For Quick Alerts
  ALLOW NOTIFICATIONS  
  For Daily Alerts

  ಪ್ರಕಾಶ್ ಬೆಳವಾಡಿ ಜೊತೆಗೆ ರಾಗಿಣಿ ಸಿನಿಮಾ: ಚಿತ್ರದಲ್ಲಿದೆ ವಿವಾದಾತ್ಮಕ ವಿಷಯ.?

  |

  'ತುಪ್ಪ ಬೇಕಾ ತುಪ್ಪ..' ಅಂತ ಗಾಂಧಿನಗರದಲ್ಲಿ ತುಪ್ಪ ಮಾರಿದ್ದ ನಟಿ ರಾಗಿಣಿ ದ್ವಿವೇದಿ ಗ್ಲಾಮರ್ ಗೊಂಬೆಯಾಗಿ ಮಾತ್ರ ಮೊದಮೊದಲು ಗುರುತಿಸಿಕೊಂಡಿದ್ದರು. ಯಾವಾಗ ಐಟಂ ಸಾಂಗ್ ಆಫರ್ ಗಳೇ ಹೆಚ್ಚಾಗಿ ಬರಲು ಆರಂಭವಾಯ್ತೋ, ಆಗ್ಲಿಂದ ನಟಿ ರಾಗಿಣಿ ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚು ಚ್ಯೂಸಿ ಆದರು.

  'ಕಿಚ್ಚು' ಚಿತ್ರದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುವ ಆಳಾಗಿ, ದಿ ಟೆರರಿಸ್ಟ್ ಚಿತ್ರದಲ್ಲಿ ಭಯೋತ್ಪಾದಕರಿಂದ ನರಳುವ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಟಿ ರಾಗಿಣಿ ಇತ್ತೀಚೆಗಷ್ಟೇ 'ಅಧ್ಯಕ್ಷ'ನ ಜೊತೆಗೆ 'ಅಮೇರಿಕಾ' ಸುತ್ತಿ ಬಂದಿದ್ದರು.

  'ಅಧ್ಯಕ್ಷ ಇನ್ ಅಮೇರಿಕಾ' ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣ್ತು. ಹೀಗಿರುವಾಗಲೇ, ಒಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ನಟಿ ರಾಗಿಣಿ ದ್ವಿವೇದಿ. ಈ ಬಾರಿ ನಟಿ ರಾಗಿಣಿ ದ್ವಿವೇದಿ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಪ್ರಕಾಶ್ ಬೆಳವಾಡಿ ಚಿತ್ರಕ್ಕೆ. ಮುಂದೆ ಓದಿರಿ...

  ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ರಾಗಿಣಿ

  ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ರಾಗಿಣಿ

  ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲು ರಾಗಿಣಿ ದ್ವಿವೇದಿ ಒಪ್ಪಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿಗೂ ರಾಗಿಣಿ ದ್ವಿವೇದಿಗೂ ಎಲ್ಲಿಂದೆಲ್ಲಿಯ ಲಿಂಕು ಅಂತ ನೀವು ಯೋಚಿಸುತ್ತಿದ್ದರೆ, ಮತ್ತೆ 'ಅಧ್ಯಕ್ಷ ಇನ್ ಅಮೇರಿಕಾ' ಚಿತ್ರದ ಬಗ್ಗೆ ಹೇಳಲೇಬೇಕು. 'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾದಲ್ಲಿ ಶರಣ್, ರಾಗಿಣಿ ಜೊತೆಗೆ ಪ್ರಕಾಶ್ ಬೆಳವಾಡಿ ಕೂಡ ಅಭಿನಯಿಸಿದ್ದಾರೆ. ಈ ಚಿತ್ರ ಸೆಟ್ ನಲ್ಲೇ ರಾಗಿಣಿಗೆ ಪ್ರಕಾಶ್ ಬೆಳವಾಡಿ ಒಂದು ಕಥೆ ಹೇಳಿದ್ರಂತೆ. ಆ ಕಥೆ ಇಷ್ಟ ಆಗಿ ಇದೀಗ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ನಟಿಸಲು ರಾಗಿಣಿ ದ್ವಿವೇದಿ ಮನಸ್ಸು ಮಾಡಿದ್ದಾರೆ.

  ಸಂದರ್ಶನ: ನಾನು ರಾಗಿಣಿ: ಅವಕಾಶ ಸಿಕ್ಕರೆ ರಾಜಕಾರಣಿ.!ಸಂದರ್ಶನ: ನಾನು ರಾಗಿಣಿ: ಅವಕಾಶ ಸಿಕ್ಕರೆ ರಾಜಕಾರಣಿ.!

  ಸಿನಿಮಾದಲ್ಲಿ ಇದ್ಯಾ ವಿವಾದಾತ್ಮಕ ವಿಷಯ.?

  ಸಿನಿಮಾದಲ್ಲಿ ಇದ್ಯಾ ವಿವಾದಾತ್ಮಕ ವಿಷಯ.?

  ಪ್ರಕಾಶ್ ಬೆಳವಾಡಿ ಕೈಗೆತ್ತಿಕೊಂಡಿರುವ ಕಥೆ ಬಹಳ ವಿಭಿನ್ನವಾಗಿದ್ಯಂತೆ. ಇಂತಹ ಕಥೆಯನ್ನ ಇಟ್ಟುಕೊಂಡು ಚಿತ್ರ ಮಾಡುವುದು ತುಂಬಾ ರಿಸ್ಕಿ. ವಿವಾದ ಉಂಟು ಮಾಡಿದ ಒಂದು ವಿಷಯ ಈ ಚಿತ್ರದಲ್ಲಿ ಇದೆ. ಇದೊಂದು ಸೆನ್ಸೇಷನಲ್ ಸಬ್ಜೆಕ್ಟ್ ಅಂತಾರೆ ನಟಿ ರಾಗಿಣಿ ದ್ವಿವೇದಿ. ಹಾಗಾದ್ರೆ, ಅಂತಹ ವಿವಾದ ಯಾವುದು ಅಂತ ರಾಗಿಣಿ ದ್ವಿವೇದಿ ಬಳಿ ಪ್ರಶ್ನೆ ಮಾಡಿದರೆ ಸದ್ಯಕ್ಕೆ ಸಸ್ಪೆನ್ಸ್ ಅಂತ ಉತ್ತರ ಕೊಡುತ್ತಾರೆ.

  ವಿದೇಶದಲ್ಲಿ 'ಅಧ್ಯಕ್ಷ': ಹೆಚ್ಚಾಯ್ತು ಶರಣ್ - ರಾಗಿಣಿ ನಗುವಿನ ಸದ್ದುವಿದೇಶದಲ್ಲಿ 'ಅಧ್ಯಕ್ಷ': ಹೆಚ್ಚಾಯ್ತು ಶರಣ್ - ರಾಗಿಣಿ ನಗುವಿನ ಸದ್ದು

  ಯಾವಾಗಿಂದ ಸಿನಿಮಾ ಶುರು.?

  ಯಾವಾಗಿಂದ ಸಿನಿಮಾ ಶುರು.?

  ಪ್ರಕಾಶ್ ಬೆಳವಾಡಿ-ರಾಗಿಣಿ ದ್ವಿವೇದಿ ಕಾಂಬಿನೇಶನ್ ನಲ್ಲಿ ಮೂಡಿ ಬರುವ ಚಿತ್ರ ಮುಂದಿನ ವರ್ಷದ ಮೇ ತಿಂಗಳ ಹೊತ್ತಿಗೆ ಸೆಟ್ಟೇರಲಿದ್ದು, ಇಡೀ ಚಿತ್ರ ಅಮೇರಿಕಾದಲ್ಲಿ ಚಿತ್ರೀಕರಣಗೊಳ್ಳಲಿದೆ. ಶ್ರೀಮಂತ ಹುಡುಗಿಯಾಗಿ ನಟಿ ರಾಗಿಣಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ರಾಗಿಣಿ ಮಾಡಿದ ಚಿತ್ರ ಎಷ್ಟು?ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ರಾಗಿಣಿ ಮಾಡಿದ ಚಿತ್ರ ಎಷ್ಟು?

  ಪ್ರಕಾಶ್ ಬೆಳವಾಡಿ ಕುರಿತು...

  ಪ್ರಕಾಶ್ ಬೆಳವಾಡಿ ಕುರಿತು...

  'ಕಾನೂರು ಹೆಗ್ಗಡತಿ', 'ಮತದಾನ', 'ಉತ್ತಮ ವಿಲನ್', 'ಲಾಸ್ಟ್ ಬಸ್', 'ಇಷ್ಟಕಾಮ್ಯ', 'ಸಾಹೋ' ಮುಂತಾದ ಚಿತ್ರಗಳಲ್ಲಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. 2003 ರಲ್ಲಿ ಬಿಡುಗಡೆ ಆದ 'ಸ್ಟಂಬಲ್' ಎಂಬ ಆಂಗ್ಲ ಚಿತ್ರವನ್ನ ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದರು. ಆ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಇದೀಗ ಲಾಂಗ್ ಗ್ಯಾಪ್ ಬಳಿಕ ಪ್ರಕಾಶ್ ಬೆಳವಾಡಿ ನಿರ್ದೇಶನದ ಕಥೆ ಮುಖ ಮಾಡಿದ್ದಾರೆ. ಅವರ ಹೊಸ ಚಿತ್ರಕ್ಕಿನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ.

  English summary
  Kannada Actress Ragini Dwivedi to act in Prakash Belawadi directorial film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X