For Quick Alerts
  ALLOW NOTIFICATIONS  
  For Daily Alerts

  ಬುರ್ಕಾ ಧರಿಸಿ ಬಂದ ರಾಗಿಣಿಯ ಹಿಂದಿನ ರಹಸ್ಯವೇನು?

  By Pavithra
  |

  'ದಿ ಟೆರರಿಸ್ಟ್' ರಾಗಿಣಿ ದ್ವಿವೇದಿ ಅಭಿನಯ ಮಾಡಿರುವ ಹೊಸ ಸಿನಿಮಾ. 'ರೋಮಿಯೋ' ಸಿನಿಮಾ ಖ್ಯಾತಿಯ ನಿರ್ದೇಶಕ ಪಿ ಸಿ ಶೇಖರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ನಿನ್ನೆಯಷ್ಟೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ವಿಶೇಷ ಎಂದರೆ ಸಿನಿಮಾದಲ್ಲಿ ನಟಿ ರಾಗಿಣಿ ಬುರ್ಕಾ ಧರಿಸಿ ಇದೇ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

  ಚಿತ್ರದ ಪೋಸ್ಟರ್ ಮೂಲಕವೇ ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸುವ ಪ್ರಯತ್ನ ಮಾಡಿರುವ ಸಿನಿಮಾತಂಡ ಆರಂಭದಲ್ಲೇ ಯಶಸ್ಸು ಗಳಿಸಿರುವ ಸೂಚನೆ ಸಿಗುತ್ತಿದೆ. ಇದೇ ಮೊದಲ ಬಾರಿಗೆ ಬುರ್ಕಾ ಧರಿಸಿ ನಮಾಜ್ ಮಾಡುತ್ತಿರುವ ರಾಗಿಣಿ ಲುಕ್ ಸಿನಿಮಾ ಪ್ರಿಯರಿಗೆ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸುತ್ತಿದೆ.

  'ದಿ ಟೆರರಿಸ್ಟ್' ಮುಖವಾಡ ಕಳಚಲಿದ್ದಾರೆ ರೆಬೆಲ್ ಸ್ಟಾರ್'ದಿ ಟೆರರಿಸ್ಟ್' ಮುಖವಾಡ ಕಳಚಲಿದ್ದಾರೆ ರೆಬೆಲ್ ಸ್ಟಾರ್

  ಇನ್ನು ವಿಶೇಷ ಎಂದರೆ ರಾಗಿಣಿ ಅವರ ಒಂದು ಪೋಸ್ಟರ್ ನಲ್ಲಿ ಕೆನ್ನೆ ಮೇಲೆ ಗಾಯವಾಗಿರುವ ಗುರುತು ಕೂಡ ಕಾಣಿಸಿಕೊಳ್ಳುತ್ತಿದೆ. ಹಾಗಾದರೆ ರಾಗಿಣಿ ಚಿತ್ರದಲ್ಲಿ ಟೆರರಿಸ್ಟ್ ಆಗಿರುತ್ತಾರಾ? ಅಥವಾ ಈ ಹಿಂದಿನ ಸಿನಿಮಾಗಳ ತರ ಟೆರರಿಸ್ಟ್ ಗಳನ್ನ ಸೆರೆ ಹಿಡಿಯುವ ಪೊಲೀಸ್ ಅಧಿಕಾರಿ ಆಗಿರುತ್ತಾರಾ? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇದಕ್ಕೆ ಉತ್ತರ ಸಿಗಬೇಕು ಎಂದರೆ ತೆರೆ ಮೇಲೆ ಸಿನಿಮಾ ನೋಡಬೇಕು.

  ಇನ್ನು 'ದಿ ಟೆರರಿಸ್ಟ್' ಚಿತ್ರವನ್ನು ಪಿ ಸಿ ಶೇಖರ್ ನಿರ್ದೇಶನ ಮಾಡಿದ್ದು, ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲಂಕಾರ್ ಸಂತಾನಂ ಎನ್ನುವವರು ಚಿತ್ರಕ್ಕೆ ಬಂಡವಾಳ ಹಾಕಿದ್ದು, ಮುರಳಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. 'ರಾಗ' ಸಿನಿಮಾದ ನಂತರ ಸಚಿನ್ ಜಗದೀಶ್ವರ್ ಮತ್ತೆ ಪಿ ಸಿ ಶೇಖರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಸಿನಿಮಾನ್ನು ತೆರೆಗೆ ತರಲಿದ್ದಾರೆ.

  English summary
  Actress Ragini will be seen as a Muslim girl in Kannada film The Terrorist. The film directed by PC Shekhar. Ragini is acting as a heroine in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X