»   » ಸಂಗೊಳ್ಳಿ ರಾಯಣ್ಣ ವಿಶೇಷ ಪ್ರದರ್ಶನಕ್ಕೆ ಅವ್ರು ಬರ್ಲಿಲ್ಲ

ಸಂಗೊಳ್ಳಿ ರಾಯಣ್ಣ ವಿಶೇಷ ಪ್ರದರ್ಶನಕ್ಕೆ ಅವ್ರು ಬರ್ಲಿಲ್ಲ

Posted By:
Subscribe to Filmibeat Kannada

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ವಿಶೇಷ ಪ್ರದರ್ಶನ ಸೋಮವಾರ (ನ 5) ನಗರದ ಕಾವೇರಿ ಚಿತ್ರಮಂದಿರದಲ್ಲಿ ಏರ್ಪಾಡಾಗಿತ್ತು. ಚಿತ್ರರಂಗದ ಗಣ್ಯಾತಿಗಣ್ಯರು ಈ ವಿಶೇಷ ಪ್ರದರ್ಶನಕ್ಕೆ ಆಗಮಿಸಿದ್ದರು.

ಸಂಜೆ ಆರು ಗಂಟೆಗೆ ಶುರುವಾಗ ಬೇಕಿದ್ದ ಈ ವಿಶೇಷ ಶೋ ರಾತ್ರಿ 7 ಗಂಟೆಗೆ ಆರಂಭವಾಯಿತು. ರೆಬೆಲ್ ಸ್ಟಾರ್ ಅಂಬರೀಶ್ ಅವರಿಗಾಗಿ ಕಾದು ನಂತರ ಚಿತ್ರ ಪ್ರದರ್ಶನ ಆರಂಭವಾಯಿತು ಎನ್ನುವುದು ಸುದ್ದಿ.

ಅಂಬರೀಶ್ ವಿದೇಶದಲ್ಲಿ ಇದ್ದಿದ್ದರಿಂದ ಸಂಗೊಳ್ಳಿ ರಾಯಣ್ಣ ಚಿತ್ರ ವೀಕ್ಷಿಸಲು ಬರಲಿಲ್ಲವಂತೆ.

ವಿಶೇಷ ಪ್ರದರ್ಶನಕ್ಕೆ ಆಗಮಿಸಿದ್ದ ಗಣ್ಯರನ್ನು ನಿರ್ಮಾಪಕ ಆನಂದ್ ಅಪ್ಪುಗೋಳ್, ನಿರ್ದೇಶಕ ನಾಗಣ್ಣ, ಚಿತ್ರಕ್ಕೆ ಸಂಭಾಷಣೆ ಬರೆದ ಕೇಶವಾದಿತ್ಯ ಆದರದಿಂದ ಬರಮಾಡಿಕೊಂಡರು.

ಈಗಾಗಲೇ ಜನರಿಂದ ಮತ್ತು ಮಾಧ್ಯಮಗಳಿಂದ ಭೇಷ್ ಅನಿಸಿಕೊಂಡಿರುವ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಚಿತ್ರರಂಗದ ಗಣ್ಯರು ಕೂಡಾ ಬಹುಪರಾಕ್ ಎಂದಿದ್ದಾರೆ.

ಸಂಗೊಳ್ಳಿ ರಾಯಣ್ಣ ಯುಗಳ ಗೀತೆ ಹಾಡುವುದಿಲ್ಲ. ಸಿಕ್ಕರೆ ಇಂತಹ ಗಂಡ ಸಿಗಬೇಕೆಂದು ಹೆಣ್ಣು ಕಲ್ಪಿಸಿಕೊಳ್ಳುತ್ತಾಳೆ. ಹಾಗಾಗಿ ಚಿತ್ರದಲ್ಲಿ ಒಂದು ಡ್ಯುಯೆಟ್ ಹಾಡು ಹಾಕಿದ್ದೇವೆ.

ಯಾರಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಈ ಹಾಡಿನಿಂದ ಕನ್ನಡಿಗರಿಗೆ, ಕನ್ನಡಪರ ಸಂಘಟನೆಗಳಿಗೆ ಮತ್ತು ದೇಶಭಕ್ತರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದು ನಿರ್ಮಾಪಕ ಅಪ್ಪುಗೋಳ್ ಹೇಳಿದ್ದಾರೆ.

ಸಂಗೊಳ್ಳಿ ರಾಯಣ್ಣ ವಿಶೇಷ ಪ್ರದರ್ಶನಕ್ಕೆ ಮುಖ್ಯವಾಗಿ ರಾಜ್ ಕುಟುಂಬ, ಅಂಬರೀಶ್ ಕುಟುಂಬ, ಸುದೀಪ್ ಬಂದಿರಲಿಲ್ಲ. ಸುದೀಪ್ ಈಗಾಗಲೇ ಚಿತ್ರ ವೀಕ್ಷಿಸಿದ್ದರಿಂದ ವಿಶೇಷ ಪ್ರದರ್ಶನಕ್ಕೆ ಬರಲಿಲ್ಲ ಎನ್ನಲಾಗಿದೆ.

ದರ್ಶನ್ ಕುಟುಂಬ ಸಮೇತ ಚಿತ್ರ ವೀಕ್ಷಿಸಲು ಆಗಮಿಸಿದ್ದರು. ದ್ವಾರಕೀಶ್, ಉಪೇಂದ್ರ, ಸುಧಾರಾಣಿ, ಸಾ.ರಾ.ಗೋವಿಂದು, ನಾಗತಿಹಳ್ಳಿ ಚಂದ್ರಶೇಖರ್, ಹರ್ಷಿಕಾ ಪೂಣಚ್ಚ, ವಿಜಯ್ ರಾಘವೇಂದ್ರ, ಶರಣ್, ಧ್ರುವ್, ಮುರಳಿ, ಶಿವಮಣಿ, ಫಣಿ ರಾಮಚಂದ್ರ ಮುಂತಾದವರು ಚಿತ್ರ ವೀಕ್ಷಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

English summary
Special screening of Krantiveera Sangolli Rayanna organized for film personalities on November 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada