Just In
Don't Miss!
- News
ಟ್ರಂಪ್ ಹಿಂಬಾಲಕರಯಿಲ್ಲದೆ ಜೋ ತೆಕ್ಕೆಗೆ @POTUS ಖಾತೆ
- Sports
ಐಎಸ್ಎಲ್: ಚೆನ್ನೈಯಿನ್ ವಿರುದ್ಧ ಒತ್ತಡವೇ ಇಲ್ಲವೆಂದ ಬಾಗನ್ ಕೋಚ್
- Automobiles
ಪ್ರತಿ ಚಾರ್ಜ್ 150 ಕಿ.ಮೀ ಮೈಲೇಜ್ ನೀಡುವ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಕೊಮಾಕಿ
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಗಿಣಿಯನ್ನು ಪ್ರೀತಿಸಿದ್ದೇ ತಪ್ಪಾಯ್ತು: ಡ್ರಗ್ಸ್ ಪ್ರಕರಣ ಆರೋಪಿ ಶಿವಪ್ರಕಾಶ್
ನನಗೂ ಡ್ರಗ್ಸ್‌ಗೂ ಸಂಬಂಧವೇ ಇಲ್ಲ, ರಾಗಿಣಿಯ ಹಾಲಿ ಬಾಯ್‌ಫ್ರೆಂಡ್ ರವಿಪ್ರಕಾಶ್ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾನೆ ಎಂದು ಡ್ರಗ್ಸ್ ಪ್ರಕರಣದ ಆರೋಪಿ ಶಿವಪ್ರಕಾಶ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ರಾಗಿಣಿ ಹಾಗೂ ನನ್ನ ಸಂಬಂಧ ಮುಗಿದು ಮೂರು ವರ್ಷ ಆಗಿದೆ, ನಾನು ರಾಗಿಣಿಯನ್ನು ಇಷ್ಟು ಪಟ್ಟಿದ್ದು ನಿಜ, ಪ್ರಪೋಸ್ ಮಾಟಿದ್ದು ನಿಜ, ರಾಗಿಣಿಯನ್ನು ಮದುವೆ ಆಗಬೇಕು ಅಂತ ನಿರ್ಧಾರ ಸಹ ಮಾಡಿದ್ದೆ 2017 ರಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ ಕೆರಿಯರ್ ಬಗ್ಗೆ ಯೋಚನೆ ಮಾಡ್ತಿದ್ದೀನಿ ಬೇಡ ಅಂದಳು ಎಂದು ಮಾಹಿತಿ ನೀಡಿದ್ದಾರೆ ಶಿವಪ್ರಕಾಶ್.
'ಆಗ ಇಬ್ಬರು ಒಪ್ಪಂದದ ಮೇಲೆಯೇ ದೂರ ಆದೇವು. ಆಗಿನಿಂದ ನನ್ನ ಸಂಪರ್ಕದಲ್ಲಿ ರಾಗಿಣಿ ಇಲ್ಲ. ಖಾಸಗಿ ಹೋಟೆಲ್ ನಲ್ಲಿ ನಡೆದ ಗಲಾಟೆಯಲ್ಲಿಯೂ ನಮ್ಮ ಮೇಲೆ ರವಿಶಂಕರ್ ಸುಳ್ಳು ಕೇಸ್ ನೀಡಿದ್ದ. ಪೊಲೀಸರ ವಿಚಾರಣೆಯಲ್ಲಿ ನಮ್ಮ ಮೇಲಿನ ಆರೋಪ ಸುಳ್ಳು ಅಂತ ತೀರ್ಮಾನ ಆಯ್ತು' ಎಂದಿದ್ದಾರೆ ಶಿವಪ್ರಕಾಶ್.

ಬೇಕೆಂದೆ ನನ್ನ ಹೆಸರು ಸೇರಿಸಲಾಗಿದೆ: ಶಿವಪ್ರಕಾಶ್
ಈಗ ಮತ್ತೆ ರವಿಶಂಕರ್ ಬೇಕೆಂದೇ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾನೆ. ನನಗೂ ಡ್ರಗ್ಸ್ ಗೂ ಸಂಬಂಧವಿಲ್ಲ ಅದೆಲ್ಲಾ ದೂರದ ಮಾತು, ನಾನು ಡ್ರಗ್ಸ್ ಸೇವಿಸಿಲ್ಲ ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ ಎಂದರು.

ಸಿಸಿಬಿ ಕರೆದಾಗೆಲ್ಲಾ ಬರುತ್ತೇನೆ: ಶಿವಪ್ರಕಾಶ್
'ಇಷ್ಟು ದಿನ ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ, ನಿರೀಕ್ಷಣಾ ಜಾಮೀನಿಗಾಗಿ ಕಾಯುತ್ತಿದ್ದೆ ಪ್ರಕರಣ ಕೋರ್ಟ್ ನಲ್ಲಿ ಇರೋದ್ರಿಂದ ಹೆಚ್ಚಿಗೆ ನಾನು ಮಾತನಾಡಲ್ಲ ನಾಳೆಯೂ ತನಿಖಾಧಿಕಾರಿಗಳು ವಿಚಾರಣೆಗೆ ಬರಲು ಹೇಳಿದ್ದಾರೆ ಬರ್ತೀನಿ' ಎಂದರು ಶಿವಪ್ರಕಾಶ್.

ರವಿಪ್ರಕಾಶ್ ಬಂಧನವಾಗಿದೆ
ಡ್ರಗ್ಸ್ ಪ್ರಕರಣದಲ್ಲಿ ಶಿವಪ್ರಕಾಶ್ ಸಹ ಪ್ರಮುಖ ಆರೋಪಿ. ಈ ಹಿಂದೆ ರಾಗಿಣಿಯ ಬಾಯ್‌ಫ್ರೆಂಡ್ ಆಗಿದ್ದರು ಶಿವಪ್ರಕಾಶ್. ಆ ನಂತರ ರಾಗಿಣಿಯ ಮತ್ತೊರ್ವ ಬಾಯ್‌ಫ್ರೆಂಡ್ ರವಿಪ್ರಕಾಶ್ ಎಂಬುವರ ಜೊತೆ ಹೋಟೆಲ್ ಒಂದರಲ್ಲಿ ಜಗಳವಾಡಿ ಸುದ್ದಿಗೆ ಬಂದಿದ್ದರು. ರವಿಪ್ರಕಾಶ್ ಸಹ ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ.

ನ್ಯಾಯಾಂಗ ಬಂಧನದಲ್ಲಿ ರಾಗಿಣಿ
ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಈಗಾಗಲೇ ಸಂಜನಾ ಗಲ್ರಾನಿಗೆ ಜಾಮೀನು ದೊರೆತಿದೆ. ಆದರೆ ರಾಗಿಣಿ ದ್ವಿವೇದಿ ಇನ್ನೂ ನ್ಯಾಯಾಂಗ ಬಂಧನದಲ್ಲಿಯೇ ಮುಂದುವರೆದಿದ್ದಾರೆ.