Just In
Don't Miss!
- News
ಕೋವಿಡ್ ಲಸಿಕೆ: ಉತ್ತರ ಕನ್ನಡಕ್ಕೆ ರಾಜ್ಯದಲ್ಲಿ 2ನೇ ಸ್ಥಾನ
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿಯಿಂದ ಗಾನಕೋಗಿಲೆಗೆ ಗಾನ ಗೌರವ
ದಕ್ಷಿಣ ಭಾರತದ ಪ್ರಸಿದ್ಧ ಹಿನ್ನಲೆ ಗಾಯಕಿ, ಸಂಗೀತ ಸರಸ್ವತಿ ಎಸ್.ಜಾನಕಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾರತ ಕಂಡ ಶ್ರೇಷ್ಠ ಹಿನ್ನಲೆ ಗಾಯಕಿ, ಗಾನಕೋಗಿಲೆ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೆ ಹಾಡಲು ಪ್ರಾರಂಭಿಸಿದ ಜಾನಕಿ, ಸುಮಾರು 5 ದಶಕಗಳ ಕಾಲ ಸುಮಧುರ ಕಂಠದ ಮೂಲಕ ಗಾನಪ್ರಿಯರನ್ನು ರಂಜಿಸಿದ್ದಾರೆ.
ಇತ್ತೀಚಿನ ವರ್ಷದ ವರೆಗೂ ಹಾಡುತ್ತ, ಎಲ್ಲರನ್ನು ರಂಜಿಸುತ್ತಿದ್ದ ಜಾನಕಿ ಸದ್ಯ ಹಾಡುವುದನ್ನು ನಿಲ್ಲಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಹಾಡಿರುವ ಜಾನಕಿ, ಹಿಂದಿ, ಮರಾಠಿ ಸೇರಿದಂತೆ ಒಟ್ಟು 17 ಭಾಷೆಯಲ್ಲಿ ಹಾಡಿದ್ದಾರೆ. ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಸಂಗೀತ ಸರಸ್ವತಿಗೆ ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಮುಂದೆ ಓದಿ...
SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ

ರಘು ರಾಮ್ ಪುತ್ರಿಯಿಂದ ಗಾನ ಗೌರವ
ಅದ್ಭುತ ಗಾಯಕಿಯ ಜನ್ಮದಿನಕ್ಕೆ ಇಡೀ ಭಾರತ ಶುಭಾಶಯ ಕೋರುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಘು ರಾಮ್ ಪುತ್ರಿ ಹಾಡಿನ ಮೂಲಕ ಶುಭಾಶಯಕೋರಿದ್ದಾರೆ. ರಾಘು ರಾಮ್ ಪುತ್ರಿ ನನಸು ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅನುರಾಗ ಬಂಧನ ಸಿನಿಮಾದ ಹಾಡು ಹಾಡಿರುವ ನನಸು
ರಘುರಾಮ್ ಪುತ್ರಿ ನನಸು 'ಅನುರಾಗ ಬಂಧನ' ಸಿನಿಮಾದ 'ನಿನ್ನ ಸವಿ ನೆನಪೇ...'ಹಾಡನ್ನು ಹಾಡಿ ಗಾನಕೋಗಿಲೆಯ ಜನ್ಮದಿನಕ್ಕೆ ಗಾನ ಗೌರವ ಸಲ್ಲಿಸಿದ್ದಾರೆ.

ಎಸ್.ಜಾನಕಿ ಅಭಿಮಾನಿ ರಘುರಾಮ್
ನಟ ಮತ್ತು ನಿರ್ದೇಶಕ ರಘುರಾಮ್ ಎಸ್ ಜಾನಕಿ ಅಭಿಮಾನಿಗಳಲ್ಲಿ ಒಬ್ಬರು. ಹಾಗಾಗಿ ಅಭಿಮಾನಿಯಾಗಿ ನೆಚ್ಚಿನ ಗಾಯಕಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ರಘುರಾಮ್ ಹೇಳಿದ್ದೇನು?
"ಸಾಕ್ಷಾತ್ ಸಂಗೀತ ಸರಸ್ವತಿಯೇ ಇವರ ಕೋಗಿಲೆ ಕಂಠದಲ್ಲಿ ನಡೆಸಿದೆ ತಾಂಡವ. ನಮ್ಮ ಭಾರತದ ಶ್ರೇಷ್ಠ ಗಾಯಕಿ ಎಸ್. ಜಾನಕೀ ಅವರಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನನ್ನ ಮಗಳು ನನಸುವಿನಿಂದ ಈ ಗಾನ ಗೌರವ" ಎಂದು ಬರೆದು ಶುಭಾಶಯತಿಳಿಸಿದ್ದಾರೆ.