»   » 'ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ

'ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ

Posted By:
Subscribe to Filmibeat Kannada

'ತುಪ್ಪ ಬೇಕಾ ತುಪ್ಪ' ಅಂತ ಗಾಂಧಿನಗರದಲ್ಲಿ 'ರಾಗಿಣಿ' ಅನ್ನುವ ಬೆಂಗಾಲಿ ಬೆಡಗಿ ಬಿಂಕ ಬಿಟ್ಟು ಅದ್ಯಾವಾಗ ತುಪ್ಪ ಮಾರೋಕೆ ನಿಂತ್ಳೋ, ಅಂದಿನಿಂದ ತೆರೆಮೇಲೆ 'ತುಪ್ಪ'ದ ಬೇಡಿಕೆ ಜಾಸ್ತಿಯಾಗಿದೆ.

ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಕಾಲಿವುಡ್ ಮತ್ತು ಟಾಲಿವುಡ್ ನಲ್ಲೂ ಪಡ್ಡೆಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿರುವ ರಾಗಿಣಿ, ಇದೀಗ ಬಿಸಿ ಬಿಸಿ 'ನಾಟಿ ಕೋಳಿ' ಸಾರಿಗೆ ಮಿರ್ಚಿ ಮಸಾಲೆ ಅರೆಯುತ್ತಾರಂತೆ. [ಕನ್ನಡ, ತೆಲುಗು 'ಊಜ' ಚಿತ್ರದಲ್ಲಿ ರಾಗಿಣಿ ದ್ವಿವೇದಿ]

Ragini Dwivedi2

'ನಾಟಿ ಕೋಳಿ' ಅನ್ನುವ ಹೆಸರು ಕೇಳಿದರೇ, ಬಾಯಲ್ಲಿ ನೀರೂರುವ ಚಿಕನ್ ಪ್ರಿಯರಿಗೆ, ಅದಕ್ಕೆ 'ಖಾರ ಮಸಾಲೆ' ಹಾಕೋದು ರಾಗಿಣಿ ಅಂದ್ರೆ ಯಾರ್ತಾನೆ ಕಣ್ಣು ಬಾಯಿ ಬಿಡಲ್ಲ ಹೇಳಿ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹಾಗಂತ ಬಿಸಿ ಬಿಸಿ ನಾಟಿ ಕೋಳಿ ಸಾರು ರಿಯಲ್ಲಾಗಿ ರೆಡಿಯಾಗಲ್ಲ. ಇದು ಹೊಸ ವರ್ಷಕ್ಕೆ 'ರಾಗಿಣಿ' ಮಾಡುತ್ತಿರುವ ಸ್ಪೆಷಲ್ ಖಾದ್ಯವೂ ಅಲ್ಲ. ಬದಲಾಗಿ 'ನಾಟಿ ಕೋಳಿ' ರೀಲ್ ಸುದ್ದಿ ಅಷ್ಟೆ. ರಾಗಿಣಿ ಒಪ್ಪಿಕೊಂಡಿರುವ ಮುಂದಿನ ಚಿತ್ರದ ಹೆಸರೇ 'ನಾಟಿ ಕೋಳಿ'.

Ragini Dwivedi

ಇಂತಹ 'ರುಚಿಕರ' ಟೈಟಲ್ ಇಟ್ಟು, ರಾಗಿಣಿ ಕೈಲಿ ಸೌಟು ಹಿಡಿಸುತ್ತಿರುವ ನಿರ್ದೇಶಕರು ಬೇರಾರೂ ಅಲ್ಲ, ಈ ಹಿಂದೆ ಪೂಜಾ ಗಾಂಧಿ ಕೈಲಿ ಕತ್ತಿ ಕೊಟ್ಟು 'ದಂಡುಪಾಳ್ಯ'ದ ದಂಡಿನ ರಾಣಿ ಮಾಡಿದ್ದ ನಿರ್ದೇಶಕ ಶ್ರೀನಿವಾಸ್ ರಾಜು. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ]

ಈಗಾಗಲೇ ರಾಗಿಣಿಗೆ 'ಶಿವಂ' ಚಿತ್ರದಲ್ಲಿ ಚಾನ್ಸ್ ಕೊಟ್ಟಿರುವ ಶ್ರೀನಿವಾಸ್ ರಾಜು, ತಮ್ಮ ಮುಂದಿನ 'ನಾಟಿ ಕೋಳಿ' ಚಿತ್ರಕ್ಕೂ ರಾಗಿಣಿಯನ್ನೇ ಸೆಲೆಕ್ಟ್ ಮಾಡಿದ್ದಾರೆ. 'ಇದೊಂದು ವಿಭಿನ್ನ ಕಥೆ. ರಾಗಿಣಿಗೆ ಇಲ್ಲಿ ತುಂಬಾ ಡಿಫರೆಂಟ್ ರೋಲ್ ಇದೆ', ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ಶ್ರೀನಿವಾಸ್ ರಾಜು ತಿಳಿಸಿದ್ದಾರೆ.

'ನಾಟಿ ಕೋಳಿ' ಅನ್ನುವ 'ಟೈಟಲ್' ಮತ್ತು 'ರಾಗಿಣಿ' ಬಿಟ್ಟರೆ, ಚಿತ್ರಕಥೆ, ರಾಗಿಣಿಯ ಜೋಡಿ, ಸಿನಿಮಾ ಯಾವಾಗ ಶುರು? ಅನ್ನುವುದಾವುದು ನಿರ್ಧಾರವಾಗಿಲ್ಲ. 'ಶಿವಂ' ರಿಲೀಸ್ ಆದ್ಮೇಲೆ 'ನಾಟಿ ಕೋಳಿ' ಸಾರಿನ ತಯಾರಿ ಆರಂಭವಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Actress Ragini Dwivedi's next flick with Director Srinivas Raju is titled as 'Nati Koli'. This is her second combination along with Srinivas Raju after 'Shivam'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada