twitter
    For Quick Alerts
    ALLOW NOTIFICATIONS  
    For Daily Alerts

    ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ, ಹೆಚ್ಚಾಯ್ತು ಜೈಲಿನ ಆತಂಕ!

    |

    ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮೂರು ದಿನಗಳ ಕಾಲ ಮುಂದೂಡಿದೆ. ಇದೀಗ, ನಟಿ ರಾಗಿಣಿಗೆ ಜೈಲಿನ ಆತಂಕ ಹೆಚ್ಚಾಗಿದೆ.

    ಮಾದಕ ದ್ರವ್ಯ ಪೂರೈಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿ ನಟಿ ರಾಗಿಣಿಯನ್ನು ಬಂಧಿಸಿದ್ದರು. ಕಳೆದ ಒಂದು ವಾರದಿಂದಲೂ ರಾಗಿಣಿ ಸಿಸಿಬಿ ವಶದಲ್ಲಿದ್ದಾರೆ. ಶುಕ್ರವಾರ ಬೆಂಗಳೂರಿನ ವಿಶೇಷ ಎನ್‌ಡಿಪಿಎಸ್‌ ನ್ಯಾಯಾಲಯದಲ್ಲಿ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ಆದರೆ, ಸೆಪ್ಟೆಂಬರ್ 15ರಂದು ಈ ಅರ್ಜಿ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ. ಮುಂದೆ ಓದಿ....

    ನಟಿ ರಾಗಿಣಿ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪಟ್ಟಿನಟಿ ರಾಗಿಣಿ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪಟ್ಟಿ

    ತುರ್ತು ವಿಚಾರಣೆಗೆ ಒಪ್ಪದ ನ್ಯಾಯಾಲಯ

    ತುರ್ತು ವಿಚಾರಣೆಗೆ ಒಪ್ಪದ ನ್ಯಾಯಾಲಯ

    ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರಾಗಿಣಿಗೆ ಇಂದು ಸಹ ನಿರಾಸೆಯಾಗಿದೆ. ಈ ನಡುವೆ ನಟಿಯ ಪರ ವಕೀಲರು ತುರ್ತಾಗಿ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರೂ ಸಹ, ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮೂಂದೂಡಿದೆ.

    ಸೆಪ್ಟೆಂಬರ್ 4 ರಂದು ರಾಗಿಣಿ ಬಂಧನ

    ಸೆಪ್ಟೆಂಬರ್ 4 ರಂದು ರಾಗಿಣಿ ಬಂಧನ

    ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ನಟಿಯನ್ನು ವಶಕ್ಕೆ ಪಡೆದುಕೊಂಡರು. ಮೂರು ದಿನಗಳ ಕಾಲ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ ಬಳಿಕ ಸೆಪ್ಟೆಂಬರ್ 7 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಮತ್ತೆ ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

    ರಾಗಿಣಿ ನಟನೆಯ ಸಿನಿಮಾಕ್ಕೆ ಬಾಲಿವುಡ್‌ನಲ್ಲಿ ಸಖತ್ ಡಿಮ್ಯಾಂಡ್‌!ರಾಗಿಣಿ ನಟನೆಯ ಸಿನಿಮಾಕ್ಕೆ ಬಾಲಿವುಡ್‌ನಲ್ಲಿ ಸಖತ್ ಡಿಮ್ಯಾಂಡ್‌!

    ಇಂದು ಮತ್ತೆ ಕೋರ್ಟ್‌ಗೆ ರಾಗಿಣಿ ಹಾಜರ್

    ಇಂದು ಮತ್ತೆ ಕೋರ್ಟ್‌ಗೆ ರಾಗಿಣಿ ಹಾಜರ್

    ಐದು ದಿನಗಳು ಸಿಸಿಬಿ ವಶದಲ್ಲಿದ್ದ ರಾಗಿಣಿಯನ್ನು ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಲಾಗುತ್ತಿದೆ. ಈ ವೇಳೆ ಸಿಸಿಬಿ ಅಧಿಕಾರಿಗಳು ಮತ್ತೆ ತನಿಖೆಗಾಗಿ ವಶಕ್ಕೆ ಕೇಳುತ್ತಾರಾ ಅಥವಾ ನ್ಯಾಯಾಂಗ ಬಂಧನಕ್ಕೆ ನೀಡಲಾಗುತ್ತದಾ ಎಂಬ ತೀವ್ರ ಕುತೂಹಲ ಕಾಡುತ್ತಿದೆ.

    Recommended Video

    Sanjjana ಗೊಳಾಟಕ್ಕೆ full stop | Filmibeat Kannada
    ನಟಿ ರಾಗಿಣಿಗೆ ಜೈಲಿನ ಆತಂಕ?

    ನಟಿ ರಾಗಿಣಿಗೆ ಜೈಲಿನ ಆತಂಕ?

    ಸಿಸಿಬಿ ಪೊಲೀಸರು ಮತ್ತೆ ವಶಕ್ಕೆ ಕೇಳುವ ಸಾಧ್ಯತೆ ಕಡಿಮೆ. ಏಕಂದ್ರೆ, ರಾಗಿಣಿಯ ರಕ್ತದ ಪರೀಕ್ಷೆ, ವೈದ್ಯಕೀಯ ತಪಾಸಣೆ ಮುಗಿದಿದೆ. ಒಂದು ವೇಳೆ ಸಿಸಿಬಿ ಪೊಲೀಸರು ರಾಗಿಣಿ ತನಿಖೆ ಮುಗಿದಿದೆ ಅಂದರೆ ಮುಂದಿನ ಆದೇಶದವರೆಗೂ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಹೆಚ್ಚು. ನ್ಯಾಯಾಂಗ ಬಂಧನ ವಿಧಿಸಿದರೆ ಪರಪ್ಪನ ಅಗ್ರಹಾರ ಜೈಲಿಗೆ ರಾಗಿಣಿ ಸ್ಥಳಾಂತರವಾಗಲಿದ್ದಾರೆ. ಏಕಂದ್ರೆ, ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 15ಕ್ಕೆ ಮೂಂದೂಡಲಾಗಿದೆ.

    English summary
    Special Narcotics Drugs and Psychotropic Substances (NDPS) court Bengaluru adjourned the bail application hearing of actress Ragini Dwivedi.
    Friday, September 11, 2020, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X