For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಮಗನ ಚಿತ್ರದಲ್ಲಿ ಅಪ್ಪನಾದ ಸ್ಟೈಲಿಶ್ ವಿಲನ್

  By Bharath Kumar
  |

  ರೆಬೆಲ್ ಸ್ಟಾರ್ ಅಂಬರೀಶ್ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಪೂಜೆ ಮುಗಿಸಿ ಶೂಟಿಂಗ್ ಆರಂಭಿಸಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಗಳಿಂದ ಹೆಚ್ಚು ಸದ್ದು ಮಾಡುತ್ತಿರುವ 'ಅಮರ್' ಚಿತ್ರದಲ್ಲಿ ಅಭಿಷೇಕ್ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

  ಈಗ ವಿಶೇಷ ಏನಪ್ಪಾ ಅಂದ್ರೆ, 'ಅಮರ್' ಚಿತ್ರದಲ್ಲಿ ಅಭಿಷೇಕ್ ಗೆ ಅಪ್ಪನಾಗಿ ಕನ್ನಡದ ಖ್ಯಾತ ಸ್ಟೈಲಿಶ್ ವಿಲನ್ ರಾಜ್ ದೀಪಕ್ ಶೆಟ್ಟಿ ಅಭಿನಯಿಸುತ್ತಿದ್ದಾರೆ.

  'ಶ್ರೀಕಂಠ', 'ಭರ್ಜರಿ', 'ಟೈಗರ್', 'ಅಸತೋಮ ಸದ್ಗಮಯ', 'ಪ್ರಯಾಣಿಕ ಗಮನಕ್ಕೆ' ಅಂತಹ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ರಾಜ್ ದೀಪಕ್ ಶೆಟ್ಟಿ ಈಗ ಮತ್ತೊಂದು ರೀತಿಯ ಸಾವಾಲಿನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

  ಹೀರೋ ಲುಕ್, ವಿಲನ್ ಖದರ್: ಸಕಲ ಪಾತ್ರಕ್ಕೂ ಸೈ ಎನ್ನುವ 'ಕಲಾವಿದ' ಹೀರೋ ಲುಕ್, ವಿಲನ್ ಖದರ್: ಸಕಲ ಪಾತ್ರಕ್ಕೂ ಸೈ ಎನ್ನುವ 'ಕಲಾವಿದ'

  ಸಾಮಾನ್ಯವಾಗಿ ಯುವ ಕಲಾವಿದರು ಸ್ಟೈಲ್ ಆಗಿ, ರಗಡ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡ್ತಾರೆ. ಇಷ್ಟು ಚಿಕ್ಕವಯಸ್ಸಿನಲ್ಲಿ ತಂದೆ ಪಾತ್ರನಾ ಎಂದು ಹಿಂದೆ ಸರಿಯುತ್ತಾರೆ. ಆದ್ರೆ, ಕಲಾವಿದನಿಗೆ ಪಾತ್ರ ಮುಖ್ಯ ಎನ್ನುವ ರಾಜ್ ದೀಪಕ್ ಶೆಟ್ಟಿ ತಂದೆಯಾಗಲು ಸೈ ಎಂದಿದ್ದಾರೆ.

  ಇನ್ನುಳಿದಂತೆ ನಟಿ ತಾನ್ಯ ಹೋಪ್ ಈ ಚಿತ್ರಕ್ಕೆ ನಾಯಕಿಯಾಗಿದ್ದು, ನಾಗಶೇಖರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  Kannada actor Raj deepak shetty will playing father role for ambarish son abhishek in the amar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X