For Quick Alerts
  ALLOW NOTIFICATIONS  
  For Daily Alerts

  ತನ್ನದೇ ಯೂಟ್ಯೂಬ್ ಚಾನೆಲ್ ಆರಂಭಿಸಿದ ನಟ ಶರಣ್

  |

  ಸಿನಿಮಾ ಕಲಾವಿದರು ಕೇವಲ ಸಿನಿಮಾದಿಂದ ಮಾತ್ರವಲ್ಲದೆ ಬೇರೆ ಬೇರೆ ತರಹದಲ್ಲಿ ಆಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಹೀಗಾಗಿ ಕೆಲವರು ಇನ್ಸ್ಟಾಗ್ರಾಮ್, ಫೇಸ್‌ಬುಕ್, ಟ್ಚಿಟ್ಟರ್ ಹೀಗೆ ಹಲವು ಕಡೆಗಳಲ್ಲಿ ತಮ್ಮ ದಿನನಿತ್ಯದ ಅಪ್‌ಡೇಟ್ಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಸಾಕಷ್ಟು ಕಲಾವಿದರು ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್‌ಗಳನ್ನು ಮಾಡಿ ಆ ಮೂಲಕ ದಿನನಿತ್ಯದ ಆಗು ಹೊಗುಗಳನ್ನು, ಸಿನಿಮಾದ ಬಗ್ಗೆ ಮಾಹಿತಿಗಳನ್ನು, ಕುಟುಂಬ ಸದಸ್ಯರ ಜೊತೆ ಹೇಗೆ ಸಮಯ ಕಳೆಯುತ್ತಾರೆ ಎಂದೆಲ್ಲ ವಿಡೀಯೋ ಮಾಡಿ ಪೋಸ್ಟ್‌ ಮಾಡುತ್ತಿರುತ್ತಾರೆ. ಇದೀಗ ಇದೇ ಪಟ್ಟಿಗೆ ನಟ ಶರಣ್ ಕೂಡ ಸೇರ್ಪಡೆಯಾಗಿದ್ದಾರೆ. ತನ್ನದೇ ಯೂಟ್ಯೂಬ್ ಚಾನೆಲ್ ತೆರೆದು ಫ್ಯಾನ್ಸ್‌ಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

  ಆಕ್ಟರ್ ಶರಣ್ ಅಫೀಶಿಯಲ್ ಹೆಸರಿನಲ್ಲಿ ಆರಂಭವಾಗಿರೊ ಶರಣ್ ಅವರ ಈ ಯೂಟ್ಯೂಬ್ ಚಾನಲ್ ಆರಂಭವಾಗಿ ಒಂದು ದಿನ ಆಗಿದೆಯಷ್ಟೆ. ಇದರ ಬಗ್ಗೆ ಇತ್ತೀಚೆಗಷ್ಟೆ ವೀಡಿಯೋ ಒಂದನ್ನು ಮಾಡಿ ಮಾಹಿತಿ ಹಂಚಿಕೊಂಡ ಶರಣ್, ನಾನು ನನ್ನದೇ ಆದ ಯೂಟ್ಯೂಬ್ ಚಾನೆಲ್‌ ಒಂದನ್ನು ಆರಂಭಿಸುತ್ತಿದ್ದೇನೆ. ಇದರ ಹಿಂದೆ ದೊಡ್ಡ ಉದ್ದೇಶ ಏನಿಲ್ಲ. ನನ್ನ ಜೀವನದ ಆಗುಹೋಗುಗಳು, ನನ್ನ ನಟನೆಯ ಸಿನಿಮಾ ಮಾಹಿತಿಗಳು ಹಾಗೂ ನನ್ನ ಹವ್ಯಾಸಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಹೀಗಾಗಿ ಇವೆಲ್ಲವನ್ನು ಹಂಚಿಕೊಳ್ಳಲು ನನಗೆ ಇದೆ ಸರಿಯಾದ ಮಾರ್ಗ ಎನ್ನಿಸಿತು. ಕೆಲವು ಆಪ್ತರಿಂದ ಒಂದಷ್ಟು ಮಾರ್ಗದರ್ಶನವನ್ನು ಪಡೆದು ಚಾನೆಲ್ ಆರಂಭಿಸುವ ಬಗ್ಗೆ ಚಿಂತಿಸಿದ್ದೇನೆ ಎಂದಿದ್ದರು.

