ ಮಾಡಲಿದ್ದಾರೆ ಎಂಬ ಕುತೂಹಲವಿದೆ. ಸದ್ಯಕ್ಕೆ ಅವರ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

  ಇತರೆ ಪಾತ್ರಗಳ ಬಗ್ಗೆ ಹೇಳುವುದಾದರೆ

  ಇತರೆ ಪಾತ್ರಗಳ ಬಗ್ಗೆ ಹೇಳುವುದಾದರೆ

  ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಹಲವು ದಿನಗಳ ನಂತರ ಹೆಡ್‌ಬುಷ್ ಚಿತ್ರದೊಂದಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ. 'ಟಗರು' ಸಿನಿಮಾದಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಜೋಡಿ ಮೋಡಿ ಮಾಡಿತ್ತು. ಈಗ ವಸಿಷ್ಠ ಸಿಂಹ ಸಹ ಹೆಡ್‌ಬುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಹುಲಿರಾಯ' ಖ್ಯಾತಿಯ ಬಾಲು ನಾಗೇಂದ್ರ ಸಹ ಹೆಡ್‌ಬುಷ್ ಚಿತ್ರತಂಡ ಸೇರಿದ್ದಾರೆ. ತೆಲುಗಿನ ಖ್ಯಾತ ನಟಿ ಪಾಯಲ್ ರಜಪೂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  'ಶೂನ್ಯ' ನಿರ್ದೇಶನ

  'ಶೂನ್ಯ' ನಿರ್ದೇಶನ

  'ಹೆಡ್‌ಬುಷ್' ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಚೊಚ್ಚಲ ನಿರ್ದೇಶಕ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಿಸುತ್ತಿದ್ದು, ಎರಡು ಭಾಗದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಚರಣ್ ರಾಜ್ ಸಂಗೀತ ಸಂಯೋಜನೆ ಇದೆ. ವಿಶೇಷ ಅಂದ್ರೆ ಡಾಲಿ ಧನಂಜಯ್ ಅವರೇ ಬಂಡವಾಳ ಹಾಕ್ತಿದ್ದಾರೆ.

  ಇನ್ನು ಹೆಡ್‌ಬುಷ್ ಚಿತ್ರ ಹೊರತುಪಡಿಸಿ 'ಬಡವ ರಾಸ್ಕಲ್' ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದ್ದಾರೆ. 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ 'ಪುಷ್ಪ ಭಾಗ-1' ರಿಲೀಸ್ ಆಗುತ್ತಿದೆ. ರೋಹಿತ್ ಪದಕಿಯ ರತ್ನನ್ ಪ್ರಪಂಚ, ಶಿವಣ್ಣನ 'ಬೈರಾಗಿ,' ಜಗ್ಗೇಶ್ ಜೊತೆ ತೋತಾಪುರಿ, ಡಾಲಿ ಸಿನಿಮಾ, ಆರ್ಕೆಸ್ಟ್ರಾ ಮೈಸೂರು ಅಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Actor Raghu Mukherjee joins the cast of Dhananjaya Starrer Head Bush Movie.
  Monday, September 13, 2021, 15:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X