»   » ಸದ್ಯಕ್ಕಿಲ್ಲ ಗ್ಲಾಮರ್ ರಾಣಿ ರಾಗಿಣಿ ದ್ವಿವೇದಿ 'ಕಹಾನಿ'

ಸದ್ಯಕ್ಕಿಲ್ಲ ಗ್ಲಾಮರ್ ರಾಣಿ ರಾಗಿಣಿ ದ್ವಿವೇದಿ 'ಕಹಾನಿ'

Posted By:
Subscribe to Filmibeat Kannada
ನಟಿ ರಾಗಿಣಿ ದ್ವಿವೇದಿ ಮುಂಬರುವ ವಿದ್ಯಾ ಬಾಲನ್ 'ಕಹಾನಿ' ರೀಮೇಕ್ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ. ಈ ಮೊದಲು ಚಿತ್ರದ ಮುಹೂರ್ತ ಬರುವ ತಿಂಗಳು, ನವೆಂಬರ್ ಮೊದಲ ವಾರದಲ್ಲಿ ಎಂದು ನಿಗದಿಯಾಗಿತ್ತು. ಆದರೆ ಇದೀಗ ಮುಹೂರ್ತ ಮುಂದಕ್ಕೆ ಹೋಗಿದೆ. ವಿದ್ಯಾ ಬಾಲನ್ ಸೂಪರ್ ಹಿಟ್ ಚಿತ್ರ 'ಕಹಾನಿ'ಯಲ್ಲಿ ರಾಗಿಣಿ ದ್ವಿವೇದಿ ನಟಿಸುವುದು ಪಕ್ಕಾ ಆಗಿದೆ.

ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿರುವ ವಿಷಯವನ್ನು ನಿರ್ಮಾಪಕರಾದ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. "ಈ ಮೊದಲು ಅಂದುಕೊಂಡಂತೆ ಚಿತ್ರದ ಮುಹೂರ್ತವು ನವೆಂಬರ್ ಮೊದಲ ವಾರದಲ್ಲಿ ನಡೆಯಬೇಕಿತ್ತು. ಆದರೆ ನಾವು ಚಿತ್ರೀಕರಣ ಮಾಡಲು ಆಯ್ಕೆಮಾಡಿಕೊಂಡಿರುವ ಶೂಟಿಂಗ್ ತಾಣದಲ್ಲಿ ಈಗ ಚಿತ್ರೀಕರಣ ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಈ ಚಿತ್ರದ ಮಹೂರ್ತ ಮುಂದಕ್ಕೆ ಹೋಗಿದೆ" ಎಂದಿದ್ದಾರೆ.

ಇತ್ತೀಚಿಗಷ್ಟೇ 'ರಾಗಿಣಿ ಐಪಿಎಸ್' ಚಿತ್ರೀಕರಣ ಮುಗಿಸಿರುವ ರಾಗಿಣಿ, ಅದಕ್ಕೂ ಮೊದಲು ಲೂಸ್ ಮಾದ ಯೋಗೇಶ್ ನಾಯಕತ್ವದ 'ಬಂಗಾರಿ' ಮುಗಿಸಿದ್ದಾರೆ. ಶಿವರಾಜ್ ಕುಮಾರ್ ನಾಯಕತ್ವದ ಶಿವ ಚಿತ್ರದ ನಂತರ ರಾಗಿಣಿಯ ಯಾವುದೇ ಚಿತ್ರವು ಬಿಡುಗಡೆ ಆಗಿಲ್ಲ. ಸದ್ಯದಲ್ಲೇ ಬಂಗಾರಿ ತೆರೆಗೆ ಬರಲಿರುವ ಸಾಧ್ಯತೆ ದಟ್ಟವಾಗಿದೆ. ಅಷ್ಟರಲ್ಲಿಯೇ ಪ್ರರಂಭವಾಗಬೇಕಿದ್ದ ರೀಮೇಕ್ ಚಿತ್ರ 'ಕಹಾನಿ' ಮುಂದಕ್ಕೆ ಹೋಗಿದೆ.

ಇದೀಗ ರಾಗಿಣಿ 'ಫೇಸ್ ಟು ಫೇಸ್' ಮಲಯಾಳಂ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗೆ 'ರಗಳೆ ವಿತ್ ರಿಷಿಕಾ ' ಕಾರ್ಯಕ್ರಮದಲ್ಲಿ ಕನ್ನಡದ ಗೋಲ್ಡನ್ ಗರ್ಲ್ ರಮ್ಯಾ ಬಗ್ಗೆ ರಾಗಿಣಿ ಏನೋನೋ ಬೈಯ್ದಿದ್ದಾರೆ (ರಮ್ಯಾ-ರಾಗಿಣಿ ವಿವಾದ) ಎನ್ನುವ ಮೂಲಕ ಭಾರಿ ಸುದ್ದಿ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡದಲ್ಲಿ ನಂ ಒನ್ ಪಟ್ಟಕ್ಕಾಗಿ ಕಿತ್ತಾಡುವಷ್ಟರ ಮಟ್ಟಿಗೆ ಈಗ ರಾಗಿಣಿ ಬೆಳೆದಿದ್ದಾರೆ. ಇನ್ನು 'ರಾಗಿಣಿ' ಕಹಾನಿ ಯಾವಾಗ ಬರಲಿದೆ ಎನ್ನುವುದಷ್ಟೇ ಸದ್ಯಕ್ಕಿರುವ ಕುತೂಹಲ. (ಒನ್ ಇಂಡಿಯಾ ಕನ್ನಡ)

English summary
Actress Ragini Dwivedi upcoming movie, Bollywood Kahani Remake project is Post-phoned. The Producer suresh Kumar confirmed that due to some location permission problem, this movie to start later. 
 
Please Wait while comments are loading...