»   » ಹುಟ್ಟುಹಬ್ಬದಂದೇ ಐಪಿಎಸ್ ಪಟ್ಟ ಗಿಟ್ಟಿಸಿದ ರಾಗಿಣಿ

ಹುಟ್ಟುಹಬ್ಬದಂದೇ ಐಪಿಎಸ್ ಪಟ್ಟ ಗಿಟ್ಟಿಸಿದ ರಾಗಿಣಿ

Posted By:
Subscribe to Filmibeat Kannada
ನಟಿ ರಾಗಿಣಿ ದ್ವಿವೇದಿಗೆ ಇಂದು (ಮೇ 24, 2012) 22 ವರ್ಷ. ತಮ್ಮ ಈ ಶುಭ ದಿನದಲ್ಲಿ ರಾಗಿಣಿ ತಮ್ಮದೇ ಹೆಸರಿನ ಹೊಸ ಚಿತ್ರವಾದ 'ರಾಗಿಣಿ ಐಪಿಎಸ್' ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡರು. ಅವರು ತುಂಬಾ ಖುಷಿಯಾಗಿದ್ದಕ್ಕೂ ಇದೇ ಕಾರಣವಾಗಿತ್ತು.

"ಇಂದು ನನ್ನ ಹುಟ್ಟುಹಬ್ಬ. ಜೊತೆಗೆ ನನ್ನ ಹೊಸ ಚಿತ್ರದ ಮುಹೂರ್ತದ ದಿನ. ಚಿತ್ರೀಕರಣದಲ್ಲಿ ಗಾಯಗೊಂಡು ನೋವಿನಿಂದ ಬಳಲುತ್ತಿರುವ ನನಗೆ ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾರೆ. ಆದರೆ ನಾನು ನೋವಿಗೆ ಬೇರೆ ಪರಿಹಾರೋಪಾಯ ಕಂಡುಕೊಂಡು ಚಿತ್ರದ ಮುಹೂರ್ತದಲ್ಲಿ ಭಾಗವಹಿಸಲಿದ್ದೇನೆ" ಎಂದಿದ್ದಾರೆ ರಾಗಿಣಿ.

ಆನಂದ್ ಪಿ ರಾಜು ನಿರ್ದೇಶನದ ಐಪಿಎಸ್ ರಾಗಿಣಿ ಚಿತ್ರದಲ್ಲಿ ರಾಗಿಣಿ ಮೊದಲಬಾರಿಗೆ ಸಾಹಸ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮಾಲಾಶ್ರೀ ಮಾತ್ರ ಈ ರೀತಿ ಆಕ್ಷನ್ ಪಾತ್ರದಲ್ಲಿ ಸಂಪೂರ್ಣವಾಗಿ ಮಿಂಚಿದ್ದಾರೆ. ಈಗ ಮಾಲಾಶ್ರೀ ದಾರಿಯಲ್ಲಿ ಸಾಗಲಿರುವ ರಾಗಿಣಿ, ಇದರಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾಲವೇ ಹೇಳಬೇಕು.

ಕೆ ಮಂಜು ನಿರ್ಮಾಣದ ರಾಗಿಣಿ ಐಪಿಎಸ್ ಚಿತ್ರಕ್ಕೆ ರಾಗಿಣಿ ಬರೋಬ್ಬರಿ ಮೂವತ್ತಾರು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬುದು ಸುದ್ದಿಮೂಲಗಳಿಂದ ಬಂದ ಮಾಹಿತಿ. ಅದೇನೇ ಇರಲಿ, ರಾಗಿಣಿ ಈಗ ಕನ್ನಡದ ಟಾಪ್ ನಟಿಯರಲ್ಲೊಬ್ಬರು ಎಂಬುದಂತೂ ಸತ್ಯ.

ಮಾಡೆಲಿಂಗ್ ವೃತ್ತಿಯ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಗಿಣಿ, ಸುದೀಪ್ ಜೊತೆ 'ವೀರ ಮದಕರಿ' ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದವರು. ತಮಿಳು, ಮಲೆಯಾಳಂ ಮತ್ತು ಕನ್ನಡವೂ ಸೇರಿದಂತೆ ಇದೀಗ 15ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ರಾಗಿಣಿ.

ಮಾತೆತ್ತಿದರೆ ತಮ್ಮದೇ ಹೆಸರಿನ ಚಿತ್ರ, ಹುಟ್ಟುಹಬ್ಬದಂದು ಮಹೂರ್ತ ಆಚರಿಸಿಕೊಳ್ಳುತ್ತಿರುವುದನ್ನೇ ಹೇಳುತ್ತಿದ್ದಾರೆ ರಾಗಿಣಿ. ಫೆಮಿನಾ ಮಿಸ್ ಸೌತ್ ಇಂಡಿಯಾ, ರಾಗಿಣಿಯ ಹುಟ್ಟುಹಬ್ಬವನ್ನು ಇಂದು ವಿಶೇಷವಾಗಿ ಆಚರಿಸಲಿದೆ. ರಾಗಿಣಿಗೆ ಒನ್ ಇಂಡಿಯಾ ಕನ್ನಡದ ಹುಟ್ಟುಹಬ್ಬದ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

English summary
Actress Ragini Dwivedi is celebrating her 22nd birthday in a very special way by starting shooting her cop film Ragini IPS on May 24th, 2012. She told "I am thrilled that a film with my name is starting off on my birthday"
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada