»   » ಪಡ್ಡೆಗಳಿಗೆ ಮತ್ತೊಮ್ಮೆ ರಾಗಿಣಿ ಘಮ ಘಮ ತುಪ್ಪ

ಪಡ್ಡೆಗಳಿಗೆ ಮತ್ತೊಮ್ಮೆ ರಾಗಿಣಿ ಘಮ ಘಮ ತುಪ್ಪ

Posted By:
Subscribe to Filmibeat Kannada
ತುಪ್ಪ ಬೇಕ ತುಪ್ಪ ನಾಟಿ ತುಪ್ಪ ಎಂದು ಕುಣಿದು ಪಡ್ಡೆಗಳ ಪಾಲಿಗೆ ನಂದಿನಿ ತುಪ್ಪವಾದ ತಾರೆ ರಾಗಿಣಿ ದ್ವಿವೇದಿ. ಈಗವರು ಮತ್ತೊಮ್ಮೆ ಪಡ್ಡೆಗಳಿಗೆ ರಸಗವಳ ನೀಡಲು ಬರುತ್ತಿದ್ದಾರೆ. ಈ ಬಾರಿ ತುಪ್ಪಾನೇ ಬಡಿಸುತ್ತಾರೋ ತುಪ್ಪದ ಜೊತೆಗೆ ಹೋಳಿಗೆಯನ್ನು ಹಾಕಿಸುತ್ತಾರೋ ನೋಡಬೇಕು.

ಸಿನಿಮಾಗೆ ಬಂದವರು ಐಟಂ ಸಾಂಗ್ ಗೆ ಒಂದಲ್ಲ ಒಂದು ದಿನ ಬರಲೇ ಬೇಕಲ್ಲವೆ? ಈಗ ಮತ್ತೆ ಐಟಂ ಸಾಂಗ್ ಗೆ ಮರಳಿದ್ದಾರೆ ರಾಗಿಣಿ. ಅದೂ ಹಾಸ್ಯನಟ ಶರಣ್ ಅವರ ಚಿತ್ರ 'ವಿ' ಸಿಂಬಲ್ ನ ಚಿತ್ರದಲ್ಲಿ ಸೊಂಟ ಬಳುಕಿಸಲಿದ್ದಾರೆ. ಈ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದ್ದು ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.

ಮೂರು ಹಾಡುಗಳಲ್ಲಿ ಒಂದು ಮಾತ್ರ ಬೊಂಬಾಟ್ ಐಟಂ ಹಾಡಂತೆ. ಆ ಹಾಡಿಗೇ ರಾಗಿಣಿ ಹೆಜ್ಜೆ ಹಾಕುತ್ತಿರುವುದು. ಆದರೆ ಇದನ್ನು ಐಟಂ ಎಂದು ಕರೆಯಲು ಅವರು ಸುತಾರಾಂ ಇಷ್ಟಪಡುತ್ತಿಲ್ಲ. ಬದಲಾಗಿ 'ಸ್ಪೆಷಲ್ ಸಾಂಗ್' ಎಂದು ಕರೆಯುತ್ತಿದ್ದಾರೆ. ಸ್ಪೆಷಲ್ ಸಾಂಗ್ ಎಂದರೆ ಸ್ಪೆಷಲ್ ಐಟಂ ಸಾಂಗ್ ಇರಬಹುದೇ?

ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಈಗಾಗಲೆ ರಾಗಿಣಿ ಈ ಹಾಡಿಗೆ ರಿಹರ್ಸಲ್ ಮಾಡಿ ರೆಡಿಯಾಗಿದ್ದಾರೆ. ಇನ್ನೇನಿದ್ದರೂ ಕೆಮೆರಾದಲ್ಲಿ ಬಂಧಿಸುವುದೊಂದು ಬಾಕಿ ಇದೆ. ಈ ಬಗ್ಗೆ ವಿವರ ನೀಡಿರುವ ಚಿತ್ರದ ನಿರ್ಮಾಪಕ ಮೋಹನ್ ಛಾಬ್ರಿಯಾ ಮಾತನಾಡುತ್ತಾ....

"ರಾಗಿಣಿ ಅವರು ಆ ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದಾರಂತೆ ಈ ಚಿತ್ರದಲ್ಲಿ ಕುಣಿದಿದ್ದಾರಂತೆ ಎಂಬ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿವೆ. ಆದರೆ ಅವೆಲ್ಲ ಅಂತೆಕಂತೆ ಸುದ್ದಿಗಳು. ಆದರೆ ನಮ್ಮ ಚಿತ್ರದಲ್ಲಂತೂ ಖಂಡಿತ ಅವರು ಕುಣಿಯುತ್ತಿದ್ದಾರೆ. ಕೈಲಾಶ್ ಖೇರ್ ಹಾಡಿರುವ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ" ಎಂದಿದ್ದಾರೆ ಛಾಬ್ರಿಯಾ.

ನಂದಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಾಗಿಣಿ 50 ಮಂದಿ ಸಹನರ್ತಕಿರಯ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. "ಮೂರು ವಿಭಿನ್ನ ಸೆಟ್ ಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗುತ್ತದೆ. ಇನ್ನೊಂದು ವಾರದಲ್ಲಿ ಹಾಡಿನ ಚಿತ್ರೀಕರಣ" ಎಂದು ರಾಗಿಣಿ ಸಹ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದಾರೆ. (ಏಜೆನ್ಸೀಸ್)

English summary
'Thuppa beka thuppa...' item girl Ragini Dwivedi accepts onemore special number with Sharan in his new film whose title is the victory symbol. The song featuring her with Sharan will be choreographed by Imran Sardaria.
Please Wait while comments are loading...