»   » ರಾಗಿಣಿ ದ್ವಿವೇದಿ ಆಗಸ್ಟ್ ನಲ್ಲಿ ಗರ್ಭಿಣಿ ಆಗಲಿದ್ದಾರಾ?

ರಾಗಿಣಿ ದ್ವಿವೇದಿ ಆಗಸ್ಟ್ ನಲ್ಲಿ ಗರ್ಭಿಣಿ ಆಗಲಿದ್ದಾರಾ?

Posted By:
Subscribe to Filmibeat Kannada

ನಟಿ ರಾಗಿಣಿ ದ್ವಿವೇದಿ ಗರ್ಭಿಣಿಯಾಗಲಿದ್ದಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಈ ಮೊದಲು ಗರ್ಭಿಣಿಯಾಗಿದ್ದು ಎಲ್ಲರಿಗೂ ಗೊತ್ತು. ಈಗ ನಟಿಯರಾದ ರಾಗಿಣಿ ದ್ವಿವೇದಿ, ಅನುಷ್ಕಾ ಶೆಟ್ಟಿ ಹಾಗೂ ನಯನತಾರಾ ಬೇರೆ ಬೇರೆ ಕಡೆ ಗರ್ಭಿಣಿಯಾಗಲಿದ್ದಾರೆ. ಆಶ್ಚರ್ಯ ಪಡಬೇಡಿ, ಹಿಂದಿಯಲ್ಲಿ ವಿದ್ಯಾ ಬಾಲನ್ ಕಹಾನಿ ಚಿತ್ರದಲ್ಲಿ ಮಾಡಿದ್ದ ಗರ್ಭಿಣಿ ಪಾತ್ರವನ್ನು ಈ ಮೂವರು ನಟಿಯರು ಮಾಡಲಿದ್ದಾರೆ ಅಷ್ಟೇ.

ಹಿಂದಿಯ 'ಕಹಾನಿ', ಕನ್ನಡದಲ್ಲಿ ರೀಮೇಕ್ ಆಗಲಿದ್ದು ಅಲ್ಲಿ ವಿದ್ಯಾ ಬಾಲನ್ ಮಾಡಿದ್ದ ಪಾತ್ರವನ್ನು ಇಲ್ಲಿ ನಟಿ ರಾಗಿಣಿ ದ್ವಿವೇದಿ ಮಾಡಲಿದ್ದಾರೆ. ಈ ವಿಷಯವನ್ನು ಸ್ವತಃ ರಾಗಿಣಿ ಖಚಿತಪಡಿಸಿದ್ದಾರೆ. ಈ ಚಿತ್ರವನ್ನು, ಇತ್ತೀಚಿನ ಯಶಸ್ವಿ ಚಿತ್ರ 'ಗೋವಿಂದಾಯ ನಮಃ' ನಿರ್ದೇಶಿಸಿರುವ 'ಪವನ್ ಒಡೆಯರ್' ನಿರ್ದೇಶಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದರೂ ಅದಿನ್ನೂ ಗಾಸಿಪ್ ಹಂತದಲ್ಲಿಯೇ ಇದೆ.

ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗು ಹಾಗೂ ತಮಿಳಿನಲ್ಲೂ ಕೂಡ ರೀಮೇಕ್ ಆಗಲಿದೆ. ತೆಲುಗಿನಲ್ಲಿ ಈ ಪಾತ್ರವನ್ನು ಖ್ಯಾತ ನಟಿ ಅನುಷ್ಕಾ ಶೆಟ್ಟಿ ಹಾಗೂ ತಮಿಳಿನಲ್ಲಿ ನಯನತಾರಾ ನಿರ್ವಹಿಸಲಿರುವುದು ಪಕ್ಕಾ ಆಗಿದೆ. ಈ ಚಿತ್ರ ರೀಮೇಕ್ ಆಗುವುದರ ಬಗ್ಗೆ ಸಾಕಷ್ಟು ಮೊದಲೇ ಗುಲ್ಲಾಗಿದ್ದರೂ ಇತ್ತೀಚಿಗಷ್ಟೆ ಅದರ ರೀಮೇಕ್ ಹಕ್ಕುಗಳು 'ಸೌತ್ ಇಂಡಸ್ಟ್ರಿ' ಪಾಲಾಗಿವೆ.

ನಿರ್ಮಾಪಕರಾದ ಎ. ಸುರೇಶ್ (ಮಂಜುನಾಥ, ಬಎಎಲ್ ಎಲ್ ಬಿ ), ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆಂಬ ಮಾಹಿತಿ ಗಾಂಧಿನಗರದಿಂದ ಲಭ್ಯವಾಗಿದೆ. ಬರುವ ಆಗಸ್ಟ್ ತಿಂಗಳಿನಲ್ಲಿ ಮುಹೂರ್ತ ಆಚರಿಸಿಕೊಂಡು ಶೂಟಿಂಗ್ ಶುರುಮಾಡಲು ಚಿತ್ರತಂಡ ನಿರ್ಧರಿಸಿದೆ. ಸದ್ಯಕ್ಕೆ ನಟಿ ರಾಗಿಣಿ, 'ರಾಗಿಣಿ ಐಪಿಎಸ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅದು ಮುಗಿದ ಮೇಲೆ ಇದು ಪ್ರಾರಂಭ.

ನಟಿ ರಾಗಿಣಿ ಈ ಮೊದಲು ರಿಮೇಕ್ ಚಿತ್ರಗಳಲ್ಲಿ ಸಾಕಷ್ಟು ಮಿಂಚಿದವರು. ಈ ಚಿತ್ರದಲ್ಲೂ ಮಿಂಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ವತಃ ರಾಗಿಣಿ, "ನಾನು ಈ ಹಿಂದೆ (ವಿಕ್ರಮಾರ್ಕುಡು) ವೀರ ಮದಕರಿ ಹಾಗೂ (ಸಿಂಗಂ) ಕೆಂಪೇಗೌಡ ರಿಮೇಕ್ ಚಿತ್ರಗಳಲ್ಲಿ ನಟಿಸಿ ಗೆಲುವು ಸಾಧಿಸಿದ್ದೇನೆ" ಎಂದಿದ್ದಾರೆ. ಚಿತ್ರ ಬಿಡುಗಡೆ ಮಾತ್ರ ಪಕ್ಕಾ ಉತ್ತರ ನೀಡಬಲ್ಲದು. (ಒನ್ ಇಂಡಿಯಾ ಕನ್ನಡ)

English summary
Actress Ragini Dwivedi Acts in Bollywood movie Kahani remake in Kannada. This movie also remake in Tamil and Telugu. Anushka Shetty selected for Telugu and Nayanatara in Tamil. Vidya Balan acted in this Bollywood Movie and had great response. 
 
Please Wait while comments are loading...