  ಹೀಗಾಗಿ ಅಫೀಶಿಯಲ್ ಆಗಿ ಯೂಟ್ಯೂಬ್ ಚಾನೆಲೆ ಆರಂಭಿಸಿರುವ ಶರಣ್ ಈಗ ವೀಡಿಯೋ ಅಪ್‌ಲೋಡ್‌ ಮಾಡಲು ಆರಂಭಿಸಿದ್ದಾರೆ. ಆಕ್ಟರ್ ಶರಣ್ ಯೂಟ್ಯೂಬ್ ಚಾನೆಲ್‌ನಲ್ಲಿ ಮೊದಲ ವೀಡಿಯೋ ಇಂದು ಹಾಕಲಾಗಿದ್ದು, ಸಂಸ್ಕೃತ ಭಾಷೆಯ ವೇದಾಂತ ದೇಸಿಕ ಚಿತ್ರದ ರಘುವೀರ ಗಧ್ಯಂ ಹಾಡನ್ನು ಬಹಳ ಅದ್ಭುತವಾಗಿ ಹಾಡಿದ್ದಾರೆ. ರಾಜ್ ಕುಮಾರ್ ಭಾರತಿ ಮೂಲ ಹಾಡಿನ ಸಂಗೀತ ನಿರ್ದೇಶನ ಮಾಡಿದ್ದು, ಇದರ ಕವರ್ ಸಾಂಗ್ ಮಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಟ್ಟಿದ್ದಾರೆ ನಟ ಶರಣ್.

  Raghuveera Gadyam cover song by actor Sharan

  ಈಗಾಗಲೇ ಸಾಕಷ್ಟು ಹಾಡುಗಳನ್ನ ಹಾಡಿರುವ ನಟ ಶರಣ್ ಯೂಟ್ಯೂಬ್‌ನಲ್ಲೂ ಸಾಕಷ್ಟು ಹಾಡುಗಳನ್ನ ಹಾಡಿದ್ದಾರೆ. ಆದರೆ ತನ್ನ ಸ್ವಂತ ಚಾನೆಲ್‌ನಲ್ಲಿ ಇದೇ ಮೊದಲ ಹಾಡಲಾಗಿದ್ದು, ಈ ಹಿಂದೆ ಬಸವಣ್ಣನ ವಚನಗಳು, ಸಿನಿಮಾ ಗೀತೆಗಳನ್ನು ಶರಣ್ ಹಾಡಿರುವುದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹಾಗೇ ಶರಣ್ ಅವರ ಈ ರಘುವೀರ ಗದ್ಯಂ ಹಾಡಿನ ಕವರ್ ಸಾಂಗ್‌ಗೆ ಅಭಿಮಾನಿಗಳು ಮಾರುಹೋಗಿದ್ದು, ಹೀಗೆ ಮತ್ತಷ್ಟು ವೀಡಿಯೋಗಳನ್ನು ಹಾಕುತ್ತಿರಿ ಎಂದಿದ್ದಾರೆ.

  ಇನ್ನು ಈ ವೀಡಿಯೋ ಬಗ್ಗೆ ಬರೆದುಕೊಂಡಿರೋ ಶರಣ್, ಹಾಡು ನನ್ನ ಜೀವನದ ಪ್ರಮುಖ ಹವ್ಯಾಸ. ಇದು ನನ್ನ ಜೀವನ ಪೂರ್ತಿ ನನ್ನೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ. ಹಾಗೇ ಮತ್ತಷ್ಟು ವೀಡಿಯೋಗಳಿಗಾಗಿ ಕಾಯುತ್ತಿರಿ ಎಂದಿದ್ದಾರೆ.

  Raghuveera Gadyam cover song by actor Sharan

  ಶರಣ್ ಅವರ ಈ ಯೂಟ್ಯೂಬ್ ಚಾನೆಲ್ ಆರಂಭವಾಗಿ ಒಂದೇ ದಿನವಾದರೂ ಸಾಕಷ್ಟು ಮಂದಿ ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದಾರೆ. 500ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಮೂಲಕ ನಟ ಶರಣ್ ಅವರ ಮೊದಲ ಪ್ರಯತ್ನಕ್ಕೆ ಸಪೋರ್ಟ್ ಮಾಡಿದ್ದಾರೆ. ತನ್ನ ಮೊದಲ ವೀಡಿಯೋಗೆ ಇಷ್ಟು ಪ್ರತಿಕ್ರಿಯೆಗಳು ಬರುತ್ತಿರುವುದಕ್ಕೆ ಶರಣ್ ಕೂಡ ಖುಷಿಯಾಗಿದ್ದಾರೆ. ಶರಣ್ ಅವರ ಈ ವೀಡಿಯೋಗೆ ಅರ್ಜುನ್ ಕೊಳಲು ನುಡಿಸಿದ್ದು, ಶರಣ್ ಮಗ ಹೃದಯ್ ಚಿತ್ರೀಕರಣ ಮಾಡಿರೋದು ವಿಶೇಷ. ಇನ್ನು ರೋನಾಡ ಬಕ್ಕೇಶ್ ಛಾಯಗ್ರಹಣ, ಗೌತಮ್ ಎ ಎಡಿಟಿಂಗ್ ಈ ಕವರ್ ಹಾಡಿಗಿದೆ.

  English summary
  sandalwood actor Sharan has started his own Youtube channel. And today Sharan uploaded the first video.His fans have appreciated it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X