»   » ತುಪ್ಪದ ಬೆಡಗಿ ರಾಗಿಣಿಗೆ ತುಳು ಚಿತ್ರದಲ್ಲಿ ನಟಿಸುವ ಆಸೆ

ತುಪ್ಪದ ಬೆಡಗಿ ರಾಗಿಣಿಗೆ ತುಳು ಚಿತ್ರದಲ್ಲಿ ನಟಿಸುವ ಆಸೆ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ನಾನಾ ಕಾರಣಗಳಿಂದ ಫೇಮಸ್ ಆಗಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಹೊಸ ಆಸೆ ಹುಟ್ಟಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಾಗಿಣಿ ತುಳು ಚಿತ್ರದಲ್ಲಿ ನಟನೆ ಮಾಡಬೇಕೆನ್ನುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಕನ್ನಡ ಚಿತ್ರಗಳಾದ 'ರಣಚಂಡಿ', 'ಅಮ್ಮ', ಹಾಗೂ 'ಪರಪಂಚ' ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಾಗಿಣಿ ಮನಸ್ಸು ತುಳು ಚಿತ್ರಗಳತ್ತ ವಾಲಿದ್ದು, ಅವಕಾಶ ಸಿಕ್ಕರೆ ಖಂಡಿತವಾಗಲೂ ತುಳು ಸಿನೆಮಾದಲ್ಲಿ ನಟಿಸಲು ರೆಡಿ ಎಂದಿದ್ದಾರೆ.

Ragini Dwivedi wants to act in Thulu Movies

ವರ್ಷಕ್ಕೆ ಒಂದು ಎರಡು ಸಿನೆಮಾಗಳನ್ನು ಮಾತ್ರ ತೆರೆಗೆ ತರುತ್ತಿದ್ದ ತುಳು ಚಿತ್ರರಂಗ ಇದೀಗ ಹೆಚ್ಚು-ಹೆಚ್ಚು ಸಿನೆಮಾ ಮಾಡುವ ಹುರುಪಿನಲ್ಲಿದೆ. ಮಾತ್ರವಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ ಗಳು ತುಳು ಚಿತ್ರದಲ್ಲಿ ನಟಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ತುಳು ಚಿತ್ರ 'ಎಕ್ಕ-ಸಕ' ದಲ್ಲಿ ಟೆನ್ನಿಸ್ ಕೃಷ್ಣ, 'ಒರಿಯನ್ ತೂಂಡ ಒರಿಯಗಾಪುಜಿ' ಚಿತ್ರದಲ್ಲಿ ಪ್ರಜ್ಜು ಪೂವಯ್ಯ, ರೇಖಾದಾಸ್ ಸೇರಿದಂತೆ ಅನೇಕ ಕನ್ನಡ ಕಲಾವಿದರು ಕಾಣಿಸಿಕೊಂಡಿದ್ದರು.

Ragini Dwivedi wants to act in Thulu Movies

ಆನಂದ ಪಿ.ರಾಜು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜುಗಾರಿ' ಚಿತ್ರದ ಮೂಹೂರ್ತ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು. ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮೊದಲ ಶಾಟ್ ಗೆ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು,

ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುವಿನಲ್ಲಿ ಉತ್ತಮ ಕಥೆ ದೊರೆತರೆ ನಾನು ನಟಿಸಲು ಸಿದ್ಧ ಎನ್ನುವ ಮೂಲಕ ತುಳು ಚಿತ್ರರಂಗಕ್ಕೆ ಹುಮ್ಮಸ್ಸು ತುಂಬಿದ್ದಾರೆ.

English summary
Kannada Actress Ragini Dwivedi expressed her desire to work in Thulu Movie Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada