»   »  ಕುಲದೇವಿ ದರ್ಶನಕ್ಕಾಗಿ ಪಂಜಾಬ್ ಪ್ರವಾಸದಲ್ಲಿ ರಾಗಿಣಿ ದ್ವಿವೇದಿ

ಕುಲದೇವಿ ದರ್ಶನಕ್ಕಾಗಿ ಪಂಜಾಬ್ ಪ್ರವಾಸದಲ್ಲಿ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

'ವೀರ ರಣಚಂಡಿ' ಸಿನಿಮಾ ನಂತರ ಯಾವುದೇ ಚಿತ್ರೀಕರಣದಲ್ಲಿ ತೊಡಗಿಕೊಳ್ಳದ ನಟಿ ರಾಗಿಣಿ ದ್ವಿವೇದಿ ಸ್ನೇಹಿತೆ ಪ್ರಜ್ಞಾ ರವರ ಕಂಪನಿಯ ಆಡ್ ಫೋಟೋ ಶೂಟ್ ಗೆ ಪೋಸ್ ಕೊಟ್ಟಿದ್ದರು. ನಂತರ ಚಿತ್ರೀಕರಣದಿಂದ ಬ್ರೇಕ್ ಪಡೆದಿರುವ ನಟಿ ಈಗ ಕುಲದೇವಿ ದರ್ಶನಕ್ಕಾಗಿ ಪಂಜಾಬ್ ನಲ್ಲಿನ ಅಮೃತಸರ ಪ್ರವಾಸದಲ್ಲಿದ್ದಾರೆ.[ರಾಂಧವ ಪ್ರೇಯಸಿ 'ವೀರ ರಣಚಂಡಿ' ಆರ್ಭಟಕ್ಕೆ ವಿಮರ್ಶಕರ ಅಭಿಪ್ರಾಯ..]

ಅಲ್ಲದೇ ದೀರ್ಘಕಾಲದ ನಂತರ ತವರೂರಿಗೆ ಮರಳಿದ್ದು ಅಲ್ಲಿ ಕುಟುಂಬದವರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಮುಂದೆ ಓದಿ...

ದೇವರ ಸರ್ಶನಕ್ಕಾಗಿ ರಾಗಿಣಿ ಭೇಟಿ

ದೀರ್ಘಕಾಲದ ನಂತರ ನಟಿ ರಾಗಿಣಿ ರವರು ಅವರ ತಾತನ ಊರಿಗೆ ಹೋಗಿದ್ದು, ಪಂಜಾಬಿ ಉಡುಗೆಯಲ್ಲಿ ಕುಟುಂಬದವರೊಂದಿಗೆ ದೇವಸ್ತಾನಕ್ಕೆ ತೆರಳಿ ಅವರ ಕುಲದೇವಿ ದರ್ಶನ ಪಡೆದಿದ್ದಾರೆ.[ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ..]

ಪ್ರವಾಸದ ಫೋಟೋ

ನಟಿ ರಾಗಿಣಿ ಅವರು ತಮ್ಮ ಕುಟುಂಬದ ಹಿರಿಯರು ವಾಸವಿರುವ ಪಂಜಾಬ್ ರಾಜ್ಯದ ಅಮೃತಸರ್ ಗೆ ಹೋಗಿದ್ದಾರೆ. ಅಲ್ಲದೇ ಅಲ್ಲಿನ ಪ್ರವಾಸದ ಕುರಿತು ಪೋಟೋಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

ಪರಿಸರದಲ್ಲಿ ಫೋಟೋಗೆ ಪೋಸ್

ಸಿನಿಮಾ, ಶೂಟಿಂಗ್ ಎಂತಲೇ ಓಡಾಡಿಕೊಂಡು ನಗರ ಪ್ರದೇಶದಲ್ಲಿದ್ದ ರಾಗಿಣಿ ಈಗ ತವರೂರಿನ ಸೊಬಗನ್ನು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ತೋಟ, ಗದ್ದೆ ಪ್ರದೇಶಗಳಲ್ಲಿ ಓಡಾಡಿ ಸಂತೋಷ ಪಟ್ಟಿದ್ದಾರೆ.

ಪ್ರಾಣಿಗಳ ಜೊತೆ ಆಡವಾಡಿದ ರಾಗಿಣಿ

ಅಪರೂಪಕ್ಕೆ ಹಳ್ಳಿಗಾಡಿನ ಪ್ರದೇಶಕ್ಕೆ ಹೋಗಿರುವ ನಟಿ ರಾಗಿಣಿ ಅಲ್ಲಿ ಪ್ರಾಣಿಗಳೊಂದಿಗೆ ಆಟವಾಡಿದ್ದು, ಕರುವಿನೊಂದಿಗೆ ತೆಗೆದುಕೊಂಡ ಫೋಟೋವನ್ನು ಖುಷಿಯಿಂದ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

English summary
Kannada Actress Ragini Dwivedi Punjab tour.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada