»   » ಕನ್ನಡ, ತೆಲುಗು 'ಊಜ' ಚಿತ್ರದಲ್ಲಿ ರಾಗಿಣಿ ದ್ವಿವೇದಿ

ಕನ್ನಡ, ತೆಲುಗು 'ಊಜ' ಚಿತ್ರದಲ್ಲಿ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ಆಂಧ್ರದಲ್ಲೂ ತುಪ್ಪದ ರುಚಿ ತೋರಿಸಲು ಸಜ್ಜಾಗಿದ್ದಾರೆ. ಅವರ ಅಭಿನಯದ ಊಜ ಚಿತ್ರ ಸದ್ದಿಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರದ ಮೂಲಕ ಆಂಧ್ರ ಸಿನಿ ಪ್ರೇಮಿಗಳಿಗೆ ರಾಗಿಣಿ ಇನ್ನಷ್ಟು ಹತ್ತಿರವಾಗುವ ಸಮಯ ಬಂದಿದೆ.

ಆರಂಭದಿಂದಲೇ ಬಹು ನಿರೀಕ್ಷೆ ಹುಟ್ಟಿಸಿರುವ 'ಊಜ' ಕನ್ನಡ ಸಿನಿಮಾ 20 ದಿವಸಗಳ ಕಾಲ ಮಲೇಷಿಯಾ ಹಾಗೂ 25 ದಿವಸಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿ ಈಗ ತಾಂತ್ರಿಕ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದೆ.

ವೇಗ ಎಂಟರ್ ಟೇನ್ಮೇಂಟ್ ಪ್ರೈವೇಟ್ ಲಿಮಿಟೆಡ್ ಆಂಧ್ರ ಪ್ರದೇಶದಲ್ಲಿ 'ಎಸ್ ಎಂ ಎಸ್', 'ಸಿಕ್ಸ್', 'ರಾಮಾಚಾರಿ', 'ಗೋಲ ಗೋಲ' ಸಿನಿಮಾಗಳಿಗೆ ಪ್ರಸಿದ್ಧಿ ಪಡೆದ ಸಂಸ್ಥೆ. ಎಸ್ ವಿಕ್ರಮ್ ರಾಜು ಅವರ ನಿರ್ಮಾಣದಲ್ಲಿ ರಾಜ್ ಕುಮಾರ್ ರೆಡ್ಡಿ ಅವರು ನಿರ್ದೇಶನ ಮಾಡಿರುವ ಕನ್ನಡ ಹಾಗೂ ತೆಲುಗು ಭಾಷೆಯ ಚಿತ್ರ ಇದಾಗಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Ragini Dwivedi in Kannada, Telugu Ouija

ದ್ವಿಭಾಷಾ ಚಿತ್ರವಾಗಿರುವ ಈ ಚಿತ್ರದಲ್ಲಿ ಕನ್ನಡದ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ವಿಶೇಷ ಪಾತ್ರವನ್ನು ಪೋಷಿಸಿದ್ದಾರೆ. ಇದೊಂದು ಹರಾರ್ ಸಿನಿಮಾ ಎಂದು ನಿರ್ಮಾಪಕ ವಿಕ್ರಮ್ ರಾಜು ಅವರು ತಿಳಿಸಿದ್ದಾರೆ.

ರವಿ ಅವರು ಛಾಯಾಗ್ರಹಣ ಮಾಡಿದ್ದಾರೆ, ಹರಿ ಅವರ ಸಂಗೀತ, ಎಸ್ ಬಿ ಶೇಖರ್ ಅವರ ಸಂಕಲನ ಇರುವ ಚಿತ್ರ ಅದ್ದೂರಿಯಾಗಿ ನಿರ್ಮಾಣ ಆಗಲಿದ್ದು ತಾಂತ್ರಿಕ ಕೌಶಲ್ಯ ಸಹ ಪ್ರೇಕ್ಷಕನಿಗೆ ಮನರಂಜನೆ ನೀಡಲಿದೆ. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ]

ತೆಲುಗು ಭಾಷೆಯಲ್ಲಿ ಆರ್ಯ 2, ಮಿರ್ಚಿ ಹಾಗೂ ಇನ್ನಿತರ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ ರಘು ಅವರು ಈ ಸಿನಿಮಾಕ್ಕೆ ಹೆಜ್ಜೆ ಹಾಕಿಸಿದ್ದಾರೆ. ಕೀರ್ತಿ ಗೌಡ ಈ ಚಿತ್ರದ ಕಾರ್ಯಕಾರಿ ನಿಮಾಪಕರು.

ರಾಗಿಣಿ ದ್ವಿವೇದಿ ಜೊತೆ ಮಾಧುರಿ ಇಟಗಿ, ಗಾಯತ್ರಿ ವೆಂಕಟಗಿರಿ, ಭರತ್ (10 ಕ್ಲಾಸ್ ತೆಲುಗು ಸಿನಿಮಾ), ಶ್ರದ್ಧಾ ದಾಸ್, ಕಾದಂಬರಿ, ಅವಿನಾಶ್, ಶಯ್ಯಾಜಿ ಶಿಂಧೆ, ರಘು ಕುಂಚೆ, ರಾಜ ರವೀಂದ್ರ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Actress Ragini Dwivedi's Kannada, Telugu movie 'Ouija' shooting finished. It's an horror movie in which Ragini plays a special role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada