For Quick Alerts
  ALLOW NOTIFICATIONS  
  For Daily Alerts

  'ರಾಗಿಣಿ ವಿರುದ್ಧ ಪಿತೂರಿ, ಡ್ರಗ್ಸ್ ಕೇಸ್‌ ಹಿಂದೆ ಇದ್ದಾರೆ ಪ್ರಭಾವಿ': ರಾಗಿಣಿ ತಂದೆ

  |

  ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಬಂಧನವಾಗಿ 60 ದಿನ ಕಳೆದಿದೆ. ರಾಗಿಣಿ ವಿರುದ್ಧವಾಗಿ ಯಾವುದೇ ಸಾಕ್ಷ್ಯಗಳಿಲ್ಲ, ಅವರು ತಪ್ಪು ಮಾಡಿಲ್ಲ, ಡ್ರಗ್ಸ್ ಸೇವಿಸಿಲ್ಲ, ಡ್ರಗ್ಸ್ ಮಾರಾಟ ಸಹ ಮಾಡಿಲ್ಲ ಎಂದು ವಕೀಲರು ವಾದಿಸುತ್ತಿದ್ದರೂ ನ್ಯಾಯಾಲಯದಿಂದ ಜಾಮೀನು ಮಾತ್ರ ಸಿಗುತ್ತಿಲ್ಲ.

  ರಾಗಿಣಿ ಮತ್ತು ಸಂಜನಾಗೆ ಜಾಮೀನು ಸಿಗದಷ್ಟು ಗಂಭೀರತೆ ಪಡೆದುಕೊಂಡಿದ್ಯಾ ಈ ಪ್ರಕರಣ? ಸಿಸಿಬಿ ಪೊಲೀಸರ ಬಳಿ ನಟಿಯರ ವಿರುದ್ಧ ಬಲವಾದ ಸಾಕ್ಷ್ಯಗಳಿದ್ಯಾ? ಈ ಇಬ್ಬರು ಬಿಟ್ಟರೆ ಈ ಪ್ರಕರಣದಲ್ಲಿ ಬೇರೆ ಯಾರ ಹೆಸರು ಏಕೆ ಹೊರಬಿದ್ದಿಲ್ಲ ಎಂಬ ಸಾಕಷ್ಟು ಅನುಮಾನಗಳು ಇದೆ.

  ಡ್ರಗ್ಸ್ ಪ್ರಕರಣ: ರಾಗಿಣಿ-ಸಂಜನಾ ಜಾಮೀನು ಅರ್ಜಿ ವಜಾಗೊಳಿಸಿದ ಹೈ ಕೋರ್ಟ್

  ಮಂಗಳವಾರ ಹೈ ಕೋರ್ಟ್ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ ರಾಗಿಣಿ ತಂದೆ ರಾಕೇಶ್ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ''ನನ್ನ ಮಗಳ ವಿರುದ್ಧ ಷಡ್ಯಂತ್ರ ನಡೆದಿದೆ, ಈ ಕೇಸ್‌ನಲ್ಲಿ ಬೇರೆ ತಪ್ಪಿಸಿಕೊಳ್ಳಲು ನನ್ನ ಮಗಳನ್ನು ಸಿಕ್ಕಿ ಹಾಕಿಸಿದ್ದಾರೆ'' ಎಂದು ದೂರಿದ್ದಾರೆ. ಮುಂದೆ ಓದಿ...

  ರಾಗಿಣಿ ವಿರುದ್ಧ ಸಂಚು ರೂಪಿಸುತ್ತಿರುವುದು ಯಾರು?

  ರಾಗಿಣಿ ವಿರುದ್ಧ ಸಂಚು ರೂಪಿಸುತ್ತಿರುವುದು ಯಾರು?

  ''ಈ ಕೇಸ್‌ನಲ್ಲಿ ಯಾರು ಆಸಕ್ತಿ ಹೊಂದಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಇದರ ಹಿಂದೆ ಯಾರೂ ಇದ್ದಾರೆ ಎನ್ನುವುದು ಬಲವಾಗಿದೆ. ನನ್ನ ಮಗಳ ಹೆಸರು ದುರ್ಬಳಕೆ ಮಾಡಿಕೊಂಡು ತಮ್ಮ ಕೆಲಸ ಸಾಧಿಸುತ್ತಿದ್ದಾರೆ. ರಾಗಿಣಿ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ. ಆದರೂ ಇಷ್ಟು ಗಂಭೀರತೆ ಏಕೆ'' ಎಂದು ರಾಕೇಶ್ ಅವರು ಪ್ರಶ್ನಿಸಿದ್ದಾರೆ.

  ಸಿಸಿಬಿ ತನಿಖೆ ಹಿಂದೆ ಅವರಿದ್ದಾರೆ!

  ಸಿಸಿಬಿ ತನಿಖೆ ಹಿಂದೆ ಅವರಿದ್ದಾರೆ!

  ''ಸಿಸಿಬಿ ದಾಳಿ ಮಾಡಿದ ಮೊದಲ ದಿನದಿಂದಲೂ ಹಲವು ರೀತಿ ಗೊಂದಲಗಳನ್ನು ಕಾಣಬಹುದು. ಪೊಲೀಸರು ತನಿಖೆ, ಹೊರಜಗತ್ತಿಗೆ ಅವರು ರಾಗಿಣಿಯನ್ನು ಪ್ರದರ್ಶಿಸಿದ ರೀತಿ, ಅಲ್ಲಿಂದ ಇಲ್ಲಿಯವರೆಗೂ ಅವರು ನಡೆದುಕೊಂಡ ರೀತಿ ಎಲ್ಲವೂ ಸ್ಪಷ್ಟವಾಗಿ ಹೇಳುತ್ತಿದೆ ಇದರ ಹಿಂದೆ ಯಾರೋ ಇದ್ದಾರೆ ಅಂತ'' ಎಂದು ಕಿಡಿಕಾರಿದ್ದಾರೆ.

  ತನಿಖೆಗೆ ಸಹಕರಿಸಿಲ್ಲ ಎಂದು ಹೇಳುತ್ತಿರುವುದೇಕೆ?

  ತನಿಖೆಗೆ ಸಹಕರಿಸಿಲ್ಲ ಎಂದು ಹೇಳುತ್ತಿರುವುದೇಕೆ?

  ''ನೋಟಿಸ್ ನೀಡಿದಾಗ ಸ್ವತಃ ರಾಗಿಣಿ ತನಿಖೆಗೆ ಹೋಗಲು ಸಿದ್ಧವಿದ್ದಳು. ಅಷ್ಟರೊಳಗೆ ಸಿಸಿಬಿ ಮನೆಗೆ ದಾಳಿ ಮಾಡಿದರು. ಆದರೂ, ತನಿಖೆಗೆ ಅಡ್ಡಿ ಪಡಿಸಿಲ್ಲ. ಲ್ಯಾಪ್‌ಟ್ಯಾಪ್, ಮೊಬೈಲ್ ಎಲ್ಲವೂ ನೀಡಿ ಪ್ಯಾಟ್ರನ್, ಲಾಕ್ ಎಲ್ಲವೂ ನೀಡಿದಳು. ತನ್ನ ಬಳಿಯಿದ್ದ ಎಲ್ಲ ಮಾಹಿತಿ ನೀಡಿದ್ದಾಳೆ, ಹಾಗಿದ್ದರೂ ತನಿಖೆಗೆ ಸಹಕರಿಸುತ್ತಿಲ್ಲ ಎನ್ನುತ್ತಿರುವುದು ಏಕೆ'' ಎಂದು ರಾಕೇಶ್ ಪ್ರಶ್ನಿಸಿದ್ದಾರೆ.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth
  ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ

  ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ

  ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಜಾಮೀನು ಸಿಗಲಿಲ್ಲ. ಹೈ ಕೋರ್ಟ್‌ನಲ್ಲೂ ಜಾಮೀನು ಅರ್ಜಿ ವಜಾಗೊಂಡಿದೆ. ಈಗ ಸುಪ್ರೀಂಕೋರ್ಟ್‌ಗೆ ಹೋಗುವ ಅವಕಾಶ ಇದೆ. ಈ ಕುರಿತು ರಾಗಿಣಿ ತಂದೆ ಸಹ ಒಲವು ತೋರಿದ್ದು, ವಕೀಲರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

  English summary
  Sandalwood drugs case: Ragini Dwivedi Father Rakesh has accused that 'somebody working behind in this case'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X