»   » 'ಫಿಲ್ಮ್ ಫೇರ್' ವೇದಿಕೆಯಲ್ಲಿ ರಾಗಿಣಿ ಧರಿಸಿದ್ದ ಡ್ರೆಸ್ ಈಗ 'ಟಾಕ್ ಆಫ್ ದಿ ಟೌನ್'

'ಫಿಲ್ಮ್ ಫೇರ್' ವೇದಿಕೆಯಲ್ಲಿ ರಾಗಿಣಿ ಧರಿಸಿದ್ದ ಡ್ರೆಸ್ ಈಗ 'ಟಾಕ್ ಆಫ್ ದಿ ಟೌನ್'

Posted By:
Subscribe to Filmibeat Kannada

ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ ಸೌಂದರ್ಯಕ್ಕೆ ಮರುಳಾಗದವರೆ ಇಲ್ಲ. ರಾಗಿಣಿ ಸಿನಿಮಾಗಳ ರೀತಿಯಲ್ಲಿ ತಮ್ಮ ಡ್ರೆಸ್ ಗಳ ಮೂಲಕವೂ ಗಮನ ಸೆಳೆಯುತ್ತಾರೆ. ಇದೀಗ ರಾಗಿಣಿ ಅವರು ತೊಟ್ಟಿದ್ದ ಡ್ರೆಸ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ನಿರೂಪಕಿ ಆಗಿ ಬದಲಾಗಲಿದ್ದಾರೆ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ

ಇತ್ತೀಚೆಗಷ್ಟೆ ರಾಗಿಣಿ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತದ ಸಿನಿ ದಿಗ್ಗಜರ ಮುಂದೆ ರಾಗಿಣಿ ಅಂಕರ್ ಆಗಿ ಮಿಂಚಿದ್ದರು. ಈ ವೇಳೆ ರಾಗಿಣಿ ಧರಿಸಿದ್ದ ಡ್ರೆಸ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿ ಬಿಟ್ಟಿದೆ.

ಕಿಚ್ಚ ಸುದೀಪ್ ಜೊತೆ ಮದುವೆಯಾಗುತ್ತಾರಂತೆ ತುಪ್ಪದ ಬೆಡಗಿ ರಾಗಿಣಿ!

ಸೌತ್ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ರಾಗಿಣಿ ಹಾಕಿಕೊಂಡಿದ್ದ ಅದ್ಯಾವ ಡ್ರೆಸ್ ಈ ಮಟ್ಟಿನ ಸದ್ದು ಮಾಡುತ್ತಿದೆ ಎಂಬ ಕುತೂಹಲ ನಿಮಗೂ ಇದ್ದರೆ ಮುಂದೆ ಓದಿ.....

ಸೌತ್ ಫಿಲ್ಮ್ ಫೇರ್ ನಲ್ಲಿ ರಾಗಿಣಿ

ಈ ಬಾರಿಯ ಸೌತ್ ಫಿಲ್ಮ್ ಫೇರ್ ಕಾರ್ಯಕ್ರಮದ ನಿರೂಪಕಿಯಾಗಿದ್ದ ರಾಗಿಣಿ ದ್ವಿವೇದಿ ಕೆಂಪು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ಈ ಡ್ರೆಸ್ ನಲ್ಲಿ ರಾಗಿಣಿಯನ್ನ ನೋಡಿದ್ದ ಅಭಿಮಾನಿಗಳು ಇನ್ನು ಈ ಗುಂಗಿನಿಂದ ಹೊರ ಬಂದಿಲ್ಲ.

ಫ್ಯಾನ್ಸ್ ಫಿಧಾ

ರಾಗಿಣಿ ಅವರ ಈ ಡ್ರೆಸ್ ನೋಡಿ ಸಾಕಷ್ಟು ಅಭಿಮಾನಿಗಳು ಫಿದಾ ಆಗಿ ಬಿಟ್ಟಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯವನ್ನು ನೇರವಾಗಿ ರಾಗಿಣಿ ಅವರಿಗೆ ತಿಳಿಸುತ್ತಿದ್ದಾರೆ.

ರಾಗಿಣಿ ಫುಲ್ ಖುಷ್

ಅಭಿಮಾನಿಗಳ ಟ್ವೀಟ್ ಗೆ ನಟಿ ರಾಗಿಣಿ ಫುಲ್ ಖುಷ್ ಆಗಿದ್ದು, ಅಭಿಮಾನಿಗಳ ಕಾಮೆಂಟ್ ಗಳಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

'ಸೈಮಾ' ಪ್ರಶಸ್ತಿಯಲ್ಲಿ ರಾಗಿಣಿ

ಪ್ರಶಸ್ತಿ ಸಮಾರಂಭದಲ್ಲಿ ರಾಗಿಣಿ ಡ್ರೆಸ್ ಸದ್ದು ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ 'ಸೈಮಾ' ಕಾರ್ಯಕ್ರಮದಲ್ಲಿಯೂ ತಮ್ಮ ಡ್ರೆಸ್ ನ ಮೂಲಕವೇ ರಾಗಿಣಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

ಸ್ವಿಮಿಂಗ್ ಸೂಟ್ ನಲ್ಲಿ

'ಶಿವಂ' ಸಿನಿಮಾದಲ್ಲಿ ನಟಿಸಿದ್ದ ರಾಗಿಣಿ ಆ ಚಿತ್ರದ ಒಂದು ದೃಶ್ಯಕ್ಕಾಗಿ ಸ್ವಿಮಿಂಗ್ ಸೂಟ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದರು.

ಹಾಟ್ ಫೋಟೋಶೂಟ್

'ನಾಟಿ ಕೋಳಿ' ಸಿನಿಮಾದ ಫೋಟೋಶೂಟ್ ಗಾಗಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ ಪಡ್ಡೆಗಳ ನಿದ್ದೆ ಕೆಡಿಸಿದ್ದರು.

ಬಿಕಿನಿಯಲ್ಲಿ ರಾಗಿಣಿ

ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿದ್ದ ರಾಗಿಣಿ ಆಗ ಬಿಕಿನಿ ತೊಟ್ಟು ಸಖತ್ ಬೋಲ್ಡ್ ಆಗಿ ಒಂದು ಫೋಟೋ ಶೂಟ್ ಮಾಡಿಸಿದ್ದರು.

English summary
Kannada Actress 'Ragini Dwivedi' fans are like her stylish dress and giving compliment in twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada