For Quick Alerts
  ALLOW NOTIFICATIONS  
  For Daily Alerts

  'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

  |

  ಕಳೆದ ವರ್ಷ ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ರಾಜ್ ಬಿ ಶೆಟ್ಟಿ ನಟನೆ ಜತೆಗೆ ನಿರ್ದೇಶಕನಾಗಿಯೂ ಬೃಹತ್ ಗೆಲುವು ಸಾಧಸಿದ್ದರು. ಈ ಬಿಗ್ ಹಿಟ್ ಬಳಿಕ ರಾಜ್ ಬಿ ಶೆಟ್ಟಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ನಿರ್ದೇಶಿಸುವುದಾಗಿ ಹಾಗೂ ಇದರಲ್ಲಿಯೂ ಸಹ ತಾವೇ ನಾಯಕನಾಗಿ ಕಾಣಸಿಕೊಳ್ಳುವುದಾಗಿ ಘೋಷಿಸಿದ್ದರು. ಇನ್ನು ಮೊದಲಿಗೆ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ನಿರ್ಮಾಪಕಿ ಹಾಗೂ ನಾಯಕಿ ಎಂದೂ ಸಹ ಘೋಷಣೆಯಾಗಿತ್ತು.

  ಹೌದು, ಆಪಲ್ ಬಾಕ್ಸ್ ಸ್ಟುಡಿಯೊಸ್ ಎಂಬ ತಮ್ಮದೇ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದ ನಟಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಣ್ಣ ಹಚ್ಚುವುದರ ಜತೆಗೆ ಬಂಡವಾಳವನ್ನೂ ಸಹ ಹಾಕಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ ಕೆಲ ದಿನಗಳ ಬಳಿಕ ಈ ಚಿತ್ರದಲ್ಲಿ ರಮ್ಯಾ ಕೇವಲ ನಿರ್ಮಾಪಕಿಯಾಗಿ ಕೆಲಸ ನಿರ್ವಹಿಸಲಿದ್ದು, ರಮ್ಯಾ ನಿರ್ವಹಿಸಬೇಕಿದ್ದ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿತ್ತು.

  ಈ ಹೊಸ ಅಪ್‌ಡೇಟ್ ಹೊರಬಿದ್ದ ಕೂಡಲೇ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಕೇವಲ ಹದಿನಾರು ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿ ಕುಂಬಳಕಾಯಿ ಹೊಡೆದಿತ್ತು. ಹೀಗೆ ವೇಗವಾಗಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಇನ್ನೂ ಸಹ ಘೋಷಿಸಬೇಕಿದೆ. ಇದರ ನಡುವೆ ನಟಿ ರವಿ ಸಿರಿಕುಮಾರ್ ಚಿತ್ರದಲ್ಲಿ ಪ್ರೇರಣ ಎಂಬ ಪಾತ್ರ ನಿರ್ವಹಿಸಲಿದ್ದು, ನಟ ರಾಜ್ ಬಿ ಶೆಟ್ಟಿ ಅನಿಕೇತ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ನಾಯಕ - ನಾಯಕಿಯ ಪ್ರತ್ಯೇಕ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿತ್ತು.

  ಈ ಬಾರಿ ನಾಯಕ ಹಾಗೂ ನಾಯಕಿ ಜತೆಗಿರುವ ಫಸ್ಟ್ ಲುಕ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಪೋಸ್ಟರ್ ಅನ್ನು ಚಿತ್ರದ ನಿರ್ಮಾಪಕಿ ರಮ್ಯಾ ಹಾಗೂ ಚಿತ್ರತಂಡದ ಇತರೆ ಸದಸ್ಯರು ಹಂಚಿಕೊಂಡಿದ್ದಾರೆ. ಪೋಸ್ಟರ್‌ಗಳು ಹಾಗೂ ಟೈಟಲ್ ಚಿತ್ರ ಲವ್ ಸ್ಟೋರಿ ಎಂಬುದನ್ನು ಹೇಳುತ್ತಿದ್ದು, ರಾಜ್ ಬಿ ಶೆಟ್ಟಿ ಚಿತ್ರದ ಒಳಗೆ ಯಾವ ರೀತಿಯ ಕಥಾಹಂದರ ಇಟ್ಟಿರುತ್ತಾರೆ ಎಂಬುದು ಬಿಡುಗಡೆಯಾದ ನಂತರವಷ್ಟೇ ತಿಳಿಯಲಿದೆ.

  English summary
  Raj B Shetty directional Swathi Mutthina Male Haniye first look is out now. Read on
  Tuesday, December 27, 2022, 20:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X