»   » ಲೂಸ್ ಮಾದನ ಕೆನ್ನೆಗೆ ರಾಗಿಣಿ ಬಿಸಿಬಿಸಿ ಚುಂಬನ

ಲೂಸ್ ಮಾದನ ಕೆನ್ನೆಗೆ ರಾಗಿಣಿ ಬಿಸಿಬಿಸಿ ಚುಂಬನ

By: ಉದಯರವಿ
Subscribe to Filmibeat Kannada

ಇದೇ ಮೊದಲ ಬಾರಿಗೆ ನಮ್ಮ ಲೂಸ್ ಮಾದ ಯೋಗೀಶ್ ಅವರಿಗೆ ಘಮಘಮ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿಸಿಬಿಸಿ ಉಮ್ಮಾ ಕೊಟ್ಟಿದ್ದಾರೆ. ಈ ಕಿಸ್ಸಿಂಗ್ ಸನ್ನಿವೇಶವನ್ನು ಯೋಗರಾಜ್ ಭಟ್ ಮೂವಿ ಬ್ಯಾನರ್ ಚಿತ್ರ 'ಪರಪಂಚ' ಚಿತ್ರೀಕರಿಸಿಕೊಳ್ಳಲಾಗಿದೆ.

ಈ ಚಿತ್ರದಲ್ಲಿ ಯೋಗೀಶ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದ ಹಾಡೊಂದರಲ್ಲಿ ಅವರು ಕಾಣಿಸಲಿದ್ದಾರೆ. ಲೂಸ್ ಮಾದನಿಗೆ ಜೊತೆಯಾಗಿ ರಾಗಿಣಿ ಸೊಂಟ ಬಳುಕಿಸಲಿದ್ದಾರೆ. ಈ ಹಾಡಿನಲ್ಲಿ ಬಿಸಿಬಿಸಿ ಚುಂಬನ ದೃಶ್ಯ ಬರುತ್ತದೆ.

Ragini and Loose Mada Yogesh kissing scene in Parapancha

ಕ್ರಿಶ್ ಜೋಶ್ ಆಕ್ಷನ್ ಕಟ್ ಹೇಳುತ್ತಿರುವ 'ಪರಪಂಚ' ಚಿತ್ರ ನಾನಾ ಕಾರಣಗಳಿಂದ ಸದ್ದು ಮಾಡುತ್ತಿದೆ. ಚಿತ್ರದ ನಾಯಕ ನಟ ದಿಗಂತ್ ಅವರು ಬೆತ್ತಲೆ ಓಡುತ್ತಿರುತ್ತಿರುವ ಪೋಸ್ಟರ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಬಳಿಕ ಅದು ಬೆತ್ತಲೆ ಅಲ್ಲ ದಿಗಂತ್ ಚಡ್ಡಿ ತೊಟ್ಟಿದ್ದಾರೆ ಎಂದು ಚಿತ್ರತಂಡ ಸಾಕ್ಷಿ ಸಮೇತ ಮತ್ತೊಂದು ಪೋಸ್ಟರ್ ಪ್ರಕಟಿಸುವ ಮೂಲಕ ಚರ್ಚೆಗೆ ಅಂತ್ಯ ಹಾಡಿತ್ತು. ಇನ್ನು ಚಿತ್ರದಲ್ಲಿ ರಾಗಿಣಿ ಅವರದು ಕಾಲ್ ಗರ್ಲ್ ಪಾತ್ರ. ಕಾಲ್ ಗರ್ಲ್ ಪಾತ್ರ ಮಾಡುತ್ತಿರುವುದಕ್ಕೆ ತಮಗೇನು ಸಂಕೋಚವಿಲ್ಲ. ಯಾಕೆಂದರೆ ತಾನೊಬ್ಬ ನಟಿ. ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸಬೇಕಾದದ್ದು ನನ್ನ ಧರ್ಮ ಎನ್ನುತ್ತಾರೆ ರಾಗಿಣಿ.

ಇನ್ನು ಚಿತ್ರದಲ್ಲಿ 'ಪರಪಂಚ' ಎಂಬುದು ಒಂದು ಬಾರ್ ಅಂಡ್ ರೆಸ್ಟೋರೆಂಟ್ ಅಂತೆ. ಅದರ ಟ್ಯಾಗ್ ಲೈನ್ 'ವೆಜ್ ಅಂಡ್ ನಾನ್ ವೆಜ್'. ಇಲ್ಲಿ ಮತ್ತೊಂದು 'ಕಳ್ಳ ಮಳ್ಳ ಸುಳ್ಳ' ರೀತಿಯ ಪಾತ್ರವನ್ನು ಪ್ರೇಕ್ಷಕರು ನಿರೀಕ್ಷಿಸಬಹುದೇನೋ. (ಏಜೆನ್ಸೀಸ್)

English summary
Actress Ragini and Yogish (Loose Mada) will be seen in a kissing scene in the film Parapancha. The film is being directed by Krish Joshi of Gandhi Smiles fame and under Yograj Bhat Movies banner.
Please Wait while comments are loading...