ಎಲ್ಲಾ ಹೊರಗಿನ ಸೆಲೆಬ್ರಿಟಿಗಳು ಎಲ್ಲಿದ್ದೀರಾ? ಡಾ.ರಾಜ್ ಮೊಮ್ಮಗನ ಬೇಸರ
Recommended Video
ಬೇರೆ ಭಾಷೆಯ ಸೆಲೆಟ್ರಿಟಿಗಳು, ದೊಡ್ಡ ದೊಡ್ಡ ಸ್ಟಾರ್ಸ್, ಕ್ರಿಕೆಟ್ ಸ್ಟಾರ್ಸ್, ರಾಜಕಾರಣಿಗಳು ಈಗ ಎಲ್ಲಿದ್ದಾರೆ. ಕರ್ನಾಟಕದಲ್ಲಿ ಉಂಟಾದ ಬೀಕರ ಪ್ರವಾಹ ಅವರ ಕಣ್ಣಿಗೆ ಬಿದ್ದಿಲ್ಲವಾ. ಕರ್ನಾಟಕದ ಬಗ್ಗೆ ಅವರಿಗೆಲ್ಲ ಯಾಕಿಷ್ಟು ತಾತ್ಸಾರ? ಎಂದು ಡಾ.ರಾಜು ಕುಮಾರ್ ಮೊಮ್ಮಗ ಯುವರಾಜ್ ರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಬಗ್ಗೆ ಯುವರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೀಕರ ಪ್ರವಾಹದಿಂದ ಲಕ್ಷಾಂತರ ಜನ ಮನೆ ಮಟ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಒಂದು ಹೊತ್ತಿನ ಊಟಕ್ಕು ಪರದಾಡುವ ಸ್ಥಿತಿ ಉಂಟಾಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವಿನ ಅಗತ್ಯವಿದೆ. ಸಾಕಷ್ಟು ಮಂದಿ ತಮ್ಮ ಕೈಲಾದಷ್ಟು ನೆರವು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರರಾಜ್ಯದ ಸ್ಟಾರ್ಸ್, ಸೆಲೆಬ್ರೆಟಿಗಳು ಈಗ ಎಲ್ಲಿದ್ದಾರೆ ಎಂದು ಯುವ ರಾಜ್ ಕುಮಾರ್ ಬೇಸರ ಹೊರಹಾಕಿದ್ದಾರೆ.

ಪರಭಾಷೆಯ ಸ್ಟಾರ್ ಎಲ್ಲಿದ್ದೀರಾ?
ಕರ್ನಾಟಕದಲ್ಲಾದ ಬೀಕರ ಪ್ರವಾಹಕ್ಕೆ ಸಾಕಷ್ಟು ಜನರ ಬದುಕೇ ಕೊಚ್ಚಿ ಹೋಗಿದೆ. ನೆರೆ ಹಾವಳಿಯಿಂದ ಲಕ್ಷಂತರ ಜನ ಬೀದಿಗೆ ಬಂದಿದ್ದಾರೆ. ಇಡೀ ಕರ್ನಾಟಕ ನೋವಿನಲ್ಲಿದೆ. ಆದ್ರೆ ಪಕ್ಕದ ರಾಜ್ಯದವರು ಮಾತ್ರ ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ. ಈ ಹಿಂದೆ ತಮಿಳುನಾಡು, ಕೇರಳದಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ ಇಡೀ ಕರ್ನಾಟಕ ಅವರ ನೋವಿಗೆ ಸ್ಪಂದಿಸಿತ್ತು. ಆದ್ರೆ ಕರ್ನಾಟಕದಲ್ಲಿ ಉಂಟಾದ ಬೀಕರ ಪರಿಸ್ಥಿಯನ್ನು ನೋಡಿಯು ನೋಡದಂತೆ ಮೌನವಹಿಸಿರುವುದು ನಿಜಕ್ಕು ಬೇಸರತರಿಸುತ್ತೆ.

ಸಂತ್ರಸ್ತರ ಕಷ್ಟಕ್ಕೆ ಮಿಡಿದ ಕರ್ನಾಟಕ
ಈ ಬಗ್ಗೆ ಡಾ.ರಾಜ್ ಕುಟುಂಬದ ಕುಡಿ ಯುವರಾಜ್ ಕುಮಾರ್ "ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲ ಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದಾರೆ. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ, ಆಹಾರವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ನಾವು ಕನ್ನಡಿಗರು, ಇಲ್ಲಿನ ಸಂಘ ಸಂಸ್ಥೆಗಳು, ಸೇನೆ ದಳಗಳು, ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ"

ಹೊರಗಿನ ಸ್ಟಾರ್ಸ್ ಈಗ ಎಲ್ಲಿದ್ದೀರಾ?
"ಎಲ್ಲಾ ಹೊರಗಿನ ಸೆಲೆಬ್ರಿಟಿಗಳು, ಸ್ಟಾರ್ಸ್, ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು, ನಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು, ಮತ ಕೇಳಲು ಕರ್ನಾಟಕಕ್ಕೆ ಬರುವವರು ಎಲ್ಲಿದ್ದಾರೆ? ಇಲ್ಲಿ ಬರೋದು, ಸಹಾಯ ಮಾಡೋದು ಇರಲಿ, ನನಗೆ ಯಾರ ಟ್ವೀಟ್, ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರನ್ನು ಕಸ್ತೂರಿ ನಿವಾಸಕ್ಕೆ ಹೋಲಿಕೆ
"ಅಂದ ಹಾಗೆ ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಮ್ಮ ಕೋಟಿ ವಂದನೆಗಳು. ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ? ತಪ್ಪಿದರೆ ಕ್ಷಮೆ ಇರಲಿ. ಯಾರೇ ಬರಲಿ ಬಿಡಲಿ ನಮ್ಮವರ ಜೊತೆ, ಎಲ್ಲರ ಜೊತೆ ನಾವು ಇರೋಣ" ಎಂದು ಹೇಳುತ್ತ ಡಾ.ರಾಜ್ ಕುಮಾರ್ ಅಭಿನಯದ ಕಸ್ತೂರಿ ಸಿನಿಮಾ ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡುವ ಮೂಲಕ ಕನ್ನಡಿಗರನ್ನು ಕಸ್ತೂರಿ ನಿವಾಸಕ್ಕೆ ಹೋಲಿದ್ದಾರೆ.


Click it and Unblock the Notifications











