»   » ಮಾಲಿವುಡ್ ನಲ್ಲಿಯೂ ಮಿಂಚಲಾರಂಭಿಸಿದ ಕನ್ನಡಿಗ ರಾಜ್ ಶೆಟ್ಟಿ

ಮಾಲಿವುಡ್ ನಲ್ಲಿಯೂ ಮಿಂಚಲಾರಂಭಿಸಿದ ಕನ್ನಡಿಗ ರಾಜ್ ಶೆಟ್ಟಿ

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ', ನೋಡಿ ಈ ರೀತಿಯೂ ಸಿನಿಮಾ ಮಾಡಬಹುದಾ ಅಂತ ಸಿನಿಮಾರಂಗದ ಅದೆಷ್ಟೋ ಜನರು ಆಶ್ಚರ್ಯ ಪಟ್ಟಿದ್ದರು. ಬೋಳು ತಲೆ ಇರುವ ಜನರ ವ್ಯಥೆಯನ್ನ ಚಿತ್ರಕತೆಯನ್ನಾಗಿಸಿಕೊಂಡು ಸಿನಿಮಾ ನಿರ್ದೇಶನ ಮಾಡಿದ್ದ 'ರಾಜ್ ಬಿ ಶೆಟ್ಟಿ' ಈಗ ಡಿಮ್ಯಾಂಡ್ ಇರುವ ನಟ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಸಂಸ್ಥೆಯಲ್ಲಿ ಒಂದು ಸಿನಿಮಾ ಹಾಗೂ ಹೇಮಂತ್ ಅನ್ನೋ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಮತ್ತೊಂದು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ತಿಳಿದಿರುವ ವಿಚಾರ. ಈ ಸುದ್ದಿ ಇನ್ನೂ ಜನರ ಮನಸ್ಸಿನಿಂದ ಮರೆಯಾಗೋ ಮುಂಚೆಯೇ ರಾಜ್ ಬಿ ಶೆಟ್ಟಿ 'ಗಾಂಧಿ'ಯಾಗಿ ಬಂದಿದ್ದಾರೆ. ಅರೇ, ಇದೇನಿದು ಆರ್ಟ್ ಸಿನಿಮಾನಾ ಅನ್ಬೇಡಿ, ಇದು ಕಮರ್ಷಿಯಲ್ ಸಿನಿಮಾನೇ... ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ...

ರಾಜ್ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆ

'ಒಂದು ಮೊಟ್ಟೆಯ ಕಥೆ' ಸಿನಿಮಾ ಖ್ಯಾತಿಯ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯದ ಹೊಸ ಸಿನಿಮಾ ಫಿಕ್ಷನ್ (Fiction). ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಗಾಂಧಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಟೀಸರ್ ರಿಲೀಸ್ ಮಾಡಿರೋ ಚಿತ್ರತಂಡ, ನಾಯಕನ ಲುಕ್ ರಿವಿಲ್ ಮಾಡಿದೆ.

'ಮೊಟ್ಟೆ' ಖ್ಯಾತಿಯ ರಾಜ್ ಬಿ ಶೆಟ್ಟಿ ಎರಡನೇ ಸಿನಿಮಾ ಶುರುವಾಯ್ತು

ಹೊಸಬರಿಗೆ ನೀಡಿದ ಅವಕಾಶ

ಫಿಕ್ಷನ್ (Fiction) ಮಲಯಾಳಂ ಸಿನಿಮಾ. ಮಣಿಪಾಲದ ಅನೇಕ ವಿದ್ಯಾರ್ಥಿಗಳು ಸೇರಿ ಈ ಚಿತ್ರವನ್ನ ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಟೀಸರ್ ನಷ್ಟೇ ಚಿತ್ರೀಕರಣ ಮಾಡಿರೋ ತಂಡ ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಶುರು ಮಾಡಲಿದೆ.

ವಿಭಿನ್ನ ಸಿನಿಮಾಗಳ ಕಡೆ ಗಮನ

ಈ ಚಿತ್ರದ ಮೂಲಕ ಮಾಲಿವುಡ್ ಪ್ರವೇಶ ಮಾಡುತ್ತಿರೋ ನಟ ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರಗಳ ಕಡೆ ಮುಖ ಮಾಡುತ್ತಿದ್ದಾರೆ. ಫಿಕ್ಷನ್ ಕೂಡ ಎಕ್ಸ್ ಪೆರಿಮೆಂಟ್ ವಿಷಯ ಇರೋ ಚಿತ್ರ ಆಗಿರೋದ್ರಿಂದ ಒಪ್ಪಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಹೊಸಬರಿಗೆ ಪ್ರೋತ್ಸಾಹ ನೀಡೋ ಉದ್ದೇಶದಿಂದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಟೀಸರ್ ಗೆ ಉತ್ತಮ ಪ್ರತಿಕ್ರಿಯೆ

ನಿನ್ನೆಯಷ್ಟೇ ಬಿಡುಗಡೆಯಾಗಿರೋ ಫಿಕ್ಷನ್ ಸಿನಿಮಾ ಟೀಸರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಟೀಸರ್ ನೋಡಿದವರು ರಾಜ್ ಬಿ ಶೆಟ್ಟಿಯವರಿಂದ ಮತ್ತೊಂದು ವಿಭಿನ್ನ ಸಿನಿಮಾವನ್ನ ನಿರೀಕ್ಷೆ ಮಾಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

English summary
Raj B Shetty of 'Ondu Motteya Kathe' fame starrer Malayalam Film 'Fiction' teaser is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada