For Quick Alerts
  ALLOW NOTIFICATIONS  
  For Daily Alerts

  ಬಾರೇ ಬಾರೇ ರಾಜಕುಮಾರಿ ಸಾಂಗ್​ ಹಿಟ್​ ಬೆನ್ನಲ್ಲೇ ತೆರೆ ಮೇಲೆ ಧುಮ್ಮಿಕ್ಕಲು ಸಿದ್ಧ '​ರಾಜ ರಾಣಿ ರೋರರ್ ರಾಕೆಟ್'

  |

  ಚಿತ್ರರಂಗದಲ್ಲಿ ದಿನ ದಿನವೂ ಹೊಸ ಪ್ರಯೋಗ ನಡೆಯುತ್ತಿರುತ್ತದೆ. ಜೊತೆಗೆ ಶೃದ್ಧೆಯಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ವ್ಯಕ್ತಿ ಕೂಡ ಬೆಳೆಯುತ್ತಾನೆ. ಅದಕ್ಕೆ ಸಾಕ್ಷಿ ಎಂಬಂತೆ ಚುಟು ಚುಟ ಹಾಡಿನ ಮೂಲಕ ಖ್ಯಾತಿ ಪಡೆದ ನೃತ್ಯ ನಿರ್ದೇಶಕ ಭೂಷಣ್​ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ನೃತ್ಯ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭೂಷಣ್​ ಇಂದು ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

  ಪುನೀತ್​ ರಾಜ್​ ಕುಮಾರ್​ ಅಭಿನಯದ ನಟಸಾರ್ವಭೌಮ, ರಿಷಬ್​ ಶೆಟ್ಟಿ ಅಭಿನಯದ ಬೆಲ್​ ಬಾಟಮ್​, ಶರಣ್​ ಅಭಿನಯದ ರ್ಯಾಂಬೊ-2 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ಭೂಷಣ್​ ಚುಟು..ಚುಟು..ಅಂತೈತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದರು. ಸಾಲು ಸಾಲು ಹಿಟ್ ​ ಸಿನಿಮಾಗಳ ನಾಯಕರಿಗೆ ಹೆಜ್ಜೆ ಹಾಕಿಸಿದ್ದ ಭೂಷಣ್,​ ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ​ ನಾಯಕ ನಟನಾಗಿ ಆಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

  ಕೆಂಪೇಗೌಡ ಮಾಗಡಿ ನಿರ್ದೇಶನದ ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಇದೇ ಸಪ್ಟೆಂಬರ್​ 23ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೊಸ ನಾಯಕನ ಪರಿಚಯದ ಜೊತೆಗೆ ಹೊಸ ಪ್ರಯೋಗ ಮಾಡಲು ಹೊರಟಿರುವ ರಾಜ ರಾಣಿ ರೋರರ್ ರಾಕೆಟ್ ಚಿತ್ರತಂಡಕ್ಕೆ ಲಕ್ಕಿ ಮ್ಯಾನ್​ ನಿರ್ದೇಶಕ ನಾಗೇಂದ್ರ ಪ್ರಸಾದ್​ ಸಾಥ್ ​ ನೀಡಿದ್ದಾರೆ. ಚಿತ್ರತಂಡವನ್ನು ಭೇಟಿಯಾಗಿರುವ ನಾಗೇಂದ್ರ ಪ್ರಸಾದ್,​ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

  ಇನ್ನು ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಬಾರೇ..ಬಾರೇ..ರಾಜಕುಮಾರಿ ಹಾಡು ಸಖತ್​ ಹಿಟ್​ ಆಗಿದ್ದು, ಸಂಜಿತ್​ ಹೆಗ್ಡೆ ಧ್ವನಿಗೆ ಕೇಳುಗರು ಮನಸೋತಿದ್ದಾರೆ. ಯೂಟ್ಯೂಬ್​ನಲ್ಲಿ ಈಗಾಗಲೇ 1 ಮಿಲಿಯನ್​ಗೂ ಅಧಿಕ ವ್ಯೂವ್​ ಕಂಡಿರುವ ಬಾರೇ..ಬಾರೇ..ರಾಜಕುಮಾರಿ ಹಾಡು ಇನ್ಸ್ಟಾಗ್ರಾಮ್​ ರೀಲ್ಸ್​ನಲ್ಲೂ ವೈರಲ್ ​ ಆಗಿದೆ. ಹಾಡಿನಲ್ಲಿ ನಟ ಭೂಷಣ್​ ಹಾಕಿರುವ ಸ್ಟೆಪ್ಸ್​ ಕೂಡ ವೈರಲ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಎಳೆಯರಿಂದ ಹಿರಿಯರವರೆಗೂ ಈ ಹಾಡಿಗೆ ಹೆಜ್ಜೆಗೆ ಹಾಕಿದ್ದಾರೆ.

  ರಾಜ ರಾಣಿ ರೋರರ್ ರಾಕೆಟ್ ಎನ್ನುವುದು ನಾಲ್ಕು ಪ್ರಮುಖ ಪಾತ್ರಗಳ ಹೆಸರಾಗಿದ್ದು, ಭೂಷಣ್​, ಮಾನ್ಯ, ಸಂತೋಷ್​, ಮನೋಜ್​ ಕುಮಾರ್​, ಎಂ.ಡಿ ಕೌಶಿಕ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರ್ ಚಿತ್ರದಲ್ಲಿ​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೆಂಪೇಗೌಡ ಮಾಗಡಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ರಾಜ ರಾಣಿ ರೋರರ್ ರಾಕೆಟ್ ಚಿತ್ರಕ್ಕೆ ಲೇಖನ ಕ್ರಿಯೇಷನ್ಸ್ ಲಾಂಛನದಲ್ಲಿ ನಾಗರಾಜ್ ಪಿ ಅಜ್ಜಂಪುರ ಬಂಡವಾಳ ಹೂಡಿದ್ದಾರೆ.

  English summary
  Raja Rani Roarer Rocket Movie Releasing on september 23.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X