»   » ಯಾರಪ್ಪಾ ಇದು ಸ್ಯಾಂಡಲ್ ವುಡ್ ಮಾಸ್ ಕ್ವೀನ್?

ಯಾರಪ್ಪಾ ಇದು ಸ್ಯಾಂಡಲ್ ವುಡ್ ಮಾಸ್ ಕ್ವೀನ್?

By: ಜೀವನರಸಿಕ
Subscribe to Filmibeat Kannada

ರಾಗಿಣಿ ಅಭಿನಯದ ಪಂಚಭಾಷಾ ಚಿತ್ರ 'ಅಮ್ಮ' ಶೂಟಿಂಗ್ ಮುಗಿಸಿದೆ. ಚಿತ್ರದ ಕರ್ಟನ್ ರೈಸರ್ ಟೀಸರ್ ಹೊರ ಬಂದಿದೆ. ಈ ಮೂಲಕ ಚಿತ್ರತಂಡ ರಾಗಿಣಿಗೆ ಹೊಸ ಸ್ಟಾರ್ ಟೈಟಲ್ ಕೊಟ್ಟಿದೆ. ಅದು 'ಸ್ಯಾಂಡಲ್ ವುಡ್ ಮಾಸ್ ಕ್ವೀನ್' ಅಂತ.

'ಅಮ್ಮ' ಸಿನಿಮಾದಲ್ಲಿ ಜಬರ್ದಸ್ತ್ ಫೈಟ್ ಗಳಿವೆ. ರಾಗಿಣಿ ಐಪಿಎಸ್ ನಂತರ ರಾಗಿಣಿಯನ್ನ ಆಕ್ಷನ್ ಕ್ವೀನ್ ಅವತಾರದಲ್ಲಿ ಆಗಿ ಮತ್ತೊಮ್ಮೆ ನೋಡೋ ಅವಕಾಶ ಅಮ್ಮ ಸಿನಿಮಾ ಮೂಲಕ ಸಿಗಲಿದೆ.

Ragini Dwivedi is now Sandalwood Mass Queen

ಪೋಲೀಸ್ ಆದ್ರೂ ಗ್ಲಾಮರಸ್ ಪೊಲೀಸ್ ಆಗಿ ಖಾಕಿ ಬಿಚ್ಚಿ ಬನಿಯನ್ನಲ್ಲಿ ಫೈಟ್ ಮಾಡಿದ್ದ ರಾಗಿಣಿಯನ್ನ ನೋಡಿ ಪಡ್ಡೆ ಪ್ರೇಕ್ಷಕರು ಥ್ರಿಲ್ಲಾಗಿದ್ರು. ಜಯಲಲಿತಾ ಅವರ ಜೀವನಾಧಾರಿತ ಕಥೆ ಅನ್ನೋ ಕಾರಣಕ್ಕೆ ವಿವಾದಕ್ಕೂ ಸಿಲುಕಿದ ಚಿತ್ರ. ಈ ಚಿತ್ರದಲ್ಲಿ ಈಗ ಹೊರ ಬಂದಿರೋ ಟೀಸರ್ ನಲ್ಲಿ ರಾಗಿಣಿಯ ಪಾತ್ರದ ಬಗ್ಗೆ ಕುತೂಹಲವನ್ನ ಹಾಗೇ ಉಳಿಸಿದೆ ಫೈಸಲ್ ಸೈಫ್ ನಿರ್ದೇಶನದ ಚಿತ್ರತಂಡ.

ಇನ್ನು ಬಾಲಿವುಡ್ ಮತ್ತು ಇತರೆ ಚಿತ್ರರಂಗದ ಖ್ಯಾತ ಮುಖಗಳಾದ ರಾಜ್ ಪಾಲ್ ಯಾದವ್, ಕವಿತಾ ರಾಧೇ ಶ್ಯಾಮ್, ಪೂಜಾ ಮಿಶ್ರಾ ಚಿತ್ರದ ಕರ್ಟನ್ ರೈಸರ್ ನಲ್ಲಿ ಕಾಣಿಸಿಕೊಂಡಿರೋದು ಕುತೂಹಲ ಮೂಡಿಸಿದೆ.

Ragini Dwivedi is now Sandalwood Mass Queen

ಇಷ್ಟು ದಿನ ಗ್ಲಾಮರ್, ಆಕ್ಷನ್ ಪಾತ್ರಗಳಿಗೆ ಹೆಸರಾಗಿದ್ದ ರಾಗಿಣಿ ಈ ಚಿತ್ರದ ಮೂಲಕ ಅಭಿನಯಕ್ಕೆ ಸವಾಲೊಡ್ಡುವ ಪಾತ್ರವನ್ನು ಪೋಷಿಸಿದ್ದಾರೆ. ಅವರ ವೃತ್ತಿಬದುಕಿನಲ್ಲಿ 'ಅಮ್ಮ' ಮತ್ತೊಂದು ಮೈಲುಗಲ್ಲಾಗುವ ಎಲ್ಲಾ ನಿರೀಕ್ಷೆಗಳು ಇವೆ.

English summary
Actress Ragini Dwivedi got new title called 'Sandalwood Mass Queen'. The title has given by 'Amma' movie team by releasing the curtainraiser trailer of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada